Day: December 9, 2021

ಓಮಿಕ್ರಾನ್ ವೈರಸ್ ಭೀತಿ | ಅಂತರಾಷ್ಟ್ರೀಯ ವಿಮಾನ ಹಾರಾಟ ರದ್ದು ಮಾಡಿದ ಕೇಂದ್ರ ಸರಕಾರ

ನವದೆಹಲಿ: ದೇಶದಲ್ಲಿ ಒಮಿಕ್ರಾನ್ ಭೀತಿ ಹಿನ್ನೆಲೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಅಂತಾರಾಷ್ಟ್ರೀಯ ವಿಮಾನ ಹಾರಾಟ ರದ್ದು ಮಾಡಿ ಆದೇಶಿಸಿದೆ ಎಂದು ವರದಿಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಹೊಸ ವೈರಸ್ ಪತ್ತೆಯಾಗಿದೆ ಎಂದು ಹೇಳಿದ ಕೆಲವೇ ದಿನಗಳಲ್ಲಿ ಭಾರತಕ್ಕೂ ಕಾಲಿಟ್ಟಿತ್ತು.ಹೀಗಾಗಿ ದೇಶದೆಲ್ಲೆಡೆ ಒಮಿಕ್ರಾನ್ ವೈರಸ್ ಅನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, 2022ರ ಜನವರಿ 31ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ರದ್ದು ಮಾಡಿ ಆದೇಶಿಸಿದೆ ಎಂದು ವರದಿಯಾಗಿದೆ. ಸರಕು ಸಾಗಣೆ ವಿಮಾನಗಳನ್ನು ಹೊರತು ಪಡಿಸಿ …

ಓಮಿಕ್ರಾನ್ ವೈರಸ್ ಭೀತಿ | ಅಂತರಾಷ್ಟ್ರೀಯ ವಿಮಾನ ಹಾರಾಟ ರದ್ದು ಮಾಡಿದ ಕೇಂದ್ರ ಸರಕಾರ Read More »

ಬೆಂಗಳೂರು,:: ಚಿತ್ರಮಂದಿರದ ಕೆಳಗೆ ಮೊಸಳೆ ಇಟ್ಟುಕೊಂಡು ಮಾರುತ್ತಿದ್ದ ಇಬ್ಬರು ಆರೋಪಿಗಳ ಬಂಧನ. ಮೊಸಳೆ ಪೊಲೀಸ್ ವಶಕ್ಕೆ.

ಬೆಂಗಳೂರು,:: ಚಿತ್ರಮಂದಿರದ ಕೆಳಗೆ ಮೊಸಳೆ ಇಟ್ಟುಕೊಂಡು ಮಾರುತ್ತಿದ್ದ ಇಬ್ಬರು ಆರೋಪಿಗಳ ಬಂಧನ. ಮೊಸಳೆ ಪೊಲೀಸ್ ವಶಕ್ಕೆ. ಬೆಂಗಳೂರಿನ ಈಶ್ವರಿ ಚಿತ್ರಮಂದಿರ ಒಂದರ ಕೆಳಗೆ ನೀರಿನ ಟ್ಯಾಂಕಿನಲ್ಲಿ ಮೊಸಳೆ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜಯನಗರದ ಸೋಮೇಶ್ವರ ನಿವಾಸಿ ಅಬ್ದುಲ್ ಖಾಲಿದ್ ಹಾಗೂ ಕನಕಪುರದ ಕಲ್ಲಹಳ್ಳಿ ಯ ನಿವಾಸಿಗುರುರಾಜ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಚೆನ್ನಮ್ಮ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯ ಈಶ್ವರಿ ಥಿಯೇಟರ್ ಇರುವ ಕಟ್ಟಡ ಕೆಳಭಾಗದಲ್ಲಿ ಆರೋಪಿಗಳು ನೀರಿನ …

ಬೆಂಗಳೂರು,:: ಚಿತ್ರಮಂದಿರದ ಕೆಳಗೆ ಮೊಸಳೆ ಇಟ್ಟುಕೊಂಡು ಮಾರುತ್ತಿದ್ದ ಇಬ್ಬರು ಆರೋಪಿಗಳ ಬಂಧನ. ಮೊಸಳೆ ಪೊಲೀಸ್ ವಶಕ್ಕೆ. Read More »

ಕುಕ್ಕೆ ಸುಬ್ರಹ್ಮಣ್ಯ : ಪಾನಮತ್ತ ವ್ಯಕ್ತಿಯನ್ನು ಎಸೆದ ಆನೆ

ಕಡಬ: ದ.ಕ.ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆ ದೇವಸ್ಥಾನದ ಪ್ರಾಂಗಣದೊಳಗಡೆ ವ್ಯಕ್ತಿಯೋರ್ವನನ್ನು ಸೊಂಡಿಲಿನಿಂದ ಎತ್ತಿ ಎಸೆದ ಘಟನೆ ನಡೆದಿದೆ‌. ಎರಡು ವಾರಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕೊಂದು ಇತ್ತೀಚೆಗೆ ವೈರಲ್ ಆಗಿತ್ತು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ‘ಯಶಸ್ವಿನಿ’ ಎಂಬ ಆನೆಯಿಂದ ಎಸೆಯಲ್ಪಟ್ಟ ವ್ಯಕ್ತಿ ದೇವಸ್ಥಾನಕ್ಕೆ ರಾತ್ರಿಯ ಪೂಜೆಗೆಂದು ಬಂದಿದ್ದರು. ಅವರು ಆನೆಯ ಬಳಿಯಿಂದ ಹಾದು ಹೋಗುತ್ತಿರುವಾಗ ಹಠಾತ್ತನೆ ಸೊಂಡಿಲಿನಿಂದ ಎತ್ತಿ ಎಸೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆನೆಯ ಮಾವುತ, …

ಕುಕ್ಕೆ ಸುಬ್ರಹ್ಮಣ್ಯ : ಪಾನಮತ್ತ ವ್ಯಕ್ತಿಯನ್ನು ಎಸೆದ ಆನೆ Read More »

ಶರಣ್ ಪಂಪ್‌ವೆಲ್ ಅವರ ವ್ಯಾಟ್ಸಾಪ್ ಸಂದೇಶದ ರೀತಿಯಲ್ಲಿ ಎಡಿಟ್ ಮಾಡಿ ಸಂದೇಶ ರವಾನೆ | ಅಪಪ್ರಚಾರಕ್ಕೆ ವಿ.ಹಿಂ.ಪ,ಬಜರಂಗದಳ ಖಂಡನೆ

ಸಾಮಾಜಿಕ ಜಾಲತಾಣದಲ್ಲಿ ಶರಣ್ ಪಂಪ್ ವೆಲ್ ಹೆಸರಿನಲ್ಲಿ ಸಂದೇಶವೊಂದು ರವಾನೆಯಾಗಿದ್ದು, ಸದ್ಯ ಹಿಂದೂ ಕಾರ್ಯಕರ್ತರಲ್ಲಿ ಗೊಂದಲ ಹಾಗೂ ಅನುಮಾನಕ್ಕೆ ಕಾರಣವಾಗಿತ್ತು. ಆ ಸಂದೇಶಗಳು ಯಾವುವು? ಸ್ವತಃ ಪಂಪ್ ವೆಲ್ ಅವರೇ ರವಾನಿಸಿದ್ದಾರಾ? ಸದಾ ಹಿಂದೂ ಕಾರ್ಯಕರ್ತರ ಕಾಳಜಿ ವಹಿಸುವ ಬಲಿಷ್ಠ ನಾಯಕನ ಮನಸ್ಥಿತಿ ಇದೇನಾ ಎಂದು ಕೆಲವರು ಪ್ರಶ್ನಿಸಿದ್ದರೆ ಕೆಲವರು ಇದು ಅಪಪ್ರಚಾರದ ಇನ್ನೊಂದು ಮುಖ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಶರಣ್ ಪಂಪ್ ವೆಲ್ ಹೆಸರಿನಲ್ಲಿ ಸಂದೇಶ!! ಹಿಂದೂ ಕಾರ್ಯಕರ್ತರ ಹೆಣ ಬೀಳಬೇಕು- ಆಗ …

ಶರಣ್ ಪಂಪ್‌ವೆಲ್ ಅವರ ವ್ಯಾಟ್ಸಾಪ್ ಸಂದೇಶದ ರೀತಿಯಲ್ಲಿ ಎಡಿಟ್ ಮಾಡಿ ಸಂದೇಶ ರವಾನೆ | ಅಪಪ್ರಚಾರಕ್ಕೆ ವಿ.ಹಿಂ.ಪ,ಬಜರಂಗದಳ ಖಂಡನೆ Read More »

ಎಲ್ಲಾ ಸ್ಥಳೀಯ ಸಂಸ್ಥೆಯ ಸದಸ್ಯರಿಗೆ ಕೋಟ ಅವರಿಗೆ ಮತ ನೀಡುವಂತೆ ಸಂದೇಶ | ದ.ಕ.ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದಿಂದ ವಿನೂತನ ಪ್ರಯತ್ನ

ಮಂಗಳೂರು: ಡಿ.10ರಂದು ನಡೆಯಲಿರುವ ವಿಧಾನಪರಿಷತ್‌ ಚುನಾವಣೆಯ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯ ಎಲ್ಲಾ ಗ್ರಾ.ಪಂ ಹಾಗೂ ಸ್ಥಳೀಯ ಸಂಸ್ಥೆಯ ಸದಸ್ಯರಿಗೆ ದ.ಕ.ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ವತಿಯಿಂದ ಸುಮಾರು 6 ಸಾವಿರಕ್ಕೂ ಅಧಿಕ ಮಂದಿಗೆ Text message ಕಳುಹಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮತ ನೀಡುವಂತೆ ವಿನಂತಿಸಿದ್ದಾರೆ. ಈ ಸಂದೇಶ ಬಿಜೆಪಿ ಬೆಂಬಲಿತ ಸದಸ್ಯರಿಗೆ ಮಾತ್ರವಲ್ಲದೇ ಎಲ್ಲಾ ಪಕ್ಷದ ಸದಸ್ಯರಿಗೂ ಈ ಸಂದೇಶ ತಲುಪಿಸುವ ಕೆಲಸ ಮಾಡಲಾಗಿದೆ.ಈಗಾಗಲೇ ದ.ಕ.ಜಿಲ್ಲೆಯ ಬಿಜೆಪಿ ಸಾಮಾಜಿಕ ಜಾಲತಾಣ …

ಎಲ್ಲಾ ಸ್ಥಳೀಯ ಸಂಸ್ಥೆಯ ಸದಸ್ಯರಿಗೆ ಕೋಟ ಅವರಿಗೆ ಮತ ನೀಡುವಂತೆ ಸಂದೇಶ | ದ.ಕ.ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದಿಂದ ವಿನೂತನ ಪ್ರಯತ್ನ Read More »

ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವ,ಆಶ್ಲೇಷ ಬಲಿ ಸೇವೆ

ಸವಣೂರು : ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ(ವಲ್ಮೀಕ) ಆರಾಧನೆ ನಡೆಯುವ ಏಕೈಕ ದೇವಳವಾದ ಕೊಳ್ತಿಗೆ ಗ್ರಾಮದ ನಳೀಲು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಿತು. ಡಿ.8 ರಂದು ರಾತ್ರಿ ವಿಶೇಷ ಕಾರ್ತಿಕಪೂಜೆ ನಡೆಯಿತು. ಡಿ.9ರಂದು ಚಂಪಾಷಷ್ಠಿ ಮಹೋತ್ಸವ,ಆಶ್ಲೇಷ ಬಲಿ ಸೇವೆ, ನಾಗತಂಬಿಲ,ಕಾರ್ತಿಕ ಪೂಜೆ ಅನ್ನಸಂತರ್ಪಣೆ ಸೇವೆ ನಡೆಯಿತು.ಸುಮಾರು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಈ ಸಂಧರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ಹಾಗೂ ಮೊಕ್ತೇಸರರಾದ ಮೋಹನ್‌ದಾಸ್ ರೈ,ಡಾ.ಸುಚೇತಾ ಜೆ.ಶೆಟ್ಟಿ,ನಾರಾಯಣ ರೈ ಮೊದೆಲ್ಕಾಡಿ,ಎನ್ …

ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವ,ಆಶ್ಲೇಷ ಬಲಿ ಸೇವೆ Read More »

ಮಗಳ ಸಾವಿನಿಂದ ನೊಂದ ತಂದೆ ಅಳಿಯನ ಮನೆಮುಂದೆಯೇ ಆತ್ಮಹತ್ಯೆ

ಮಗಳ ಸಾವಿನಿಂದ ಮನನೊಂದ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಿಂದ ವರದಿಯಾಗಿದೆ. ಬೇಲೂರು ತಾಲೂಕಿನ ಮಾಳೆಗೆರೆ ಎಂಬಲ್ಲಿ ಮಗಳ ಪತಿಯ ಮನೆ ಮುಂದೆಯೇ ನಾಗರಾಜ್ ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಪತಿಯ ಮನೆಯವರ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದ್ದು, ಮಗಳು ಗರ್ಭಿಣಿಯಾದ ವೇಳೆ ಮಗಳ ಗರ್ಭಪಾತಕ್ಕೆ ಯತ್ನಿಸಲಾಗಿದೆ ಎಂದು ಮೃತ ನಾಗರಾಜ್ ಕುಟುಂಬ ಆರೋಪಿಸಿದೆ. ಮಗಳಿಗೆ ಕಿರುಕುಳ ನೀಡಿದ್ದರಿಂದ ಆಕೆ ಹೆರಿಗೆ ವೇಳೆಯಲ್ಲಿ ಮೃತಪಟ್ಟಿದ್ದಾಳೆ ಎಂದು …

ಮಗಳ ಸಾವಿನಿಂದ ನೊಂದ ತಂದೆ ಅಳಿಯನ ಮನೆಮುಂದೆಯೇ ಆತ್ಮಹತ್ಯೆ Read More »

ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಲೆ.ಕರ್ನಲ್ ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯ!

ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಲೆ.ಕರ್ನಲ್ ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯ! ಸೇನಾ ಹೆಲಿಕಾಪ್ಟರ್ ದುರಂತಕ್ಕೆ ದೇಶಕ್ಕೆ ದೇಶವೇ ಮರುಗುತ್ತಿದೆ. ಈ ದುರ್ಘಟನೆಯಲ್ಲಿ ಉಡುಪಿ ಜಿಲ್ಲೆಯ ಅಳಿಯ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಹುತಾತ್ಮರಾಗಿದ್ದು, ಈಗ ಕಾರ್ಕಳದಲ್ಲಿ ನೀರವ ಮೌನ ಆವರಿಸಿದೆ. ಹರ್ಜಿಂದರ್ ,ಬಿಪಿನ್ ರಾವತ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು. ಹರ್ಜಿಂದರ್ ಸಿಂಗ್‍ಗೆ ಕರ್ನಾಟಕಕ್ಕೆ ಅವಿನಾಭವ ಸಂಬಂಧವಿತ್ತು. ಹರ್ಜಿಂದರ್ ಸಿಂಗ್ ಸುಮಾರು 10 ವರ್ಷಗಳ ಹಿಂದೆ ಸೇನೆಯಲ್ಲಿರುವ ಕಾರ್ಕಳದ ಪ್ರಫುಲ್ಲ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಆಗಾಗ ಕಾರ್ಕಳಕ್ಕೆ …

ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಲೆ.ಕರ್ನಲ್ ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯ! Read More »

ಸಿಎಂ ನೇತೃತ್ವದ ಸಂಪುಟ ಸಭೆಯಲ್ಲಿ ಕೊರೋನಾ ನಿಯಂತ್ರಣ ಕುರಿತು ಚರ್ಚೆ | ಒಮಿಕ್ರಾನ್ ಕುರಿತು ಸರ್ಕಾರ ಕೈಗೊಂಡ ಕಟ್ಟು ನಿಟ್ಟಾದ ಕ್ರಮಗಳು ಇಲ್ಲಿವೆ

ಕೊರೋನಾ ರೂಪಾಂತರಿ ಕುರಿತು ಮುಖ್ಯಮಂತ್ರಿಗಳು ಇಂದು ಸಂಪುಟ ಸಭೆ ಕರೆದಿದ್ದರು. ಸಭೆಯಲ್ಲಿ ಈಗಿರುವ ಪರಿಸ್ಥಿತಿ ಕುರಿತು ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸದ್ಯಕ್ಕೆ ಲಾಕ್ ಡೌನ್ ಕುರಿತು ಯಾವುದೇ ರೀತಿಯ ಆಲೋಚನೆ ನಮ್ಮ ಮುಂದಿಲ್ಲ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಕೊರೋನಾ ರೂಪಾಂತರಿ ತಳಿ ಓಮಿಕ್ರಾನ್ ಕುರಿತು ಜನರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸದ್ಯಕ್ಕೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡುವುದಿಲ್ಲ. ವಾರದ ಬಳಿಕ ಈ ಕುರಿತು ಪರಿಸ್ಥಿತಿ ಪರಿಶೀಲಿಸಿ ಸೂಕ್ತ …

ಸಿಎಂ ನೇತೃತ್ವದ ಸಂಪುಟ ಸಭೆಯಲ್ಲಿ ಕೊರೋನಾ ನಿಯಂತ್ರಣ ಕುರಿತು ಚರ್ಚೆ | ಒಮಿಕ್ರಾನ್ ಕುರಿತು ಸರ್ಕಾರ ಕೈಗೊಂಡ ಕಟ್ಟು ನಿಟ್ಟಾದ ಕ್ರಮಗಳು ಇಲ್ಲಿವೆ Read More »

ಮೃತ ಯೋಧರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆಂಬುಲೆನ್ಸ್ ಅಪಘಾತ !! | ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಗಾಯ

ಚೆನ್ನೈ: ತಮಿಳುನಾಡಿನ ಕುನೂರು ಬಳಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸೇನಾಧಿಕಾರಿಗಳು,ಯೋಧರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಅಪಘಾತಕ್ಕೀಡಾಗಿರುವ ಘಟನೆ ಮೆಟ್ಟುಪಾಳ್ಯಂ ಬಳಿ ನಡೆದಿದೆ. ದುರಂತದಲ್ಲಿ ಮಡಿದ ಯೋಧರ ಮೃತದೇಹಗಳನ್ನು ಮದ್ರಾಸ್ ರೆಜಿಮೆಂಟಲ್ ಸೆಂಟರ್ (ಎಂಆರ್‌ಸಿ) ಕುನ್ನೂರಿನ ವೆಲ್ಲಿಂಗ್‌ಟನ್‌ನಿಂದ ಸುಲೂರ್ ಏರ್ ಬೇಸ್‌ಗೆ ಕೊಂಡೊಯ್ಯಲಾಗುತ್ತಿದ್ದಾಗ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್‌ ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ ಪೊಲೀಸ್ ಇಲಾಖೆಯ ಕೆಲ ಸಿಬ್ಬಂದಿಗೆ ಗಾಯವಾಗಿದೆ. ಸೂಲೂರು ವಾಯುನೆಲೆಯಿಂದ ಸುಮಾರು 45 ಕಿ.ಮೀ ದೂರದಲ್ಲಿ ಅಪಘಾತ ಸಂಭವಿಸಿದೆ.ಮೃತದೇಹಗಳನ್ನು ಮತ್ತೊಂದು ಆಂಬ್ಯುಲೆನ್ಸ್‌ಗೆ …

ಮೃತ ಯೋಧರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆಂಬುಲೆನ್ಸ್ ಅಪಘಾತ !! | ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಗಾಯ Read More »

error: Content is protected !!
Scroll to Top