ಮನೆ ಕಟ್ಟಬೇಕು ಎಂಬ ಕನಸಿದ್ಯಾ ಹಾಗಾದ್ರೆ ಮಂ ಡ್ಯದಲ್ಲಿರುವ ಈ ದೇವಸ್ಥಾನಕ್ಕೆ ತಪ್ಪದೇ ಭೇಟಿ ನೀಡಿ

ಸ್ವಂತ ಸೂರು ನಿರ್ಮಿಸಿಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಜನ ಸಾಮಾನ್ಯರ ಕನಸು. ಇದಕ್ಕಾಗಿ ಎಷ್ಟೇ ಪ್ರಯ ತ್ನ ಪಟ್ಟರು ಕೆಲವೊಮ್ಮೆ ಫಲ ನೀಡುವುದಿಲ್ಲ ಹಣ ಹೊಂದಿಸಿ, ಭೂಮಿ ಸಿಕ್ಕು ಎಲ್ಲ ವ್ಯವಸ್ಥೇ ಆದರೂ ಮನೆ ನಿರ್ಮಾಣಕ್ಕೆ ಅಡೆತಡೆಯಾಗುತ್ತದೆ. ಹೆಣ್ಣು, ಹೊನ್ನು, ಮಣ್ಣು ಎಂಬುದು ಶೀಘ್ರದಲ್ಲಿ ಒಲಿಯುವುದಿಲ್ಲ. ಅದಕ್ಕೆ ದೈವ ಅನುಗ್ರಹ ಬೇಕು ಎನ್ನುವುದು.

ಈ ರೀತಿ ಮನೆ ನಿರ್ಮಾಣದ ಕನಸು ನನಸಾಗಬೇಕು. ತಮಗೊಂದು ಸೂರು ಬೇಕು ಎಂಬ ಕನಸು ನನಸಾಗಬೇಕು. ಇದಕ್ಕಿರುವ ಅಡೆ ತಡೆ ನಿವಾರಣೆ ಆಗಬೇಕು ಎಂದರೇ ಮಂಡ್ಯದಲ್ಲಿರುವ ಈ ದೇವಾಲಯಕ್ಕೆ ಒಮ್ಮೆ ತಪ್ಪದೇ ಭೇಟಿ ನೀಡಿ ನಿಮ್ಮ ಇಷ್ಟಾರ್ಥ ಪೂರೈಸುತ್ತದೆ. ಇಲ್ಲಿ ಹರಕೆ ಮಾಡಿಕೊಂಡು ಹೋದರೆ ಅದು ಫಲಿಸದೇ ಇರಲಾರದು ಎಂಬ ಪ್ರತೀತಿ ಇದೆ. ಇದೇ ಕಾರಣಕ್ಕೆ ಮನೆ ನಿರ್ಮಾಣದ ಕನಸು ಹೊತ್ತು ತೊಂದರೆ ಎದುರಿಸುತ್ತಿರುವವರು ಈ ದೇವಸ್ಥಾನಕ್ಕೆ ತಪ್ಪದೇ ಭೇಟಿ ನೀಡಿ ಕಾರ್ಯ ಸುಗಮವಾಗುವಂತೆ ಕೋರಿಕೊಳ್ಳುತ್ತಾರೆ.

ಮಂಡ್ಯದ ಕೆಆರ್​ ಪೇಟೆ ತಾಲೂಕಿನಿಂದ 18 ಕಿಲೋ ಮೀಟರ್​ ದೂರವಿರುವ ಕಲ್ಲಹಳ್ಳಿಯ ಭೂ ವರಾಹಸ್ವಾಮಿ ನಂಬಿದ ಭಕ್ತರ ಪ್ರತಿಯೊಂದು ಕನಸು ನೆರವೇರಿಸುತ್ತಾನೆ ಎಂಬ ನಂಬಿಕೆ ಇದೆ. ಅದರಲ್ಲೂ ಮನೆ ಕಟ್ಟಲೂ ಇಲ್ಲಿ ಹರಕೆ ಮಾಡಿಕೊಂಡು ಹೋದರೆ ಅದು ಫಲಿಸದೇ ಇರಲಾರದು ಎಂಬ ಪ್ರತೀತಿ ಇದೆ. ಇದೇ ಕಾರಣಕ್ಕೆ ಮನೆ ನಿರ್ಮಾಣದ ಕನಸು ಹೊತ್ತು ತೊಂದರೆ ಎದುರಿಸುತ್ತಿರುವವರು ಈ ದೇವಸ್ಥಾನಕ್ಕೆ ತಪ್ಪದೇ ಭೇಟಿ ನೀಡಿ ಕಾರ್ಯ ಸುಗಮವಾಗುವಂತೆ ಕೋರಿಕೊಳ್ಳುತ್ತಾರೆ. ಬಳಿಕ ಮನೆ ನಿರ್ಮಾಣವಾದ ಮೇಲೆ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ.

ದೇವಾಲಯದ ವಿಶೇಷತೆ.

ಹೇಮಾವತಿ ತಟದಲ್ಲಿರುವ ಈ ಭೂ ವರಹ ಸ್ವಾಮಿ ಪುರಾತನ ಕಾಲದ ದೇವಾಲಯ. ಪೌರಣಿಕ ಹಿನ್ನಲೆ ಹೊಂದಿರುವ ಈ ದೇವಾಲಯದ ದೇವರ ಮೂರ್ತಿ ಕಪ್ಪು ಸಾಲಿಗ್ರಾಮದಿಂದ ನಿರ್ಮಾಣ ಮಾಡಲಾಗಿದೆ. ವಿಶೇಷ ಎಂದರೆ ಇಲ್ಲಿ ಭೂ ದೇವಿ ವರಾಹ ಮೂರ್ತಿಯ ಕಾಲಿನ ಮೇಲೆ ಆಸೀನಳಾಗಿದ್ದಾಳೆ. ಇದೇ ಕಾರಣಕ್ಕೆ ಭೂಮಿ ಸಂಬಂಧಿತ ವ್ಯಾಜ್ಯಗಳಿಗೆ ಈ ದೇವರು ಪರಿಹಾರ ನೀಡುತ್ತಾನೆ ಎಂಬ ನಂಬಿಕೆ ಇ ದೆ.

ಏನಿ ಸ್ಥಳದ ಮಹಾತ್ಮೆಹಿರಣ್ಯಾಕಶ್ಯಪನನ್ನು ವರಾಹ ರೂಪದಲ್ಲಿ ಕೊಂದ ವಿಷ್ಣು ಇದೇ ಸ್ಥಳದಲ್ಲಿ ತನ್ನ ಕೋಪವನ್ನು ಶಮನ ಗೊಳಿಸಿಕೊಂಡರು ಎಂಬ ನಂಬಿಕೆ ಇದೆ. ನಂತರ ಗೌತಮ ಮುನಿಗಳು ಇಲ್ಲಿ ವರಾಹ ಮೂರ್ತಿಯನ್ನು ಸಾಲಿಗ್ರಾಮ ಶಿಲೆಯಲ್ಲಿ ಸ್ಥಾಪಿಸಿ ಪೂಜಿಸಿದರು. ಋಷಿಮುನಿಗಳು ಪ್ರಾರ್ಥಿಸಿ ಪೂಜಿಸುತ್ತಿದ್ದ ಈ ಮೂರ್ತಿಯು ಕಾಲ ಕ್ರಮೇಣ ಭೂಗರ್ಭದಲ್ಲಿ ಹುದುಗಿ ಹೋಯಿತಂತೆ.

ಬಳಿಕ 13 ನೇ ಶತಮಾನದಲ್ಲಿ ಹೊಯ್ಸಳರ ದೊರೆ ಕಣ್ಣಿಗೆ ಈ ಮೂರ್ತಿ ಬಿದ್ದಂತೆ. ಮೂರನೇ ವೀರ ಬಲ್ಲಾಳನು ಈ ಕಾಡಿನಲ್ಲಿ ಭೇಟೆ ಆಡಲು ಬಂದಾಗ ದಾರಿ ತಪ್ಪಿ ಬಂದ ಆತ ಮರದ ಬಳಿ ವಿಶ್ರಾಂತಿ ಪಡೆಯುವಾಗ ನಾಯಿ ಒಂದು ಮೊಲವನ್ನು ಬೆನ್ನಟ್ಟುವ ದೃಶ್ಯವನ್ನು ಕಾಣುತ್ತಾನೆ. ಇದನ್ನು ಗಮನಿಸಿದ ರಾಜನಿಗೆ ಇಲ್ಲಿ ಯಾವುದೋ ಶಕ್ತಿ ಅಡಗಿದೆ ಎಂದು ಹುದುಗಿದ ದೇವರ ವಿಗ್ರಹದ ಹುಡಕಾಟಕ್ಕೆ ಶುರು ಮಾಡಿದಾಗ ಈ ಭೂ ವರಹ ಸ್ವಾಮಿ ವಿಗ್ರಹ ಪತ್ತೆಯಾಯಿತು. ಬಳಿಕ ಹುದುಗಿದ ಭೂ ವರಹ ಸ್ವಾಮಿಗೆ ಇಲ್ಲಿ ದೇವಾಲಯವನ್ನು ಕೂಡಾ ನಿರ್ಮಿಸುತ್ತಾನೆ.

ಮಣ್ಣು ಇಟ್ಟಿಗೆ ಇಟ್ಟು ಪೂಜೆ

ಮನೆ ನಿರ್ಮಾಣದ ಕನಸು ನೆರೆವೇರಿಸುವ ಭೂ ವರಹ ಸ್ಥಾಮಿಗೆ ಭಕ್ತರು ತಮ್ಮ ಭೂ ವ್ಯಾಜ್ಯಗಳು ಪರಿಹಾರವಾಗುವಂತೆ ಹರಕೆ ಹೊರತುತ್ತಾರೆ. ಅಲ್ಲದೇ, ಮರಳು ಮತ್ತು ಇಟ್ಟಿಗೆಯನ್ನು ಪೂಜೆ ಮಾಡಿಸಿ ಅದನ್ನೇ ಮನೇ ಕಟ್ಟಲು ಬಳಸಿದರೆ ಮನೆ ಕಟ್ಟುವ ಕಾರ್ಯ ಸೂಸುತ್ರವಾಗಿ ನಡೆಯುತ್ತದೆ ಎಂಬ ನಂಬಿಕೆ ಇದೆ.

Leave A Reply

Your email address will not be published.