ಸೀರೆ ಉಟ್ಟು ಬ್ಲೌಸ್ ಧರಿಸದೆ ಬೀದಿಗಿಳಿದ ತರುಣಿ | ಕೇಳಿದ್ರೆ, ಮೆಹಂದಿ ಉಂಟಲ್ಲ ಅನ್ನುವ ಉತ್ತರ !|ಹೊಸ ಮ್ಯಾಟರ್ ಮಾರ್ರೆ!

0 12

ಸೀರೇಲಿ ಹುಡುಗೀರ ನೋಡಲೇ ಬಾರದು ನಿಲ್ಲಲ್ಲ ಟೆಂಪರೇಚರೂ!! ಇದು ಕನ್ನಡ ಚಿತ್ರದ ಹಾಡಿನ ಸಾಹಿತ್ಯ.ಆ ಸಾಹಿತ್ಯಕ್ಕೂ ಸೀರೆಗೂ ಅಂತಹ ಸಂಬಂಧವಿದೆ. ಯಾಕೆಂದರೆ ಹೆಣ್ಣು ಸೀರೆ ಉಟ್ಟರೆ ಅದಕ್ಕಿರುವ ಸೌಂದರ್ಯವನ್ನು ವರ್ಣಿಸಲು ಅಸಾಧ್ಯ. ಅಂತೆಯೇ ಇಲ್ಲೊಬಳು ಸುರಸುಂದರಿ ಬ್ಲೌಸ್ ರಹಿತ ಸೀರೆ ಉಟ್ಟು ರಸ್ತೆಗೆ ಇಳಿದಿದ್ದು, ನೋಡುಗರೆಲ್ಲಾ ಅಚ್ಚರಿಯಿಂದ ಬ್ಲೌಸ್ ಎಲ್ಲೆಂದು ಕೇಳಿದಾಗ ಆಕೆ ಕೊಟ್ಟ ಉತ್ತರ ‘ಮೆಹೆಂದಿ’.

ಮಹಿಳೆ ಸಾಂಪ್ರದಾಯಿಕ ಕುಪ್ಪಸವನ್ನು ಬಿಟ್ಟು ಅದೇ ವಿನ್ಯಾಸದ ಮೆಹೆಂದಿಯನ್ನು ತನ್ನ ಬರೀ ಮೈಗೆ ಹಾಕಿಕೊಂಡಿದ್ದು, ಮೆಹೆಂದಿಯು ಬ್ಲೌಸ್ ನಂತೆಯೇ ಕಾಣಿಸಿಕೊಂಡಿದೆ.ಮೆತ್ತನೆಯ ಭುಜ ಮತ್ತು ತೋಳುಗಳ ಮೇಲೆ ಮೆಹೆಂದಿಯ ವಿನ್ಯಾಸವಿದ್ದು, ಬಿಳಿ ಸೀರೆ ಉಟ್ಟ ಬಳಿಕ ಅದು ಬ್ಲೌಸ್ ನಂತೆಯೇ ಕಂಡಿದೆ.

ಈಕೆಯ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಎರ್ರಾಬಿರ್ರಿ ಕಾಮೆಂಟ್ ಗಳು ಬರಲಾರಾಂಭಿಸಿದ್ದು, ಫ್ಯಾಷನ್ ಹೆಸರಿನಲ್ಲಿ ಬರೀಮೈ ಪ್ರದರ್ಶನ ಮಾಡಲು ನಾಚಿಕೆ ಇಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಸದ್ಯ ಈಕೆಯ ಹೊಸ ವಿನ್ಯಾಸದ ಬ್ಲೌಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೂ, ಇನ್ನೂ ಕೆಲ ಯುವತಿಯರು ಇದನ್ನು ಪ್ರಯತ್ನನಿಸುತ್ತಿದ್ದಾರೆ ಎಂಬ ಗುಸುಗುಸು ಎದ್ದಿದೆ.

Leave A Reply