ಪುತ್ತೂರು : ವಿದ್ಯಾಮಾತಾ ಅಕಾಡೆಮಿಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ, ಆನ್ಲೈನ್ ಟ್ಯೂಶನ್ ತರಗತಿಗಳು ಆರಂಭ

ಪುತ್ತೂರು : 8,9,10 ನೇ ತರಗತಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗಿ ವಿದ್ಯಾಮಾತಾ ಅಕಾಡೆಮಿಯು ಹೆಚ್ಚುವರಿ ಬೋಧನಾ ತರಗತಿ(ಟ್ಯೂಶನ್) ನ್ನು ಆರಂಭಿಸಿದೆ.
ತರಗತಿಗಳು ಸಾಯಂಕಾಲ 6ರಿಂದ ರಾತ್ರಿ 8ರ ವರೆಗೆ
ಆನ್ಲೈನ್ ಮುಖಾಂತರ ನಡೆಯಲಿದೆ.

ಕೊರೋನಾ ಕಾರಣದಿಂದ ಕುಸಿದಿರುವ ಶೈಕ್ಷಣಿಕ ಮಟ್ಟವನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸಿ ಪರೀಕ್ಷೆಗಳಿಗೆ ತಯಾರಿಯನ್ನು ಮಾಡುವುದು ವಿದ್ಯಾಮಾತಾ ಅಕಾಡೆಮಿಯ ಉದ್ದೇಶವಾಗಿದೆ. ಆನ್ಲೈನ್ ತರಗತಿ ಗಳಲ್ಲಿ ಗರಿಷ್ಠ 25 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡುತ್ತಿದ್ದು ,ಇದು ಪ್ರತೀ ವಿದ್ಯಾರ್ಥಿಯನ್ನು ವೈಯಕ್ತಿಕವಾಗಿ ಗಮನಿಸಲು ಸಹಕಾರಿಯಾಗಿದೆ.

ಸದ್ಯ ಗಣಿತ,ವಿಜ್ಞಾನ,ಸಮಾಜ,ಇಂಗ್ಲಿಷ್ ವಿಷಯಗಳಿಗೆ ಆನ್ಲೈನ್ ತರಗತಿಗಳು ಪ್ರಾರಂಭವಾ ಗಲಿದೆ.ಪ್ರತೀ 15 ದಿನಕ್ಕೊಮ್ಮೆ ಮಾದರಿ ಪ್ರಶ್ನೆಪತ್ರಿಕೆ ಯ ಮೇಲೆ ಪರೀಕ್ಷೆಗಳನ್ನು ನಡೆಸಲಾಗುವುದು.
ಪ್ರತೀ ವಿಷಯಕ್ಕೆ 1 ಗಂಟೆಗಳ ಅವಧಿಯನ್ನು ಸೀಮಿತಗೊಳಿಸಿದ್ದು, ವಿದ್ಯಾರ್ಥಿಗಳು ಯಾವುದೇ ವಿಷಯದ ಬಗ್ಗೆ ತರಬೇತಿಯನ್ನು ಪಡೆದುಕೊಳ್ಲಲು ಅವಕಾಶ ನೀಡಲಾಗಿದೆ.

ಆಸಕ್ತರು ವಿದ್ಯಾಮಾತಾ ಅಕಾಡೆಮಿ,1 ನೇ ಮಹಡಿ, ಹಿಂದುಸ್ತಾನ್ ಕಾಂಪ್ಲೆಕ್ಸ್, ಎ. ಪಿ.ಎಂ.ಸಿ ರಸ್ತೆ, ಪುತ್ತೂರು. ಇಲ್ಲಿಗೆ ಖುದ್ದಾಗಿ ಭೇಟಿಕೊಟ್ಟು ಮಾಹಿತಿಯನ್ನು ಪಡೆಯಬಹುದು.ಇಲ್ಲವೇ 9620468869/9148935808 ಗೆ ಕರೆಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

Leave A Reply

Your email address will not be published.