ಭಾರತದಲ್ಲಿ ಓಮಿಕ್ರಾನ್ ವೈರಸ್ ಪತ್ತೆ | ಅದೂ ಕರ್ನಾಟಕದ ಇಬ್ಬರಲ್ಲಿ

ಹೊಸದಿಲ್ಲಿ: ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದ್ದ ಬಹು ರೂಪಾಂತರಿ ಓಮಿಕ್ರಾನ್ ಕೋವಿಡ್ ತಳಿ ಭಾರತದಲ್ಲಿಯೂ ಕಾಣಿಸಿಕೊಂಡಿದೆ. ದೇಶದಲ್ಲಿ ಎರಡು ಓಮಿಕ್ರಾನ್ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಎರಡೂ ಪ್ರಕರಣಗಳು ಕರ್ನಾಟಕದಲ್ಲಿ ದೃಢಪಟ್ಟಿದೆ.

ಕೇಂದ್ರ ಆರೋಗ್ಯ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯದ 46 ವರ್ಷದ ವ್ಯಕ್ತಿ ಹಾಗೂ 66 ವರ್ಷದ ವೃದ್ಧರೊಬ್ಬರಲ್ಲಿ ಓಮಿಕ್ರಾನ್ ತಳಿ ಇದೆ ಎಂದು ಗುರುವಾರ ತಿಳಿಸಿದೆ.

ಈ ಇಬ್ಬರೂ ವ್ಯಕ್ತಿಗಳು ಆಫ್ರಿಕಾದಿಂದ ಕರ್ನಾಟಕಕ್ಕೆ ಮರಳಿದ್ದರು ಎನ್ನಲಾಗಿದೆ. ಅವರ ಕೋವಿಡ್ ಪರೀಕ್ಷೆ ವರದಿಯಲ್ಲಿ ಪಾಸಿಟಿವ್ ಕಂಡುಬಂದಿದ್ದು, ವಿಭಿನ್ನ ಸ್ವರೂಪ ಕಾಣಿಸಿಕೊಂಡಿದ್ದರಿಂದ ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಮಾದರಿಗಳನ್ನು ರವಾನಿಸಲಾಗಿತ್ತು. ಈಗ ಅವರಲ್ಲಿ ಓಮಿಕ್ರಾನ್ ತಳಿ ಇರುವುದು ದೃಢಪಟ್ಟಿದೆ. ಇಬ್ಬರೂ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ

Leave A Reply

Your email address will not be published.