ದಿನಕ್ಕೆ ಕೇವಲ 1 ರೂಪಾಯಿ ಉಳಿಸಿ, 15 ಲಕ್ಷ ಹಣ ಎಣಿಸಿಕೊಳ್ಳಿ | ಇದು ಕೇಂದ್ರ ಸರ್ಕಾರದ ಒಂದು ವಿಶೇಷ ಯೋಜನೆ ಗೊತ್ತಾ ?!

ಕೇಂದ್ರ ಸರ್ಕಾರದ ಒಂದು ವಿಶೇಷ ಯೋಜನೆ ಇದೆ. ಅದುವೆ ಸುಕನ್ಯಾ ಸಮೃದ್ಧಿ ಯೋಜನೆ ಅಥವಾ SSY. ಈ ಯೋಜನೆಯಲ್ಲಿ ದಿನಕ್ಕೆ ಕೇವಲ 1 ರೂಪಾಯಿ
ಉಳಿಸುವ ಮೂಲಕ ನೀವು 15 ಲಕ್ಷ ಹಣ ಗಳಿಸಬಹುದು.

ಸುಕನ್ಯಾ ಸಮೃದ್ಧಿ ಯೋಜನೆ (SSY) ಎಂಬುದು ಕೇಂದ್ರ
ಸರ್ಕಾರದ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಇದನ್ನು
‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆಯಡಿ
ರಚಿಸಲಾಗಿದೆ. ಸಾಧಾರಣ ಉಳಿತಾಯ ಯೋಜನೆಗಳ
ಪಟ್ಟಿಯಲ್ಲಿ, ಸುಕನ್ಯಾ ಉತ್ತಮ ಬಡ್ಡಿದರವನ್ನು ಹೊಂದಿದೆ. ಈ
ಖಾತೆಯನ್ನು ಕೇವಲ 250 ರೂ.ಗೆ ಆರಂಭಿಸಬಹುದು. ಅಂದರೆ ನೀವು ದಿನಕ್ಕೆ ಕೇವಲ 1 ರೂಪಾಯಿ ಉಳಿಸಿದರೂ ಈ
ಯೋಜನೆಯಿಂದ ನೀವು ಪ್ರಯೋಜನ ಪಡೆಯಬಹುದು. ಪ್ರತಿ
ಹಣಕಾಸು ವರ್ಷದಲ್ಲಿ ಕನಿಷ್ಠ 250 ರೂ ಠೇವಣಿ ಮಾಡಿ. SSY
ಖಾತೆಯಲ್ಲಿ ನೀವು ಒಂದೇ ಹಣಕಾಸು ವರ್ಷದಲ್ಲಿ ಅಥವಾ
ಹಲವು ಬಾರಿ 1.5 ಲಕ್ಷ ರೂ.ಗಿಂತ ಹೆಚ್ಚು ಹಣವನ್ನು ಠೇವಣಿ
ಮಾಡಲು ಸಾಧ್ಯವಿಲ್ಲ.

ಲಾಕ್‌ಡೌನ್ ಕುರಿತು ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ,ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ- ಡಾ.ಸುಧಾಕರ್

ಈ ಯೋಜನೆಯಡಿ (ಸುಕನ್ಯಾ ಸಮೃದ್ಧಿ ಖಾತೆ) ನಿಮಗೆ ಶೇಕಡ
7.6 ರ ದರದಲ್ಲಿ ಬಡ್ಡಿಯನ್ನು ನೀಡಲಾಗಿದೆ. ಇದು ತೆರಿಗೆ
ವಿನಾಯಿತಿಯ ರೂಪದಲ್ಲಿದೆ. ಶೇ. 9.2 ರಷ್ಟು ಹೆಚ್ಚಿನ
ಬಡ್ಡಿದರಗಳನ್ನು ಹಿಂದೆ ನೀಡಲಾಗಿತ್ತು. 8 ವರ್ಷ ದಾಟಿದ ಮೇಲೆ ಮಗಳ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಖರ್ಚಿಗೆ ಅರ್ಧದಷ್ಟು ಹಣವನ್ನು ಹಿಂಪಡೆಯಬಹುದು. ಆದಾಯ ತೆರಿಗೆ
ವಿನಾಯಿತಿಯೊಂದಿಗೆ ಶೇಕಡ 7.6 ರಷ್ಟು ದರದಲ್ಲಿ SSY ನಲ್ಲಿ
ಈಗ ಬಡ್ಡಿ ಪಾವತಿಸಲಾಗುತ್ತಿದೆ. ನಿಮ್ಮ ಪ್ರೀತಿಪಾತ್ರರ ಭವಿಷ್ಯದ ಬಗ್ಗೆ ನಿಮಗೆ ಕಾಳಜಿ ಇದ್ದರೆ, ಈ ಯೋಜನೆಯ ಲಾಭವನ್ನುಪಡೆದುಕೊಳ್ಳಬಹುದು.

ಖಾತೆ ತೆರೆಯುವುದು ಹೇಗೆ?

ಸುಕನ್ಯಾ ಸಮೃದ್ಧಿ ಯೋಜನೆಯು ಯಾವುದೇ ಮಾನ್ಯತೆ ಪಡೆದ
ಅಂಚೆ ಕಚೇರಿ ಅಥವಾ ವಾಣಿಜ್ಯ ಶಾಖೆಯಲ್ಲಿ ಖಾತೆಯನ್ನು
ತೆರೆಯಬಹುದು. 10 ವರ್ಷಕ್ಕಿಂತ ಮೊದಲು ಹೆಣ್ಣು ಮಗುವಿನ
ಜನನದ ನಂತರ ಕನಿಷ್ಠ 250 ರೂ. ಠೇವಣಿಯೊಂದಿಗೆ
ಖಾತೆಯನ್ನು ಪ್ರಾರಂಭಿಸಬಹುದು. ಪ್ರಸಕ್ತ ಹಣಕಾಸು
ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಠೇವಣಿ
ಮಾಡಬಹುದಾದ ಗರಿಷ್ಠ ಮೊತ್ತ 1.5 ಲಕ್ಷ ರೂ. ಸುಕನ್ಯಾ ಸಮೃದ್ಧಿಯೋಜನೆ ಖಾತೆಯನ್ನು ಪ್ರಾರಂಭಿಸಿದ ನಂತರ, ಹೆಣ್ಣು ಮಗು ತನ್ನ 21ವರ್ಷವನ್ನು ತಲುಪುವವರೆಗೆ ಅಥವಾ
ಮದುವೆಯಾಗುವವರೆಗೆ ಅದನ್ನು ನಡೆಸಬಹುದು.

Leave A Reply