ಪೆನ್ಸಿಲ್ ಕದ್ದ ಸ್ನೇಹಿತನ ವಿರುದ್ಧ ಕಂಪ್ಲೇಂಟ್ ನೀಡಿದ ಮೂರನೇ ತರಗತಿ ಬಾಲಕ

ಕೊಲೆ, ದರೋಡೆ, ಕಳ್ಳತನಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರುವುದು ಸಾಮಾನ್ಯ.ಆದರೆ ಇಲ್ಲೊಂದು ಕಡೆ ಯಾವ ವಿಚಾರಕ್ಕೆ ಯಾರು ಪೊಲೀಸ್ ಕಂಪ್ಲೇಂಟ್ ನೀಡಿದ್ದಾರೆ ಎಂದರೆ ನೀವು ನಗುವುದಂತೂ ಖಚಿತ. ಹೌದು. ಇಲ್ಲಿ 3 ನೇ ತರಗತಿಯ ಬಾಲಕ ತನ್ನ ಪೆನ್ಸಿಲ್‌ಗಳನ್ನು ಕದ್ದಿದ್ದಕ್ಕಾಗಿ ತನ್ನ ಸ್ನೇಹಿತನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾನೆ.

ಈ ಘಟನೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ನಡೆದಿದೆ. ಇದು ಫೆಬ್ರವರಿಯಲ್ಲಿ ನಡೆದಿದ್ದು, ಈ ಮಕ್ಕಳ ನಡುವಿನ ಸಂಭಾಷಣೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ವೈರಲ್ ಆದ ನಂತರ ಬೆಳಕಿಗೆ ಬಂದಿದೆ.ದೂರುದಾರನನ್ನು ಹನ್ಮಂತು ಎಂದು ಗುರುತಿಸಲಾಗಿದ್ದು, ಅವನು ಠಾಣೆಗೆ ತೆರಳಿ ಪೊಲೀಸರಿಗೆ ತಮ್ಮ ಸ್ನೇಹಿತನ ವಿರುದ್ಧ ಕಳ್ಳತನ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾನೆ.

ಕರ್ನೂಲ್ ಜಿಲ್ಲೆಯ ಪೆದ್ದಕಡಬೂರಿನ ಖಾಸಗಿ ಶಾಲೆಯ ವಿದ್ಯಾರ್ಥಿ ಹನ್ಮಂತು ತನ್ನ ಸ್ನೇಹಿತ ಪ್ರತಿದಿನ ತನ್ನ ಪೆನ್ಸಿಲ್‌ಗಳನ್ನು ಮತ್ತು ಕೆಲವೊಮ್ಮೆ ಹಣವನ್ನು ಸಹ ಕದಿಯುತ್ತಿದ್ದ ಎಂದು ಆರೋಪಿಸಿದ್ದಾನೆ.ಅವನು ತನ್ನ ಸ್ನೇಹಿತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ದನು, ಅಲ್ಲಿ ಅವನು ತನ್ನ ಪೆನ್ಸಿಲ್‌ಗಳು ಹೇಗೆ ಕಾಣೆಯಾಗಿದೆ ಎಂಬುದನ್ನು ಕಾನ್‌ಸ್ಟೆಬಲ್‌ಗೆ ವಿವರಿಸಿ ನ್ಯಾಯಕ್ಕಾಗಿ ಒತ್ತಾಯಿಸಿದನು.

ಈತನ ಕಂಪ್ಲೇಂಟ್ ನೋಡಿ ಪೊಲೀಸಪ್ಪನಿಗೆ ನಗು ತಡೆಯಲಾರದೇ,ಬಿದ್ದು ಬಿದ್ದು ನಕ್ಕರು.ಆದರೆ ಆರೋಪಿ ಬಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಆತನ ಪೋಷಕರನ್ನು ಠಾಣೆಗೆ ಕರೆತರಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಚೆನ್ನಾಗಿ ಓದುವಂತೆ ಹೇಳಿ ಇಬ್ಬರ ನಡುವೆ ರಾಜಿ ಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳು ಕುಡಿಯುವ ನೀರಿಗಾಗಿ ಪದೇ ಪದೇ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಿದ್ದು, ಪೊಲೀಸರು ಸಹ ಅವರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದರು.

Leave A Reply

Your email address will not be published.