ಸಮುದ್ರದಲ್ಲಿ ಮುಳುಗಿದ್ದ 69 ವರ್ಷದ ಇಳಿವಯಸ್ಸಿನ ವ್ಯಕ್ತಿ 22 ಗಂಟೆಗಳ ಬಳಿಕ ಪವಾಡ ಸದೃಶವೆಂಬತೆ ಜೀವಂತವಾಗಿ ಪತ್ತೆ !! | ಇದು ಹೇಗೆ ಸಾಧ್ಯ?? ಇಲ್ಲಿದೆ ನೋಡಿ ಆ ರೋಚಕ ಸ್ಟೋರಿ

ಪ್ರಪಂಚದಲ್ಲಿ ದಿನಕ್ಕೊಂದೊಂದು ರೀತಿಯ ಘಟನೆಗಳು ನಡೆಯುತ್ತಿರುತ್ತವೆ. ಹಾಗೆಯೇ ಇಲ್ಲೊಂದು ಘಟನೆ ನಡೆದಿದ್ದು, ಇದರಲ್ಲಿ ಇಳಿವಯಸ್ಸಿನ ವ್ಯಕ್ತಿಯೊಬ್ಬರು ಪವಾಡಸದೃಶವೆಂಬಂತೆ ಬದುಕುಳಿದಿದ್ದಾರೆ. ದಕ್ಷಿಣ ಜಪಾನ್‍ನ ಸಮುದ್ರದಲ್ಲಿ ಮುಳುಗಿದ್ದ 69 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಸುಮಾರು 22 ಗಂಟೆಗಳ ನಂತರ ಪತ್ತೆಯಾಗಿದ್ದಾರೆ.

ಜಪಾನ್ ನ 69 ವರ್ಷದ ವ್ಯಕ್ತಿಯೊಬ್ಬ ಶನಿವಾರ ಮಧ್ಯಾಹ್ನ ಯಕುಶಿಮಾದಲ್ಲಿ ಬಂದರು ನಿರ್ಮಾಣ ಯೋಜನೆಗಾಗಿ ದೋಣಿಯಲ್ಲಿ ಏಕಾಂಗಿಯಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಹವಾಮಾನ ವ್ಯಪರಿತ್ಯದಿಂದ ದೋಣಿ ಮುಳುಗಿದೆ.

ಈ ಸಂಬಂಧ ಇವರನ್ನು ರಕ್ಷಿಸಲು ಸಹೋದ್ಯೋಗಿಗಳು ಕೋಸ್ಟ್ ಗಾರ್ಡ್ ರನ್ನು ಸಂಪರ್ಕಿಸುತ್ತಾರೆ. ನಂತರ ಅವರು ಬಂದು ಕಾರ್ಯಚರಣೆ ಮಾಡಿದ 22 ಗಂಟೆಗಳ ನಂತರ ಇವರು ಪತ್ತೆಯಾಗಿದ್ದಾರೆ.

ಆತನ ಬಳಿ ಪ್ರೊಟೆಕ್ಟಿವ್ ಕವರ್ ಇದ್ದ ಕಾರಣ ದೋಣಿ ಮುಳುಗಿದ ಕೂಡಲೇ ಅದು ಓಪನ್ ಆಗಿದೆ. ಹಾಗಾಗಿ ಅವರಿಗೆ ಏನು ಆಗಿಲ್ಲ. ಅವರನ್ನು ರಕ್ಷಿಸಲು ತಂಡವೊಂದು ಕಾರ್ಯಾಚರಣೆ ಮಾಡಿ ಕೊನೆಗೆ ಯಕುಶಿಮಾದ ಒನೊಯಿಡಾ ಬಂದರಿನಿಂದ ಸುಮಾರು 30 ಕಿ.ಮೀ ದೂರದಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ರಕ್ಷಣಾ ತಂಡ ಅವರನ್ನು ಹುಡುಕುತ್ತಿದ್ದ ವೇಳೆ ನೀರಿನ ತಾಪಮಾನವು ಸುಮಾರು 23 ಡಿಗ್ರಿ ಸೆಲ್ಸಿಯಸ್ ಇತ್ತು. ಅದು ಅಲ್ಲದೇ ಬಿರುಗಾಳಿ ಮತ್ತು ಭಾರೀ ಮಳೆ ಸಹ ಇತ್ತು. ಆದರೂ ರಕ್ಷಣಾ ತಂಡ ಅವರನ್ನು ಹುಡುಕಿದೆ. 22 ಗಂಟೆಗಳ ಬಳಿಕ 30 ಕಿ.ಮೀ ದೂರದಲ್ಲಿ ಅವರು ಪವಾಡ ಸದೃಶವೆಂಬಂತೆ ಜೀವಂತವಾಗಿ ಸಿಕ್ಕಿದ್ದಾರೆ. ಈ ಘಟನೆಯಿಂದ ಅವರ ಕಾಲಿಗೆ ಸಣ್ಣಗಾಯವಾಗಿದ್ದು, ಬೇರೆ ಯಾವ ರೀತಿಯ ಪ್ರಾಣಪಾಯವಿಲ್ಲ ಎಂದು ಹೇಳಲಾಗಿದೆ.

Leave A Reply

Your email address will not be published.