ಶೋರೂಂನಲ್ಲಿ ಅಗ್ನಿ ಅವಘಡ | ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾದ 40 ಬಿಎಂಡಬ್ಲ್ಯೂ ಕಾರುಗಳು

ಶೋರೂಮ್​​ನಲ್ಲಿ ಭಾರಿ ಪ್ರಮಾಣದ ಅಗ್ನಿ ಅವಘಡ ಸಂಭವಿಸಿ, ಸುಮಾರು 40 ಬಿಎಂಡಬ್ಲ್ಯೂ ಕಾರುಗಳು ಸುಟ್ಟುಕರಕಲಾದ ಘಟನೆ ನವಿ ಮುಂಬೈನ ಟುರ್ಬೆ ಎಂಐಡಿಸಿ ಏರಿಯಾದಲ್ಲಿ ನಡೆದಿದೆ.

ಅವಘಡದಲ್ಲಿ ಯಾರೂ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ. ಈ ಶೋರೂಂನಲ್ಲಿಯೇ ಕಾರುಗಳನ್ನು ಪಾರ್ಕ್​ ಮಾಡಲಾದ ಗೋಡೌನ್​ ಕೂಡ ಇತ್ತು. ಇಂದು ಮುಂಜಾನೆ ಬೆಂಕಿ ಬಿದ್ದಿದೆ ಎಂದು ತಿಳಿದುಬಂದಿದೆ.

ಬೆಂಕಿಯ ತೀವ್ರತೆ ಅತಿಹೆಚ್ಚಾಗಿದ್ದುದರಿಂದ ಕೇವಲ ಎಂಐಡಿಸಿ ಪ್ರದೇಶದ ಅಗ್ನಿಶಾಮಕ ದಳದ ಸಿಬ್ಬಂದಿ, ವಾಹನ ಸಾಕಾಗಲಿಲ್ಲ. ಒಟ್ಟು 10 ಫೈರ್​ ಫೈಟ್​ ಟ್ರಕ್​ಗಳನ್ನು ಕೂಡ ತರಲಾಗಿತ್ತು. ಆದರೂ ಎಲ್ಲಾ ಸೇರಿ ಹೋರಾಟ ಮಾಡಿದರೂ ಬೆಂಕಿ ನಂದಿಸಲು 6 ಗಂಟೆಗಳ ಕಾಲ ಬೇಕಾಯಿತು ಎಂದು ವರದಿಯಾಗಿದೆ.

ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ತುರ್ಭೆ ಪೊಲೀಸ್ ಠಾಣೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಬೆಂಕಿಯ ತೀವ್ರತೆಗೆ ಶೋರೂಂ ಒಳಗೆ ಇದ್ದ ಎಲ್ಲ ದಾಖಲೆಗಳು ಮತ್ತು ಪೀಠೋಪಕರಣಗಳು ಸುಟ್ಟು ಭಸ್ಮವಾಗಿವೆ. ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ.

Leave A Reply

Your email address will not be published.