ನಿಯಂತ್ರಣ ತಪ್ಪಿ ಪಲ್ಟಿಯಾದ ಪಿಕಪ್ ,ಚಾಲಕ ಸ್ಥಳದಲ್ಲೇ ಮೃತ್ಯು

ಮೂಡಬಿದಿರೆ : ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ, ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂಡೇಲುಸುತ್ತಿನಲ್ಲಿ ನಡೆದಿದೆ.

ಮೃತ ಚಾಲಕನನ್ನು ಎಡಪದವು ಕನ್ನೊಳಿ ನಿವಾಸಿ ಯಾದವ (38) ಎಂದು ಗುರುತಿಸಲಾಗಿದೆ.

ಮಂಗಳವಾರ ರಾತ್ರಿ ಅವರು ಮೂಡಬಿದಿರೆಯಿಂದ ಎಡಪದವಿಗೆ ಪಿಕ್ ವಾಹನ ಚಲಾಯಿಸುತ್ತಿದ್ದು , ಹಂಡೇಲು ತಿರುವಿನಲ್ಲಿ ಪಿಕ್ ಅಪ್ ಪಲ್ಟಿಯಾಗಿ, ತೆಂಗಿನ ಮರಕ್ಕೆ ಢಿಕ್ಕಿಯಾಗಿದೆ. ಪರಿಣಾಮ ಯಾದವ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.