ಕೊರೋನಾ ಮೂರನೆಯ ಅಲೆ ಬಂದೇ ಬಿಡ್ತಾ !? ಮಹಾರಾಷ್ಟ್ರದ ಒಂದೇ ಕುಟುಂಬದ 7 ಜನರಿಗೆ ಓಮಿಕ್ರಾನ್ | ದೇಶದಲ್ಲಿ ಒಟ್ಟು ಸಂಖ್ಯೆ12ಕ್ಕೆ ಏರಿಕೆ !

ಮುಂಬೈ: ದಕ್ಷಿಣ ಆಫ್ರಿಕಾದ ರೂಪಾಂತರಿ ಒಮಿಕ್ರಾನ್ ಭಾರತದಲ್ಲಿ ಅವಾಂತರ ಸೃಷ್ಟಿಸಲು ಸರ್ವರೀತಿಯಲ್ಲೂ ಸಜ್ಜಾಗಿದೆ. ಈಗ ರೂಪಾಂತರಿ ವೈರಸ್ ಕೇಸ್‍ಗಳು 12ಕ್ಕೆ ಏರಿದ್ದು, ಮಹಾರಾಷ್ಟ್ರದ ಒಂದೇ ಕುಟುಂಬದ 6 ಮಂದಿಗೆ ಓಮಿಕ್ರಾನ್ ದೃಢವಾಗಿದೆ. ಗಂಟೆ ಬಾರಿಸಿದೆ. ಸರ್ಕಾರ ಮತ್ತು ಜನರಿಗೆ ಕರೆಗಂಟೆ ಬಾರಿಸಿದಂತಾಗಿದೆ.

ದಕ್ಷಿಣ ಆಫ್ರಿಕಾದ ನೈಜೀರಿಯಾದ ಲಾಗೋಸ್ ನಗರದಿಂದ 44 ವರ್ಷದ ಮಹಿಳೆ ತನ್ನ ಇಬ್ಬರು ಹೆಣ್ಣುಮಕ್ಕಳ ಜೊತೆ ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚ್ವಾಡ ದ ಅಣ್ಣನ ಮನೆಗೆ ನವೆಂಬರ್ 24ರಂದು ಆಗಮಿಸಿದ್ದರು. ಇವರಿಂದ 45 ವರ್ಷದ ಸಹೋದರ, ಆತನ ಎರಡೂವರೆ ವರ್ಷ ಮತ್ತು 7 ವರ್ಷದ ಮಕ್ಕಳಿಗೆ ಒಮ್ರಿಕಾನ್ ದೃಢವಾಗಿದೆ. ಇನ್ನುಳಿದಂತೆ ಫಿನ್ಲೆಂಡ್ ಟ್ರಾವೆಲ್ ಹಿಸ್ಟರಿ ಹೊಂದಿರುವ 47 ವರ್ಷದ ವ್ಯಕ್ತಿಯೊಬ್ಬರಿಗೂ ಒಮಿಕ್ರಾನ್ ದೃಢವಾಗಿದೆ. ಈ ಮೂಲಕ ಪುಣೆಯಲ್ಲಿ ಒಂದೇ ದಿನ 7 ಒಮಿಕ್ರಾನ್ ಕೇಸ್ ದಾಖಲಾಗಿದೆ.

ಸೋಂಕಿತರು ಎಲ್ಲರೂ ತಾಂಜಾನಿಯದಿಂದ ಬಂದಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಇನ್ನೂ 17 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದ್ದಾರೆ. ಇವರೆಲ್ಲರ ಸ್ಯಾಂಪಲ್ಸ್‍ಗಳನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಕಳಿಸಲಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದರು.
ವಯಸ್ಕ ನಾಲ್ವರಿಗೂ ವ್ಯಾಕ್ಸಿನ್ ಡಬಲ್ ಡೋಸ್ ಆಗಿದೆ. ಇದಕ್ಕೂ ಮುನ್ನ, ದೆಹಲಿಯಲ್ಲಿ ಮೊದಲನೇ ಕೇಸ್ ಪತ್ತೆಯಾಗಿತ್ತು. ಈ ಹಿನ್ನೆಲೆ ಎಲ್‍ಎನ್‍ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗ್ತಿದೆ. ಈ ಸೋಂಕಿತನಿಗೆ ಗಂಟಲು ನೋವು, ಸುಸ್ತು, ಮೈಕೈ ನೋವು ಕಾಣಿಸಿಕೊಂಡಿತ್ತು. ಇವರಿಗೆ 2 ಡೋಸ್ ವ್ಯಾಕ್ಸಿನ್ ಆಗಿದ್ದ ಕಾರಣ ತೀವ್ರ ತೊಂದರೆ ಆಗಿಲ್ಲ ಎಂದು ವೈದ್ಯರು ತಿಳಿಸಿದರು.
ಎಲ್ಲಿ ಎಷ್ಟು ಓಮಿಕ್ರಾನ್ ಕೇಸ್ ?
ಮಹಾರಾಷ್ಟ್ರ -8 ಕೇಸ್( ಪುಣೆ 7 + ಮುಂಬೈನ ಡೋಂಬಿವ್ಲಿ 1), ಕರ್ನಾಟಕ – 2 ಕೇಸ್ (ಬೆಂಗಳೂರು), ದೆಹಲಿ- 1 ಕೇಸ್(ದೆಹಲಿ), ಗುಜರಾತ್- 1 ಕೇಸ್(ಜಾಮ್‍ನಗರ)

ಓಮಿಕ್ರಾನ್ ಸೋಂಕಿತ ದೇಶದಿಂದ ಬಿಹಾರಕ್ಕೆ ಬಂದಿರುವ ಐವರಲ್ಲಿ ಕೊರೊನಾ ಪಾಸಿಟಿವ್ ಆಗಿದ್ದು, ಜಿನೋಮಿಕ್ ಟೆಸ್ಟ್ ಗೆ ಕಳಿಸಲಾಗಿದೆ. ಇನ್ನು, ವಿಶ್ವಾದ್ಯಂತ ಈಗಾಗಲೇ 30ಕ್ಕೂ ಹೆಚ್ಚು ದೇಶಗಳಲ್ಲಿ ಹೆಮ್ಮಾರಿ ಓಮ್ರಿಕಾನ್ ಪತ್ತೆಯಾಗಿದ್ದು. ಓಮಿಕ್ರಾನ್ ಸೋಂಕು ಅಷ್ಟೊಂದು ಮಾರಣಾಂತಿಕವಲ್ಲದೆ ಇದ್ದರೂ, 3ನೇ ಅಲೆ ಉಂಟು ಮಾಡುವಷ್ಟು ಪ್ರಸರಣ ಸಾಮಥ್ರ್ಯ ಹೊಂದಿದೆ ಎಲ್ಲ ಲಾಗುತ್ತಿದೆ. ಈ ಮಧ್ಯೆ, ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳು ತಮ್ಮ ದೇಶ ಪ್ರವೇಶಿಸುವ ಎಲ್ಲ ವಿದೇಶಿ ಪ್ರಜೆಗಳಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿವೆ.

Leave A Reply