ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ ಪೋರ್ಟಲ್‌ನಲ್ಲಿ ನೊಂದಾಯಿಸಲು ಸೂಚನೆ | ಇ-ಶ್ರಮ್‌ನಿಂದ ಕಾರ್ಮಿಕರಿಗೆ ಶಕ್ತಿ

ಮಂಗಳೂರು: ಅಸಂಘಟಿತ ಕಾರ್ಮಿಕರ ಸಮಗ್ರ ದತ್ತಾಂಶವನ್ನು ಸಿದ್ಧಪಡಿಸಲು ಜಿಲ್ಲೆಯಲ್ಲಿರುವ 16ರಿಂದ 59 ವರ್ಷದೊಳಗಿನ ಅಸಂಘಟಿತ ಕಾರ್ಮಿಕರನ್ನು ಕಡ್ಡಾಯ ವಾಗಿ ಈ ಶ್ರಮ ಪೋರ್ಟಲ್‌ನಲ್ಲಿ ನೋಂದಾಯಿಸುವಂತೆ ಜಿಲ್ಲಾಧಿ ಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಕಾರ್ಮಿಕ ಇಲಾಖೆಯ ಅಧಿ ಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Ad Widget

ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡಾಟಾಬೇಸ್‌ ರಚಿಸುವ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೋರ್ಟಲ್‌ನಲ್ಲಿ ನೊಂದಾ ಯಿಸುವುದರಿಂದ ಅಸಂಘಟಿತ ಕಾರ್ಮಿಕರು ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳ ಲಾಭ ಪಡೆಯುತ್ತಾರೆ. ಅಲ್ಲದೇ ಸರಕಾರಕ್ಕೆ ವಿಶೇಷ ನೀತಿಗಳು ಹಾಗೂ ಯೋಜನೆಗಳನ್ನು ರೂಪಿಸಲು ಅನುಕೂಲವಾಗಲಿದೆ. ಕಾರ್ಮಿಕರು ಆಕಸ್ಮಿಕವಾಗಿ ಸಾವಿಗೀಡಾದರೆ ಹಾಗೂ ಪೂರ್ಣ ಅಂಗವೈಕಲ್ಯಕ್ಕೆ ಒಳಗಾದರೆ ಎರಡು ಲಕ್ಷ ರೂ.ಗಳ ನೆರವು ಪಡೆಯ ಲಿದ್ದಾರೆ. ಪ್ರಮುಖವಾಗಿ ಇದು ವಲಸೆ ಕಾರ್ಮಿಕರನ್ನು ಪತ್ತೆ ಹಚ್ಚಲು ನೆರವು ನೀಡುತ್ತದೆ ಹಾಗೂ ಅವರಿಗೆ ಉದ್ಯೋಗವಕಾಶಗಳನ್ನು ಒದಗಿಸಿಕೊಡುತ್ತದೆ ಎಂದು ಹೇಳಿದರು.

Ad Widget . . Ad Widget . Ad Widget . Ad Widget

Ad Widget

16ರಿಂದ 59 ವರ್ಷದೊಳಗಿನವರು, ಇಎಸ್‌ ಐ ಹಾಗೂ ಪಿಎಫ್‌ ಇರದ, ಆದಾಯ ತೆರಿಗೆಗೆ ಒಳಪಡದವರು, ಆಧಾರ್‌ ಕಾರ್ಡ್‌, ಆಧಾರ್‌ಗೆ ಜೋಡಣೆಯಾದ ಮೊಬೈಲ್‌ ಸಂಖ್ಯೆ ಹಾಗೂ ಬ್ಯಾಂಕ್‌ ಖಾತೆ ವಿವರಗಳನ್ನು ಇ-ಶ್ರಮ ಪೋರ್ಟಲ್‌ http://www.eshram.gov.in ನಲ್ಲಿ ಸ್ವಯಂ ನೋಂದಣಿ ಮಾಡಿ ಕೊಳ್ಳಬಹುದು ಎಂದು ಹೇಳಿದರು.

Ad Widget
Ad Widget Ad Widget

ಈ ಶ್ರಮ ಪೋರ್ಟಲ್‌ನಲ್ಲಿ ನೋಂದಣಿ ಉಚಿತ ವಾಗಿದ್ದು, ನೋಂದಣಿಯ ಅನಂತರ ಫಲಾನುಭವಿ ಗಳು ಗುರುತಿನ ಚೀಟಿ ಪಡೆಯಬಹುದಾಗಿದೆ. ಅಸಂಘಟಿತ ವಲಯದ ಕಾರ್ಮಿಕರ ನೋಂದಣಿ ಪ್ರಕ್ರಿಯೆ ಪರಿಶೀಲಿಸಿ ಜಿಲ್ಲಾ ಮಟ್ಟದ ಜಾರಿ ಸಮಿತಿ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಜಿ. ಪಂ. ಸಿಇಒ ಡಾ| ಕುಮಾರ್‌, ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌, ಸಹಾಯಕ ಕಾರ್ಮಿಕ ಆಯುಕ್ತ ಶಿವಕುಮಾರ್‌, ಕಾರ್ಮಿಕ ಅಧಿಕಾರಿಗಳಾದ ಕಾವೇರಿ, ಅಮರೇಂದ್ರ, ಕಾರ್ಮಿಕ ನಿರೀಕ್ಷಕರು, ಬೀಡಿ, ಟೈಲರಿಂಗ್‌, ಅಕ್ಕಸಾಲಿಗ ಸೇರಿದಂತೆ ವಿವಿಧ ಅಸಂಘಟಿತ ವಲಯಗಳ ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Leave a Reply

error: Content is protected !!
Scroll to Top
%d bloggers like this: