Day: December 2, 2021

ಪುತ್ತೂರು : ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 7 ತಿಂಗಳ ಮಗುವಿನ ತಾಯಿ

ಪುತ್ತೂರು, ಡಿ 2: ವಿವಾಹಿತೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ದಾರಂದಕ್ಕುಕ್ಕು ಎಂಬಲ್ಲಿಡಿ.2 ರಂದು ಮಧ್ಯಾಹ್ನ ನಡೆದಿದೆ. ದಾರಂದಕ್ಕುಕ್ಕು ನಿವಾಸಿ ಹಾಗು ಪುತ್ತೂರಿನ ಕಾಮತ್ ಸ್ವೀಟ್ಸ್ ನಲ್ಲಿ ಉದ್ಯೋಗದಲ್ಲಿರುವ ಭಾಸ್ಕರ್ ಪ್ರಭು ರವರ ಪತ್ನಿ ಆಶಿಕಾ(20) ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ. ಮೃತರು ಪತಿ, 7 ತಿಂಗಳ ಮಗು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಈಕೆಯ ವಿವಾಹವೂ ಸುಮಾರು ಎರಡು ವರ್ಷ ಹಿಂದೆ ನಡದಿತ್ತು. ಆಶಿಕಾರವರು ಚಿಕ್ಕ ವಯಸ್ಸಿನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದರು. ವಿವಾಹದ ಬಳಿಕವೂ ಇದಕ್ಕೆ …

ಪುತ್ತೂರು : ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 7 ತಿಂಗಳ ಮಗುವಿನ ತಾಯಿ Read More »

ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಯುವಕರು ಹೊಯಿ ಕೈ – 6 ಮಂದಿ ವಿರುದ್ಧ ಶಾಂತಿ ಭಂಗ ಪ್ರಕರಣ ದಾಖಲು

ಪುತ್ತೂರು: ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯುವಕರ ನಡುವೆ ಹೊಯಿ ಕೈ ನಡೆದ ಘಟನೆ ಡಿ.2ರಂದುಬೆಳಿಗ್ಗೆ ನಡೆದಿದ್ದು, ವಿಷಯ ತಿಳಿದು ಪೊಲೀಸರು ಬರುವಾಗಗುಂಪು ಚದುರಿದ ಘಟನೆ ನಡೆದಿತ್ತು. ಆದರೆ ಪೊಲೀಸರುಹೊಯಿ ಕೈ ನಡೆಸುತ್ತಿದ್ದ 6 ಮಂದಿಯ ವಿರುದ್ಧ ಪ್ರಕರಣದಾಖಲಿಸಿಕೊಂಡಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯ ವೆಂಕಟ್ರಮಣ ಅವರು ರೌಂಡ್‌ನಲ್ಲಿರುವಾಗ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಸುಮಾರು ಆರೇಳು ಮಂದಿ ಹೊಯಿ ಕೈ ನಡೆಸುತ್ತಿದ್ದು, ಶಾಂತಿ ಮತ್ತು ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿದ್ದರು. ತಕ್ಷಣ ಅವರು ಸ್ಥಳಕ್ಕೆ ತೆರಳಿ ಹೊಯಿ …

ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಯುವಕರು ಹೊಯಿ ಕೈ – 6 ಮಂದಿ ವಿರುದ್ಧ ಶಾಂತಿ ಭಂಗ ಪ್ರಕರಣ ದಾಖಲು Read More »

ಮಂಗಳೂರು: ಭಜನೆಯ ಆಸಕ್ತಿ ಇದೆಯೇ!!? ಉತ್ಸಾಹಿ ಬೊಲ್ಮ ಯುಟ್ಯೂಬ್ ಚಾನೆಲ್ ನಲ್ಲಿ ಪ್ರತೀವಾರ ಬರುತ್ತಿದೆ ಗ್ರಾಮೀಣ ಯುವಕರ ಮಧುರ ಕಂಠದ ಭಜನೆ!!

ಯುಟ್ಯೂಬ್ ಚಾನೆಲ್ ನಲ್ಲಿ ಜನರನ್ನು ತನ್ನೆಡೆಗೆ ಆಕರ್ಷಸುತ್ತಿದೆ ಈ ಭಜನಾ ತಂಡ!! ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಸಂದೇಶ, ಅನಾವಶ್ಯಕ ಕಾಲಹರನ ಮಾಡುವವರ ಮಧ್ಯೆ ಉತ್ಸಾಹಿ ಯುವಕರ ತಂಡವೊಂದು ಸದ್ದಿಲ್ಲದೇ -ಯಾವುದೇ ಪ್ರಚಾರ ಬಯಸದೆ ತನ್ನ ಪಾಡಿಗೆ ತಾನು ಗ್ರಾಮೀಣ ಭಾಗದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದೆ. ವಾರಕ್ಕೊಂದು ಭಜನೆಯ ಮೂಲಕ ಜಿಲ್ಲೆಯ ಜನರನ್ನು ತಲುಪಿದಲ್ಲದೇ ಪ್ರಶಂಸೆಗೂ ಪಾತ್ರವಾಗಿದೆ. ಹೌದು. ಹಿಂದೂ ಸಂಸ್ಕೃತಿಯಲ್ಲಿ ಭಜನೆಗೆ ಅದರದ್ದೇ ಆದ ಸ್ಥಾನಮಾನ-ಘನತೆ-ಭಕ್ತಿಯಿಂದ ಕೂಡಿದ ಗೌರವವಿದೆ. ಆಧುನಿಕ ಯುಗದಲ್ಲಿ ಭಜನೆ ಮಾಡುವ ಭಜಕರಲ್ಲಿ ವಿರಳತೆ ಕಂಡುಬರುತ್ತಿದ್ದು …

ಮಂಗಳೂರು: ಭಜನೆಯ ಆಸಕ್ತಿ ಇದೆಯೇ!!? ಉತ್ಸಾಹಿ ಬೊಲ್ಮ ಯುಟ್ಯೂಬ್ ಚಾನೆಲ್ ನಲ್ಲಿ ಪ್ರತೀವಾರ ಬರುತ್ತಿದೆ ಗ್ರಾಮೀಣ ಯುವಕರ ಮಧುರ ಕಂಠದ ಭಜನೆ!! Read More »

ಪುತ್ತೂರು : ವಿದ್ಯಾಮಾತಾ ಅಕಾಡೆಮಿಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ, ಆನ್ಲೈನ್ ಟ್ಯೂಶನ್ ತರಗತಿಗಳು ಆರಂಭ

ಪುತ್ತೂರು : 8,9,10 ನೇ ತರಗತಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗಿ ವಿದ್ಯಾಮಾತಾ ಅಕಾಡೆಮಿಯು ಹೆಚ್ಚುವರಿ ಬೋಧನಾ ತರಗತಿ(ಟ್ಯೂಶನ್) ನ್ನು ಆರಂಭಿಸಿದೆ.ತರಗತಿಗಳು ಸಾಯಂಕಾಲ 6ರಿಂದ ರಾತ್ರಿ 8ರ ವರೆಗೆಆನ್ಲೈನ್ ಮುಖಾಂತರ ನಡೆಯಲಿದೆ. ಕೊರೋನಾ ಕಾರಣದಿಂದ ಕುಸಿದಿರುವ ಶೈಕ್ಷಣಿಕ ಮಟ್ಟವನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸಿ ಪರೀಕ್ಷೆಗಳಿಗೆ ತಯಾರಿಯನ್ನು ಮಾಡುವುದು ವಿದ್ಯಾಮಾತಾ ಅಕಾಡೆಮಿಯ ಉದ್ದೇಶವಾಗಿದೆ. ಆನ್ಲೈನ್ ತರಗತಿ ಗಳಲ್ಲಿ ಗರಿಷ್ಠ 25 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡುತ್ತಿದ್ದು ,ಇದು ಪ್ರತೀ ವಿದ್ಯಾರ್ಥಿಯನ್ನು ವೈಯಕ್ತಿಕವಾಗಿ ಗಮನಿಸಲು ಸಹಕಾರಿಯಾಗಿದೆ. ಸದ್ಯ ಗಣಿತ,ವಿಜ್ಞಾನ,ಸಮಾಜ,ಇಂಗ್ಲಿಷ್ ವಿಷಯಗಳಿಗೆ ಆನ್ಲೈನ್ ತರಗತಿಗಳು …

ಪುತ್ತೂರು : ವಿದ್ಯಾಮಾತಾ ಅಕಾಡೆಮಿಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ, ಆನ್ಲೈನ್ ಟ್ಯೂಶನ್ ತರಗತಿಗಳು ಆರಂಭ Read More »

ಭಾರತದಲ್ಲಿ ಓಮಿಕ್ರಾನ್ ವೈರಸ್ ಪತ್ತೆ | ಅದೂ ಕರ್ನಾಟಕದ ಇಬ್ಬರಲ್ಲಿ

ಹೊಸದಿಲ್ಲಿ: ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದ್ದ ಬಹು ರೂಪಾಂತರಿ ಓಮಿಕ್ರಾನ್ ಕೋವಿಡ್ ತಳಿ ಭಾರತದಲ್ಲಿಯೂ ಕಾಣಿಸಿಕೊಂಡಿದೆ. ದೇಶದಲ್ಲಿ ಎರಡು ಓಮಿಕ್ರಾನ್ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಎರಡೂ ಪ್ರಕರಣಗಳು ಕರ್ನಾಟಕದಲ್ಲಿ ದೃಢಪಟ್ಟಿದೆ. ಕೇಂದ್ರ ಆರೋಗ್ಯ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯದ 46 ವರ್ಷದ ವ್ಯಕ್ತಿ ಹಾಗೂ 66 ವರ್ಷದ ವೃದ್ಧರೊಬ್ಬರಲ್ಲಿ ಓಮಿಕ್ರಾನ್ ತಳಿ ಇದೆ ಎಂದು ಗುರುವಾರ ತಿಳಿಸಿದೆ. ಈ ಇಬ್ಬರೂ ವ್ಯಕ್ತಿಗಳು ಆಫ್ರಿಕಾದಿಂದ ಕರ್ನಾಟಕಕ್ಕೆ ಮರಳಿದ್ದರು …

ಭಾರತದಲ್ಲಿ ಓಮಿಕ್ರಾನ್ ವೈರಸ್ ಪತ್ತೆ | ಅದೂ ಕರ್ನಾಟಕದ ಇಬ್ಬರಲ್ಲಿ Read More »

ಬಜ್ಪೆ: ಎರಡು ವರ್ಷಗಳ ಹಿಂದೆ ಮನೆಕಳವು ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ!! ಬಜಪೆ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ

ಕಳೆದೆರಡು ವರ್ಷಗಳ ಹಿಂದೆ ಮನೆ ಕಳವು ಪ್ರಕರಣದಲ್ಲಿ ಸುಮಾರು 5ಲಕ್ಷ ರೂಪಾಯಿ ಮೌಲ್ಯದ ಸೊತ್ತನ್ನು ಕಳವುಗೈದಿದ್ದ ಆರೋಪಿಯನ್ನು ಬಜಪೆ ಪೊಲೀಸರು ಇಂದು ಮುಂಜಾನೆ 10.30 ರ ಸುಮಾರಿಗೆ ಬಂಧಿಸಿದ್ದಾರೆ. ಬಂಧಿತನನ್ನು ಟಿ. ಅಬ್ಬಾಸ್ ಮಿಯಾಪದವು ಎಂದು ಗುರುತಿಸಲಾಗಿದ್ದು, ಬಂಧಿತನಿಂದ ಕೃತ್ಯಕ್ಕೆ ಬಳಸಿದ ಬೈಕ್ ಸಹಿತ ಕಳವುಗೈದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆ ವಿವರ:2020 ರ ಮೇ ತಿಂಗಳಲ್ಲಿ ಅಡ್ಡುರು ಗ್ರಾಮದ ಪಲ್ಲಂಗಡಿ ಎಂಬಲ್ಲಿ ಮನೆಯೊಂದರ ಕಿಟಕಿಯ ಗಾಜು ಪುದಿಗೈದು ಮನೆಯೊಳಗಿದ್ದ ಚಿನ್ನಾಭರಣ ಸಹಿತ ನಗದು ಕಳವು ಮಾಡಲಾಗಿತ್ತು. ಕಳವು …

ಬಜ್ಪೆ: ಎರಡು ವರ್ಷಗಳ ಹಿಂದೆ ಮನೆಕಳವು ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ!! ಬಜಪೆ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ Read More »

ಕಡಬ : ಪ್ರವಾಸಿ ಬಂಗಲೆಯಲ್ಲಿ ವ್ಯಕ್ತಿಯ ಶವ ಪತ್ತೆ | ಮೃತದೇಹದ ಮೇಲೆ ಬೆಂಕಿಯ ಗುಳ್ಳೆಗಳು

ಕಡಬ : ಪೇಟೆಯಲ್ಲಿರುವ ಪಾಳು ಬಿದ್ದ ಪ್ರವಾಸಿ ಬಂಗಲೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹದಲ್ಲಿ ಬೆಂಕಿ ತಾಗಿದ ಗುಳ್ಳೆಗಳು ಕಾಣುತ್ತಿದ್ದು,ವ್ಯಕ್ತಿ ಮಲಗಿದ್ದ ಚಾಪೆಯೂ ಬೆಂಕಿಯಿಂದ ಕರಟಿದ ರೀತಿಯಲ್ಲಿ ಇದೆ.ಆದರೂ ಪ್ರವಾಸಿ ಬಂಗಲೆಗೆ ಬೀಗ ಹಾಕಲಿಲ್ಲವೇ ಎಂಬುದು ಪ್ರಶ್ನೆಯಾಗಿದೆ. ಈ ವ್ಯಕ್ತಿಯನ್ನು ಉಳಿಪ್ಪು ನಿವಾಸಿ ಮೊನಚ್ಚೋನ್ ಎಂದು ಗುರುತಿಸಲಾಗಿದ್ದು, ಪಾಳುಬಿದ್ದ ಬಂಗಲೇಯಲ್ಲಿ ಈ ವ್ಯಕ್ತಿ ವಾಸವಾಗಿದ್ದರು ಎಂಬ ಸುದ್ದಿಯೂ ಕೇಳಿ ಬರುತ್ತಿದೆ. ಕಳೆದ ಆಗಸ್ಟ್ ನಲ್ಲಿ ಪಾಳು ಬಿದ್ದ ಬಂಗಲೆಯ ಕುರಿತಾಗಿ ಹೊಸಕನ್ನಡ ವಿಸ್ತೃತ ವರದಿ ಮಾಡಿತ್ತು..ಅದರ …

ಕಡಬ : ಪ್ರವಾಸಿ ಬಂಗಲೆಯಲ್ಲಿ ವ್ಯಕ್ತಿಯ ಶವ ಪತ್ತೆ | ಮೃತದೇಹದ ಮೇಲೆ ಬೆಂಕಿಯ ಗುಳ್ಳೆಗಳು Read More »

ಪುತ್ತೂರು : ವಿವೇಕಾನಂದ ಕಾಲೇಜಿನಲ್ಲಿ ಸಿ ಎ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

ಪುತ್ತೂರು: ಸ್ಪರ್ಧಾತ್ಮಕ ಜೀವನದಲ್ಲಿ ವಾಸ್ತವ ಬದುಕಿಗೆ ಪೂರಕವಾಗಿರುವ ಸಂವಹನ ಕೌಶಲ ಮತ್ತು ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವದಲ್ಲಿ ರೂಢಿಸಿಕೊಳ್ಳಬೇಕಾದ ಅಗತ್ಯವಿದೆ. ನಿರಂತರ ಪರಿಶ್ರಮದಿಂದ ಮಾತ್ರ ಸಿ.ಎ ಯಂತಹ ವೃತ್ತಿಪರ ಕೋರ್ಸುಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ವಿವೇಕಾನಂದ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರವಿಕಲಾ ಹೇಳಿದರು. ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಸಿ ಎ ಸ್ಟಡೀಸ್(ವಿಕಾಸ್), ವಿವೇಕಾನಂದ ಪದವಿಪೂರ್ವ ಮತ್ತು ಪದವಿ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ಸಿ ಎ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ …

ಪುತ್ತೂರು : ವಿವೇಕಾನಂದ ಕಾಲೇಜಿನಲ್ಲಿ ಸಿ ಎ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ Read More »

ರಾಜಾರೋಷವಾಗಿ ಕಾಲೇಜಿಗೆ ಎಂಟ್ರಿ ಕೊಟ್ಟ ಚಿರತೆ !! |
ಹಾಡುಹಗಲೇ ವಿದ್ಯಾರ್ಥಿಯ ಮೇಲೆ ದಾಳಿ, ಹೆದರಿ ಕಾಲೇಜಿಗೆ ಕಾಲಿಡುತ್ತಿಲ್ಲ ವಿದ್ಯಾರ್ಥಿಗಳು

ಕಾಡು ಪ್ರಾಣಿಗಳು ಇತ್ತೀಚಿಗೆ ನಾಡಿಗೆ ಬರುತ್ತಿರುವುದು ಮಾಮೂಲಾಗಿ ಹೋಗಿದೆ. ಅದೆಷ್ಟೋ ಪ್ರದೇಶಗಳಲ್ಲಿ ಅವುಗಳು ಓಡಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಹಾಗೆಯೇ ಇಲ್ಲಿ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ನೇರವಾಗಿ ಕಾಲೇಜಿಗೆ ನುಗ್ಗಿದೆ. ಆಲಿಘಡ್ ಸಮೀಪ ಚಾ ಎಂಬಲ್ಲಿ ಈ ಘಟನೆ ನಡೆದಿದೆ. ಹಾಡುಹಗಲೇ ಕಾಲೇಜಿಗೆ ನುಗ್ಗಿದ ಚಿರತೆ ದಾಳಿಗೆ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾನೆ. ಚಿರತೆ ರಾಜಾರೋಷವಾಗಿ ಕಾಲೇಜಿಗೆ ಎಂಟ್ರಿ ಕೊಟ್ಟ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಆತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದುಬಂದಿದೆ. …

ರಾಜಾರೋಷವಾಗಿ ಕಾಲೇಜಿಗೆ ಎಂಟ್ರಿ ಕೊಟ್ಟ ಚಿರತೆ !! |
ಹಾಡುಹಗಲೇ ವಿದ್ಯಾರ್ಥಿಯ ಮೇಲೆ ದಾಳಿ, ಹೆದರಿ ಕಾಲೇಜಿಗೆ ಕಾಲಿಡುತ್ತಿಲ್ಲ ವಿದ್ಯಾರ್ಥಿಗಳು
Read More »

error: Content is protected !!
Scroll to Top