ಮಂಗಳೂರು: ಭಜನೆಯ ಆಸಕ್ತಿ ಇದೆಯೇ!!? ಉತ್ಸಾಹಿ ಬೊಲ್ಮ ಯುಟ್ಯೂಬ್ ಚಾನೆಲ್ ನಲ್ಲಿ ಪ್ರತೀವಾರ ಬರುತ್ತಿದೆ ಗ್ರಾಮೀಣ ಯುವಕರ ಮಧುರ ಕಂಠದ ಭಜನೆ!!

ಯುಟ್ಯೂಬ್ ಚಾನೆಲ್ ನಲ್ಲಿ ಜನರನ್ನು ತನ್ನೆಡೆಗೆ ಆಕರ್ಷಸುತ್ತಿದೆ ಈ ಭಜನಾ ತಂಡ!! ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಸಂದೇಶ, ಅನಾವಶ್ಯಕ ಕಾಲಹರನ ಮಾಡುವವರ ಮಧ್ಯೆ ಉತ್ಸಾಹಿ ಯುವಕರ ತಂಡವೊಂದು ಸದ್ದಿಲ್ಲದೇ -ಯಾವುದೇ ಪ್ರಚಾರ ಬಯಸದೆ ತನ್ನ ಪಾಡಿಗೆ ತಾನು ಗ್ರಾಮೀಣ ಭಾಗದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದೆ. ವಾರಕ್ಕೊಂದು ಭಜನೆಯ ಮೂಲಕ ಜಿಲ್ಲೆಯ ಜನರನ್ನು ತಲುಪಿದಲ್ಲದೇ ಪ್ರಶಂಸೆಗೂ ಪಾತ್ರವಾಗಿದೆ.

ಹೌದು. ಹಿಂದೂ ಸಂಸ್ಕೃತಿಯಲ್ಲಿ ಭಜನೆಗೆ ಅದರದ್ದೇ ಆದ ಸ್ಥಾನಮಾನ-ಘನತೆ-ಭಕ್ತಿಯಿಂದ ಕೂಡಿದ ಗೌರವವಿದೆ. ಆಧುನಿಕ ಯುಗದಲ್ಲಿ ಭಜನೆ ಮಾಡುವ ಭಜಕರಲ್ಲಿ ವಿರಳತೆ ಕಂಡುಬರುತ್ತಿದ್ದು , ಸದ್ಯ ಜಿಲ್ಲೆಯಲ್ಲಿ ಅದೊಂದು ಭಜಕರ ತಂಡ ಮಾತ್ರ ಸದ್ದಿಲ್ಲದೇ ಸುದ್ದಿಮಾಡುತ್ತಿದೆ.ಹಾಗಾದರೆ ಆ ತಂಡ ಯಾವುದು, ತಂಡದ ಕಾರ್ಯವೈಖರಿ ಏನೆಂದು ತಿಳಿಯುವ ಉತ್ಸಾಹವಿದ್ದರೆ, ಈ ಉತ್ಸಾಹಿಗಳ ಬಗೆಗಿನ ಸ್ಟೋರಿ ನೋಡಿ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು-ಕೊಣಾಜೆ ಗ್ರಾಮದ ಬೊಲ್ಮ ಉಳ್ಳಾಳ್ತಿಯ ಅನುಗ್ರಹದೊಂದಿಗೆ, ಗ್ರಾಮದ ಉತ್ಸಾಹಿ ಯುವಕರ ಪಡೆಯೊಂದು ಭಜನೆಯ ಮೂಲಕ ಸಾಮಾಜಿಕ ಜಾಲತಾಣವಾದ ಯು ಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.ಸುಮಾರು ಆರು ವರ್ಷಗಳಿಂದ ದೇವರ ನಾಮವನ್ನು ಭಜಿಸುತ್ತ, ತನ್ನ ಗ್ರಾಮದ ಮೆಹಂದಿ, ಗೃಹ ಪ್ರವೇಶ, ದೇವಾಲಯಗಳಲ್ಲಿನ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದ ಭಜನೆ ಕಳೆದ ಆರು ತಿಂಗಳಿನಿಂದ ಯು ಟ್ಯೂಬ್ ಚಾನೆಲ್ ನಲ್ಲಿ ಹರಿದಾಡುತ್ತಿದೆ.

ಜನರಿಗೆ ಕೈಗೆಟಕುವ ಭಜನಾ ಸಾಮಗ್ರಿಗಳಾದ ತಾಳ, ಟಾಂಬೂರಿನ್ ಹಾಗೂ ಶ್ರುತಿ ಪೆಟ್ಟಿಗೆ ಬಳಸಿ ಈ ತಂಡದ ಯುವಕರು ಹಾಡುವ ಭಜನೆಯನ್ನು ಕೇಳುತ್ತಿದ್ದರೆ ಮನಸ್ಸು ಭಕ್ತಿಯ ಕಡಲಿನಲ್ಲಿ ತೆಲಾಡುವುದರಲ್ಲಿ ಎರಡು ಮಾತಿಲ್ಲ. ಯುವಕರ ಹೊಸ ಪ್ರಯತ್ನದಿಂದ ಅಳಿವಿನ ಅಂಚಿಗೆ ತೆರಳಿದ್ದ ಭಜಕರ ಸಂಖ್ಯೆಯೂ ಹೆಚ್ಚಾಗುತ್ತಿದ್ದೂ, ಇನ್ನೊಂದೆಡೆ ತಮ್ಮ ಮಕ್ಕಳೂ ಕೂಡಾ ಭಜನೆ ಮಾಡಬೇಕು, ಆ ಮೂಲಕ ಹಿಂದೂ ಸಂಸ್ಕೃತಿ ಯನ್ನು ಉಳಿಸಬೇಕು ಎಂಬಂತೆ ಭಜನಾ ಸಾಮಗ್ರಿಗಳನ್ನು ಮನೆಗೆ ಒಯ್ಯುವ ಪೋಷಕರ ಸಂಖ್ಯೆಯೂ ಹೆಚ್ಚಾಗಿದೆ.

ಇತ್ತ ಯುಟ್ಯೂಬ್ ಚಾನ್ನೆಲ್ ನಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿರುವ ಯುವಕರಿಂದಾಗಿ, ಭಜನೆ ಕಲಿಯುವ ಯುವ ಪೀಳಿಗೆಗೆ ತುಂಬಾ ಅನುಕೂಲವಾಗಿದೆ ಎಂಬುವುದು ವೀಕ್ಷಕರ ಮಾತಾಗಿದೆ. ಕೇವಲ ಆರು ತಿಂಗಳಿನಲ್ಲಿ ಎಲ್ಲೆಡೆ ಭಜನೆ ಪ್ರದರ್ಶನವನ್ನು ಬಿತ್ತರಿಸಿದ ತಂಡವು ‘ಆನ್ ಲೈನ್ ಭಜನಾ ಸ್ಪರ್ಧೆಯನ್ನು’ಏರ್ಪಡಿಸಿದ್ದು, ಯಾವುದೇ ಪ್ರದೇಶದ ಭಜಕರು ಭಾಗವಹಿಸಬಹುದಾಗಿದೆ. ಇದೇ ತಿಂಗಳ 10 ಕ್ಕೆ ಸ್ಪರ್ಧೆಯು ಕೊನೆಗೂಳ್ಳಲಿದ್ದು, ಅತೀ ಹೆಚ್ಚು ಸ್ಪರ್ಧಾರ್ಥಿಗಳನ್ನು ನಿರೀಕ್ಷಿಸಲಾಗಿದೆ.

ಅದೇನೇ ಇರಲಿ. ಹಿಂದೂ ಸಂಸ್ಕೃತಿಯ ಆಚಾರ ವಿಚಾರಗಳು ಎಲ್ಲೋ ಒಂದೆಡೆ ಮೂಲೆಗೆ ಸರಿಯುತ್ತಿದೆ ಎಂದೆಸುವ ಈ ಕಾಲಘಟ್ಟದಲ್ಲಿ ‘ಉತ್ಸಾಹಿ ತರುಣ ವೃಂದ-ಉತ್ಸಾಹಿ ಬೊಲ್ಮ’ ತಂಡದ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಬೇಕಿದೆ. ಉತ್ಸಾಹಿ ಬೊಲ್ಮ (https://youtube.com/c/UTSAHIBOLMA) ಯು ಟ್ಯೂಬ್ ಚಾನೆಲ್ ಗೆ ನಿಮ್ಮೆಲ್ಲರ ಸಹಕಾರ, ಯುವಕರು ಮುಂದಿನ ಹೆಜ್ಜೆ ಇಡುವಲ್ಲಿ ಆಶೀರ್ವಾದದ,ಮೆಚ್ಚುಗೆಯ, ಪ್ರೋತ್ಸಾಹಕ ಮಾತುಗಳು ಬೇಕಾಗಿದೆ. ಯುವಕರ ಪ್ರಯತ್ನಕ್ಕೆ ಉತ್ತಮ ಯಶಸ್ಸು ದೊರೆಯಲಿ,ಆ ಮೂಲಕ ಅಳಿವಿನಂಚಿನಲ್ಲಿರುವ ಹಿಂದೂ ಸಂಸ್ಕೃತಿ-ಆಚಾರ-ವಿಚಾರ ಅಚ್ಚಳಿಯದೆ ಉಳಿಯಲಿ ಎಂಬುವುದೇ ಆಶಯ.

ಬರಹ:ದೀಪಕ್ ಹೊಸ್ಮಠ

Leave A Reply

Your email address will not be published.