ಬಜ್ಪೆ: ಎರಡು ವರ್ಷಗಳ ಹಿಂದೆ ಮನೆಕಳವು ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ!! ಬಜಪೆ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ

ಕಳೆದೆರಡು ವರ್ಷಗಳ ಹಿಂದೆ ಮನೆ ಕಳವು ಪ್ರಕರಣದಲ್ಲಿ ಸುಮಾರು 5ಲಕ್ಷ ರೂಪಾಯಿ ಮೌಲ್ಯದ ಸೊತ್ತನ್ನು ಕಳವುಗೈದಿದ್ದ ಆರೋಪಿಯನ್ನು ಬಜಪೆ ಪೊಲೀಸರು ಇಂದು ಮುಂಜಾನೆ 10.30 ರ ಸುಮಾರಿಗೆ ಬಂಧಿಸಿದ್ದಾರೆ.

ಬಂಧಿತನನ್ನು ಟಿ. ಅಬ್ಬಾಸ್ ಮಿಯಾಪದವು ಎಂದು ಗುರುತಿಸಲಾಗಿದ್ದು, ಬಂಧಿತನಿಂದ ಕೃತ್ಯಕ್ಕೆ ಬಳಸಿದ ಬೈಕ್ ಸಹಿತ ಕಳವುಗೈದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆ ವಿವರ:2020 ರ ಮೇ ತಿಂಗಳಲ್ಲಿ ಅಡ್ಡುರು ಗ್ರಾಮದ ಪಲ್ಲಂಗಡಿ ಎಂಬಲ್ಲಿ ಮನೆಯೊಂದರ ಕಿಟಕಿಯ ಗಾಜು ಪುದಿಗೈದು ಮನೆಯೊಳಗಿದ್ದ ಚಿನ್ನಾಭರಣ ಸಹಿತ ನಗದು ಕಳವು ಮಾಡಲಾಗಿತ್ತು. ಕಳವು ನಡೆಸಿದ ಆರೋಪಿ ಆ ಬಳಿಕ ತನ್ನ ಹೆಸರನ್ನು ಬದಲಿಸಿಕೊಂಡು ಜಿಲ್ಲೆಯ ಬೆಳ್ತಂಗಡಿ, ಕಡಬ, ರಾಮಕುಂಜ, ಪುತ್ತೂರು, ಉಳ್ಳಾಲ, ಹಾಗೂ ಕೇರಳ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ.

ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಡಿಸಿಪಿ ಹರಿಶಂಕರ್, ಡಿಸಿಪಿ ದಿನೇಶ್ ಕುಮಾರ್ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ಬಜಪೆ ಪೊಲೀಸ್ ವೃತ್ತ ನೀರಿಕ್ಷಕ ಸಂದೇಶ್ ಪಿಜಿ, ಪಿ.ಎಸ್.ಐ ಪೂವಪ್ಪ, ರಾಘವೇಂದ್ರ ನಾಯ್ಕ್, ಶ್ರೀಮತಿ ಕಮಲ ಪ್ರೊಬೆಶನರಿ ಪಿ.ಎಸ್.ಐ ಅರುಣ್ ಕುಮಾರ್, ಸಿಬ್ಬಂದಿಗಳಾದ ರಾಮ ಪೂಜಾರಿ, ಸಂತೋಷ್, ರಶೀದ್ ಶೇಖ್, ಸುಜನ್, ಸಿದ್ದಲಿಂಗಯ್ಯ ಹಿರೇಮಠ್, ಕಮಲಾಕ್ಷ, ರಾಜೇಶ್, ಹೊನ್ನಪ್ಪ ಗೌಡ, ಪ್ರಕಾಶ್, ಸಂಜೀವ ಹಾಗೂ ಕಂಪ್ಯೂಟರ್ ವಿಭಾಗದ ಮನೋಜ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇತ್ತೀಚಿನ ದಿನಗಳಲ್ಲಿ ಅತೀ ಪ್ರಮುಖ ಪ್ರಕರಣಗಳನ್ನು ಬೇಧಿಸಿದ ಬಜಪೆ ಪೊಲೀಸ್ ತಂಡಕ್ಕೆ ಆಯುಕ್ತರು ಬಹುಮಾನ ಘೋಷಿಸಿದ್ದು, ಬಜಪೆ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

Leave A Reply

Your email address will not be published.