ಕಳೆದುಕೊಂಡಿದ್ದ ರಿಂಗ್ 50 ವರ್ಷದ ಬಳಿಕ ಪತ್ತೆ |ಈ ವಿಸ್ಮಯ ಘಟನೆಯ ಕುರಿತು ಇಲ್ಲಿದೆ ಇಂಟೆರೆಸ್ಟಿಂಗ್ ಸ್ಟೋರಿ

ಸಾಮಾನ್ಯವಾಗಿ ನಾವು ಪುಟ್ಟ ವಸ್ತುಗಳನ್ನು ಕಳೆದುಕೊಂಡಾಗ ಅದನ್ನು ಮತ್ತೆ ಪಡೆಯುವುದು ತುಸು ಕಷ್ಟವೇ ಸರಿ. ಕೆಲವೊಂದು ಬಾರಿ ನಮ್ಮ ಹತ್ತಿರವೇ ಬಿದ್ದಿದ್ದರೂ ಅದು ಗೋಚರಿಸದೆ ನಮ್ಮಿಂದ ಮಾಯವಾಗಿರುತ್ತದೆ. ಆದ್ರೆ ಇಲ್ಲೊಂದು ಕಡೆ ನಡೆದ ಘಟನೆ ನೋಡಿದ್ರೆ ಒಮ್ಮೆ ದಿಗ್ಬ್ರಮೆಗೊಳ್ಳೋದು ಖಂಡಿತ.

ಹೌದು. ಇಲ್ಲಿ ಕಳೆದು ಹೋಗಿದ್ದ ವೆಡ್ಡಿಂಗ್​ ರಿಂಗ್​ 50 ವರ್ಷಗಳ ಬಳಿಕ ಪತ್ತೆಯಾಗಿರುವ ಅಪರೂಪದ ಘಟನೆ ಬ್ರಿಟನ್​ ಬಳಿಯ ಔಟರ್​ ಹೆಬ್ರಿಡೆಸ್​ ದ್ವೀಪದಲ್ಲಿ ನಡೆದಿದೆ.ಕಳೆದು ಕೊಂಡ ರಿಂಗ್ ಅನ್ನು ಹುಡುಕಿ ಸುಮ್ಮನಾಗಿದ್ದ ಮಹಿಳೆಗೆ ಇದೀಗ ಮೂರು ದಿನಗಳ ಹುಡುಕಾಟದ ಬಳಿಕ ಕೊನೆಗೂ ರಿಂಗ್​ ಸಿಕ್ಕಿದ್ದು ಭಾವುಕರಾಗಿಸಿದೆ.

ಪೆಗ್ಗಿ ಮ್ಯಾಕ್​ಸ್ವೀನಿ (86) ಎಂಬಾಕೆ 50 ವರ್ಷಗಳ ಹಿಂದೆ ತಮ್ಮ ಮನೆಯ ಮುಂಭಾಗದ ಆವರಣದಲ್ಲಿ ಆಲುಗೆಡ್ಡೆ ಸಂಗ್ರಹಿಸುವ ವೇಳೆ ಕೈ ಬೆರಳಿಂದ ಉಂಗುರ ಜಾರಿ ಕೆಳಗೆ ಬಿದ್ದಿತ್ತು. ಬಳಿಕ ಉಂಗುರಕ್ಕಾಗಿ ಸಾಕಷ್ಟು ಹುಡುಕಾಡಿದರೂ ಕೂಡ ಪ್ರಯೋಜನವಾಗಲಿಲ್ಲ. ಕೊನೆಗೆ ಮ್ಯಾಕ್​ಸ್ವೀನಿ ಅವರು ಹುಡುಕುವ ಭರವಸೆಯನ್ನೇ ಕಳೆದುಕೊಂಡರು.ಇತ್ತೀಚೆಗೆ ಮೆಟಲ್​ ಡಿಟೆಕ್ಟರ್​ (ಲೋಹಪತ್ತೆಗಾರ)​ ಡೊನಾಲ್ಡ್​ ಮ್ಯಾಕ್​ಫೀ ಅವರು ರಿಂಗ್​ ಕಳೆದು ಹೋಗಿರುವುದರ ಬಗ್ಗೆ ತಿಳಿದುಕೊಂಡರು.

ವಿಷಯ ತಿಳಿಯುತ್ತಿದ್ದಂತೆ ಹುಡುಕುವ ನಿರ್ಧಾರ ಮಾಡಿ ಮ್ಯಾಕ್​ಸ್ವೀನಿ ಅವರ ಮನೆಗೆ ಹೋದರು. ಬಳಿಕ ರಿಂಗ್​ ಕಳೆದು ಹೋದ ಜಾಗದಲ್ಲಿ ಮೆಟಲ್​ ಡಿಟೆಕ್ಟರ್​ ಸಹಾಯದಿಂದ ಹುಡುಕಲು ಆರಂಭಿಸಿದ ಮ್ಯಾಕ್​ಫೀಗೆ ಮೊದಲ ದಿನ ರಿಂಗ್​ ಪತ್ತೆಯಾಗಲಿಲ್ಲ. ಎರಡನೇ ದಿನವೂ ನಿರಾಸೆ ಕಾದಿತ್ತು. ಮೂರನೇ ದಿನದ ಕಾರ್ಯಾಚರಣೆಗೆ ಇಳಿದ ಮ್ಯಾಕ್​ಫೀಗೆ ಅಚ್ಚರಿ ಕಾದಿತ್ತು. ಅದೇನೆಂದರೆ, 50 ವರ್ಷದ ಹಿಂದೆ ಕಳೆದು ಹೋಗಿದ್ದ ರಿಂಗ್​ ಮತ್ತೆ ಪತ್ತೆಯಾಯಿತು.

ಈ ಬಗ್ಗೆ ಮಾತನಾಡಿರುವ ಮ್ಯಾಕ್​ಫೀ, ಇದು ಸ್ವಲ್ಪ ಭಾವನಾತ್ಮಕವಾಗಿದೆ ಎಂದಿದ್ದಾರೆ. ಉಂಗುರ ಕಳೆದುಹೋದ ಪ್ರದೇಶವು ಮದ್ಯ ಪ್ರಿಯರ ಪ್ರಮುಖ ಕೇಂದ್ರವೆಂದು ಗುರುತಿಸಲ್ಪಟ್ಟಿದೆ. ಒಟ್ಟು 5,000 ಚದರ ಮೀಟರ್ ಪ್ರದೇಶದಲ್ಲಿ 90 ಗಂಟೆಗಳ ಹುಡುಕಾಟದ ನಂತರ ಉಂಗುರವು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಇಷ್ಟು ದಿನಗಳಲ್ಲಿ ಸುಮಾರು 90 ಗುಂಡಿ ತೋಡಿದ್ದೇನೆ. ಕುದುರೆ ಬೆಲ್ಟ್‌ಗಳು, ಬಂಡಿಗಳು ಮತ್ತು ಇತರ ವಸ್ತುಗಳು ಸಹ ಪತ್ತೆಯಾಗಿವೆ. ಉಂಗುರ ಪತ್ತೆಯಾಗುವುದು ಒಂದು ಲಕ್ಷದಲ್ಲಿ ಒಂದು ಪ್ರಕರಣಗಳಲ್ಲಿ ಮಾತ್ರ ಸಾಧ್ಯವಾಗುತ್ತದೆ. ನಿಜವಾಗಿಯೂ ಇದು ಬಹುದೊಡ್ಡ ಅದೃಷ್ಟವೇ ಸರಿ ಎಂದು ಮ್ಯಾಕ್​ಫೀ ಆ ಕ್ಷಣವನ್ನು ವರ್ಣಿಸಿದ್ದಾರೆ. 50 ವರ್ಷಗಳ ಹಿಂದೆ ಕಳೆದು ಹೋದ ಉಂಗುರವನ್ನು ಮ್ಯಾಕ್​ಸ್ವೀನಿ ಅವರ ಕೈಗೆ ನೀಡಿದಾಗ ಅವರು ಆಶ್ಚರ್ಯಚಕಿತರಾದರು ಮತ್ತು ತುಂಬಾ ಸಂತೋಷಪಟ್ಟರು ಎಂದು ಮ್ಯಾಕ್​ಫೀ ಹೇಳಿದ್ದಾರೆ.

ಮ್ಯಾಕ್​ಸ್ವೀನಿ ಸಹ ಮಾತನಾಡಿದ್ದು, ಮ್ಯಾಕ್​ಫೀ ನನ್ನ ಬಳಿಗೆ ಬಂದಾಗ ನಿನ್ನ ಕೈಯಲ್ಲಿ ಏನಾದರೂ ಇದೆಯೇ ಎಂದು ಕೇಳಿದೆ. ಅವರು ನನಗೆ ಉಂಗುರವನ್ನು ತೋರಿಸಿದಾಗ ನನಗೆ ನಂಬಲಾಗಲಿಲ್ಲ. ಆದರೆ, ನಾನು ಅದನ್ನು ಮತ್ತೆ ನೋಡುತ್ತೇನೆ ಎಂದು ನಾನು ಭಾವಿಸಿಯೂ ಇರಲಿಲ್ಲ. ಆ ದಿನ ಉಂಗುರವು ನನ್ನ ಕೈಯಿಂದ ಕಣ್ಮರೆಯಾಯಿತು. ಸಾಕಷ್ಟ ಹುಡುಕಾಡಿದರೂ ಸಿಗಲಿಲ್ಲ ಎಂದು ಹೇಳಿದ್ದಾರೆ.ಅಂತೂ e ಘಟನೆ ಅಪರೂಪವೇ ಸರಿ!

Leave A Reply

Your email address will not be published.