ವಾಹನದ ನೊಂದಣಿ ಸಂಖ್ಯೆಯಿಂದ ವಿದ್ಯಾರ್ಥಿನಿಗೆ ಕಿರಿಕಿರಿ,ನಂಬರ್ ಬದಲಾವಣೆಗೆ ಮುಂದಾದ ಪಾಲಕರು,ಆದರೆ ಇದು ಸಾಧ್ಯವೇ?

ದೆಹಲಿ : ನಿಮ್ಮ ಹೊಸ ವಾಹನದ ಸಂಖ್ಯೆ ನಿಮಗೆ ಮುಜುಗರಕ್ಕೆ ಕಾರಣವಾದರೆ ನೀವೇನ್ ಮಾಡ್ತಿರಾ? ಹೀಗೊಂದು ಪ್ರಶ್ನೆ ನಿಮಗೆ ಆಶ್ಚರ್ಯ ಎನಿಸಬಹುದು. ಇಂತಹ ಆಶ್ಚರ್ಯದ ಪ್ರಶ್ನೆ ಹುಟ್ಟೋಕೆ ಕಾರಣ ಸ್ಕೂಟಿ ನಂಬರ್ !

ದೆಹಲಿಯಿಂದ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಸ್ಕೂಟಿವನಂಬರ್ ಸಖತ್ ತೊಂದರೆ ಕೊಟ್ಟಿದೆ. ಯಾಕಂದ್ರೆ ಈ ವಿದ್ಯಾರ್ಥಿನಿಯ ಸ್ಕೂಟಿಯ ಮೇಲೆಯೇ ಎಲ್ಲರ ಕಣ್ಣು. ಕಳೆದ ತಿಂಗಳು ಈ ವಿದ್ಯಾರ್ಥಿನಿಯ ಹುಟ್ಟುಹಬ್ಬವಾಗಿತ್ತು. ಹುಟ್ಟುಹಬ್ಬದ ಉಡುಗೊರೆಯಾಗಿ ತಂದೆಯಿಂದ ಸ್ಕೂಟಿ ಬೇಕೆಂದು ಬೇಡಿಕೆ ಇಟ್ಟಿದ್ದಳು ಈಕೆ, ಮಗಳು ಕಾಲೇಜಿಗೆ ಹೋಗುತ್ತಿರುವ ಕಾರಣ ತಂದೆ ತನ್ನ ಉಳಿತಾಯದಿಂದ ಅವಳಿಗೊಂದು ಸ್ಕೂಟಿ ಬುಕ್ ಮಾಡಿದ್ದಾರೆ.

ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು. ಆದರೆ ಸ್ಕೂಟಿ ಬಂದಿದ್ದೇ ಬಂದಿದ್ದು, ಈಕೆಗೆ ಟೆನ್ಸನ್ ಶುರುವಾಯಿತು. ಸ್ಕೂಟಿ ಸಂಖ್ಯೆಯಿಂದ ತೊಂದರೆ ಪ್ರಾರಂಭವಾಯಿತು. RTO ನಿಂದ ಪಡೆದ ಸಂಖ್ಯೆಯು ಸಂಖ್ಯೆಗಳ ಮಧ್ಯದಲ್ಲಿ S.E.X ಅಕ್ಷರಮಾಲೆಯಾಗಿತ್ತು. ಬೈಕಿನ ನಂಬರ್ ಪ್ಲೇಟ್ ಹಾಕಲು ಹೋದ ವಿದ್ಯಾರ್ಥಿನಿಯ ಅಣ್ಣನಿಗೆ ಈ ಮೂರು ಅಕ್ಷರಗಳು ತನ್ನ ಸಂಸಾರದ ಸಮಸ್ಯೆಗಳನ್ನು ಹೆಚ್ಚಿಸಲಿವೆ ಎಂಬ ಅರಿವೇ ಇರಲಿಲ್ಲ.
ಏಕೆಂದರೆ ವಾಹನದ ನಂಬರ್ ಪ್ಲೇಟ್ ಮೇಲೆ ಬರೆದಿರುವ SEX ವರ್ಣಮಾಲೆಯು ಅನೇಕ ಜನರಿಗೆ ವಿಚಿತ್ರವಾಗಿ ಕಾಣೋಕೆ ಶುರುವಾಯಿತು. ಹೀಗೆ ಎಲ್ಲರ ಗೇಲಿ ಟೀಕೆಗಳಿಂದ ಬೇಸತ್ತ ವಿದ್ಯಾರ್ಥಿನಿಗೆ ಇದೀಗ ಮನೆಯಿಂದ ಹೊರ ಬರುವುದೂ ಕಷ್ಟವಾಗಿದೆ.

ಪಾಪ ಆಸೆಯಿಂದ ಮಗಳಿಗೆ ಸ್ಕೂಟಿ ಕೊಡಿಸಿದ ತಂದೆಗೂ ಇದರಿಂದ ನಿರಾಸೆಯಾಗಿದೆ. ಈಗ ತನ್ನ ವಾಹನದ ಸಂಖ್ಯೆಯನ್ನು ಬದಲಾಯಿಸಲು ಬಯಸಿದ್ದಾರೆ.ಆದರೆ ಇದು ಸಾಧ್ಯವೇ ಎಂಬುದು ಇಲ್ಲಿ ಪ್ರಶ್ನೆಯಾಗಿದೆ.

Leave A Reply

Your email address will not be published.