ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ | ಎಟಿಎಂ ವಹಿವಾಟುಗಳು ಜನವರಿಯಿಂದ ಬಲು ದುಬಾರಿ

ಭಾರತೀಯ ರಿಸರ್ವ್ ಬ್ಯಾಂಕ್ ನಗದು ಹಿಂಪಡೆಯಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದು,ಎಟಿಎಂ ವಹಿವಾಟುಗಳು ಜನವರಿ 1, 2022 ರಿಂದ ದುಬಾರಿಯಾಗಲಿವೆ ಎಂದು ತಿಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಅಧಿಸೂಚನೆಯಲ್ಲಿ ಜನವರಿ 2022 ರಿಂದ ಎಟಿಎಂ ವಹಿವಾಟುಗಳಿಗೆ ಮಿತಿ ಮೀರಿದ ನಂತರ ಇನ್ನೂ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದೆ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಗ್ರಾಹಕರು ಇಂತಿಷ್ಟು ಮಿತಿ ಮೀರಿದರೆ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ.ಅಂದ ಹಾಗೆ, ಆರ್‌ಬಿಐ ಬ್ಯಾಂಕುಗಳಿಗೆ ನಗದು ಮತ್ತು ನಗದುರಹಿತ ಸ್ವಯಂಚಾಲಿತ ಎಟಿಎಂ ಶುಲ್ಕ ಹೆಚ್ಚಿಸಲು ಅವಕಾಶ ಮಾಡಿಕೊಟ್ಟಿದೆ.ಬದಲಾವಣೆಯನ್ನು ಜಾರಿಗೊಳಿಸಿದ ನಂತರ ಮಿತಿ ಮೀರಿದಾಗ ಗ್ರಾಹಕರು ತಮ್ಮ ಸ್ವಂತ ಬ್ಯಾಂಕ್‌ ಗಳ ಎಟಿಎಂಗಳಲ್ಲಿ ಪ್ರತಿ ವಹಿವಾಟಿಗೆ 21 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಹೊಸ ನಿಯಮವು ಜನವರಿ 1, 2022 ರಿಂದ ಜಾರಿಗೆ ಬರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕ್ ಗ್ರಾಹಕರು ಈ ದರಗಳನ್ನು ವಿಧಿಸುವ ಮೊದಲು ತಮ್ಮ ಸ್ವಂತ ಬ್ಯಾಂಕ್‌ ಗಳಲ್ಲಿ 5 ಉಚಿತ ಎಟಿಎಂ ವಹಿವಾಟುಗಳನ್ನು ಮಾಡಲು ಅವಕಾಶವಿರುತ್ತದೆ.ಮೆಟ್ರೋ ನಗರಗಳಲ್ಲಿ ಇತರ ಬ್ಯಾಂಕ್‌ ಗಳಿಂದ 3 ಉಚಿತ ವಹಿವಾಟುಗಳಿಗೆ ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ 5 ಉಚಿತ ವಹಿವಾಟುಗಳಿಗೆ ಗ್ರಾಹಕರು ಅರ್ಹರಾಗಿರುತ್ತಾರೆ. ಆರ್‌ಬಿಐ ಈ ವರ್ಷದ ಜೂನ್‌ನಲ್ಲಿ ಬದಲಾವಣೆಗಳ ಕುರಿತು ಸೂಚನೆ ನೀಡಿತ್ತು.

ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಹೊಸ ಅಧಿಸೂಚನೆಯೊಂದಿಗೆ ತಮ್ಮ ವೆಬ್‌ಸೈಟ್ ಅನ್ನು ನವೀಕರಿಸಿವೆ.HDFC ಬ್ಯಾಂಕ್ ವೆಬ್‌ಸೈಟ್ ಪ್ರಕಾರ, 1ನೇ ಜನವರಿ 2022 ರಿಂದ ಜಾರಿಗೆ ಬರುವಂತೆ, ಎಟಿಎಂ ವಹಿವಾಟು ಶುಲ್ಕದ ಉಚಿತ ಮಿತಿ 20 ರೂ. ಹಾಗೂ ತೆರಿಗೆಗಳನ್ನು ಪರಿಷ್ಕರಿಸಿ 21 ರೂ. ಹಾಗೂ ತೆರಿಗೆಗಳಿಗೆ ಹೆಚ್ಚಿಸಲಾಗುವುದು.

HDFC ಬ್ಯಾಂಕ್ ಎಟಿಎಂಗಳಲ್ಲಿನ ವಹಿವಾಟುಗಳಿಗೆ, ನಗದು ಹಿಂತೆಗೆದುಕೊಳ್ಳುವ ವಹಿವಾಟುಗಳನ್ನು ಮಾತ್ರ ಶುಲ್ಕ ಪಾವತಿಗೆ ಪರಿಗಣಿಸಲಾಗುತ್ತದೆ. ಹಣಕಾಸಿನೇತರ ವಹಿವಾಟುಗಳು ಅಂದರೆ ಬ್ಯಾಲೆನ್ಸ್ ವಿಚಾರಣೆ, ಮಿನಿ ಸ್ಟೇಟ್‌ಮೆಂಟ್ ಮತ್ತು ಪಿನ್ ಬದಲಾವಣೆಗಳು ಉಚಿತವಾಗಿರುತ್ತದೆ.HDFC ಬ್ಯಾಂಕ್ ಅಲ್ಲದ ಎಟಿಎಂಗಳಲ್ಲಿನ ವಹಿವಾಟುಗಳಿಗೆ, ಚಾರ್ಜ್ ಮಾಡಲು ಪರಿಗಣಿಸಲಾಗುತ್ತದೆ.ನಗದು ಹಿಂತೆಗೆದುಕೊಳ್ಳುವಿಕೆ ಮತ್ತು ಹಣಕಾಸೇತರ ವಹಿವಾಟುಗಳು ಎರಡನ್ನೂ ಒಳಗೊಂಡಿರುತ್ತದೆ.

Leave A Reply

Your email address will not be published.