ಗೂಗಲ್ ಮ್ಯಾಪ್ ನೋಡಿಕೊಂಡು ವಾಹನ ಚಲಾಯಿಸುವ ಸವಾರರಿಗೊಂದು ಗುಡ್ ನ್ಯೂಸ್ !! | ಹೊಸದಾಗಿ ಬಂದಿದೆ ‘ಗೂಗಲ್ ಮ್ಯಾಪ್ ಸ್ಪೀಡೋಮೀಟರ್ ‘ಎಂಬ ಅದ್ಭುತ ಫೀಚರ್

ಅದೆಷ್ಟೋ ಸವಾರರು ಅತಿಯಾದ ವೇಗದಿಂದ ವಾಹನ ಓಡಿಸಿ ಪೊಲೀಸ್ ಕೈಗೆ ಸಿಕ್ಕಿ ಬಿದ್ದು ದಂಡ ಕಟ್ಟಿರುತ್ತಾರೆ. ಅಲ್ಲದೇ ವೇಗವಾದ ಪ್ರಯಾಣದಿಂದ ಅಪಘಾತ ಸಂಭವಿಸಿ ಮರಣ ಹೊಂದಿದವರು ಅದೆಷ್ಟೋ ಮಂದಿ. ಇದೀಗ ನಮ್ಮ ಜಗತ್ತು ತಂತ್ರಜ್ಞಾನಗಳಲ್ಲಿ ಎಷ್ಟು ಅದ್ಭುತವಾಗಿದೆ ಎಂದರೆ ದಿನದಿಂದ ದಿನಕ್ಕೆ ಒಂದಲ್ಲ ಒಂದು ಮಾದರಿಯ ಯಂತ್ರಗಳು ಬರುತ್ತಲೇ ಇದೆ. ಇದೇ ರೀತಿ ಇದೀಗ ವಾಹನ ಸವಾರರಿಗೂ ಅತಿಯಾದ ವೇಗದಲ್ಲಿ ಯಾವ ನಿರ್ಜನ ಪ್ರದೇಶದಲ್ಲಿ ಸಾಗುತ್ತಿದ್ದರೂ,ಇದು ಸೂಚನೆ ನೀಡಿ ಅಪಾಯದಿಂದ ರಕ್ಷಿಸುತ್ತದೆ.

ಸಂಚಾರ ನಿಯಮಗಳನ್ನು ಪಾಲಿಸದಿದ್ದಾಗ,ಮಹಾನಗರಗಳಲ್ಲಿ ಮತ್ತು ಹೈವೇಗಳಲ್ಲಿ ವೇಗದ ಮಿತಿ ದಾಟಿದರೆ ನಮಗೆ ದಂಡ ಕಟ್ಟುವ ಚಲನ್ ಸಂದೇಶ ಬರುತ್ತದೆ.ಆದರೆ,ಈ ಟೆಕ್ನಾಲಜಿ ಅತಿವೇಗದ ಚಾಲನೆ ಮಾಡಿದಾಗ ನಿಮ್ಮನ್ನು ಎಚ್ಚರಿಸುತ್ತದೆ. ಇದರಿಂದ ದಂಡದಿಂದ ಪಾರಾಗಬಹುದು ಮತ್ತು ಅಪಘಾತವಾಗುವುದನ್ನು ಕೂಡ ತಪ್ಪಿಸಬಹುದು. ನಿಮ್ಮ ವಾಹನದ ನಿಗದಿತ ವೇಗದ ಮಿತಿಯನ್ನು ಯಾವಾಗ ದಾಟಿದೆ ಎಂಬುದು ತಿಳಿದೇ ಇರಲ್ಲ. ಇಂತಹ ಸಂದರ್ಭದಲ್ಲಿ ಇದು ನೆರವಿಗೆ ಬರಲಿದೆ.

ಇದುವೇ ಗೂಗಲ್ ಮ್ಯಾಪ್ ಸ್ಪೀಡೋಮೀಟರ್. ಇದು ನಿಮ್ಮ ವಾಹನದ ವೇಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸ್ಪೀಡೋಮೀಟರ್ ವೈಶಿಷ್ಟ್ಯವು ವಾಹನದ ಅತಿವೇಗದ ವೇಳೆ ತಕ್ಷಣ ನಿಮ್ಮನ್ನು ಎಚ್ಚರಿಸುತ್ತದೆ. ನಿಮ್ಮ ಕಾರ್ ನಿರ್ದಿಷ್ಟ ವೇಗದ ಮಿತಿಯನ್ನು ಮೀರಿದ ತಕ್ಷಣ ಈ ವೈಶಿಷ್ಟ್ಯವು ನಿಮ್ಮನ್ನು ಎಚ್ಚರಿಸುತ್ತದೆ.ಅಲ್ಲದ,ನಿಮ್ಮ ಕಾರಿನ ವೇಗವನ್ನು ಸಹ ನೀವು ಪರಿಶೀಲಿಸಬಹುದು. ನಿರ್ದಿಷ್ಟ ವೇಗದ ಮಿತಿಯನ್ನು ಮೀರಿದಾಗ ಸ್ಪೀಡೋಮೀಟರ್ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದರ ಸಹಾಯದಿಂದ ನೀವು ಚಾಲನೆ ಮಾಡುವಾಗ ಕಾರಿನ ವೇಗ ಎಷ್ಟಿದೆ ಎಂಬುದನ್ನು ತಿಳಿಯಬಹುದಾಗಿದೆ.ಇದರಿಂದ ನೀವು ನಿಮ್ಮ ಕಾರಿನ ವೇಗವನ್ನು ಕಡಿಮೆ ಮಾಡಬಹುದು ಮತ್ತು ಚಲನ್ ಮತ್ತು ಅಪಘಾತಗಳ ಅಪಾಯವನ್ನು ಕೂಡ ತಪ್ಪಿಸಬಹುದು ಎಂದು ಹೇಳಲಾಗಿದೆ.

ಸ್ಪೀಡೋಮೀಟರ್ ಅನ್ನು ಸಕ್ರಿಯಗೊಳಿಸಲು, ಮೊದಲು, ಗೂಗಲ್ ನಕ್ಷೆಗಳನ್ನು ಸಕ್ರಿಯಗೊಳಿಸಿ. ಈಗ ಗೂಗಲ್ ಮ್ಯಾಪ್ ನ ಪ್ರೊಫೈಲ್ ಅನ್ನು ಕ್ಲಿಕ್ ಮಾಡುವ ಮೂಲಕ, ಸೆಟ್ಟಿಂಗ್‌ಗಳು ಮತ್ತು ನಂತರ ನ್ಯಾವಿಗೇಷನ್ ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಡ್ರೈವಿಂಗ್ ಆಯ್ಕೆಯಲ್ಲಿ ಸ್ಪೀಡೋಮೀಟರ್ ಅನ್ನು ನೋಡುತ್ತೀರಿ. ಈ ಸ್ಪೀಡೋಮೀಟರ್ ಅನ್ನು ಆನ್ ಮಾಡಬೇಕು.ಈ ಮೂಲಕ ನಿಮ್ಮ ಪ್ರಯಾಣ ಸುಖಕರವಾಗಿಸಿಕೊಳ್ಳಿ.

Leave A Reply

Your email address will not be published.