ನೀವು ಗ್ಯಾರಂಟಿಯಾಗಿ ಶ್ರೀಮಂತರಾಗಬೇಕಾದರೆ ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾಡಲೇಬೇಡಿ | ಈ ಕೆಲಸಗಳನ್ನು ಈಗಾಗಲೇ ಮಾಡುತ್ತಿದ್ದರೆ ಇಂದೇ ನಿಲ್ಲಿಸಿ, ಇಲ್ಲದಿದ್ದರೆ ಲಕ್ಷ್ಮಿದೇವಿ ಮುನಿಸಿಕೊಳ್ಳುತ್ತಾಳೆ !!

ಜನರು ತಿಂಗಳಿಡೀ ಬೆವರಿಳಿಸಿ ಕಷ್ಟಪಟ್ಟು ದುಡಿಯುತ್ತಾರೆ. ಇದರ ಹೊರತಾಗಿಯೂ, ಹಣ ಆತನ ಕೈಯಲ್ಲಿ ನಿಲ್ಲುವುದಿಲ್ಲ. ದುಡಿದ ದುಡ್ಡು ಮನೆ ಬಾಡಿಗೆಗೆ, ರೇಷನ್ ಗೆ, ಮಕ್ಕಳ ಫೀಸಿಗೆ ಖರ್ಚದ ನಂತರ ಕೂಡ ಅಲ್ಪಸ್ವಲ್ಪ ಉಳಿದಿರುತ್ತದೆ. ಆದರೆ ಆ ನಂತರ ಉಳಿದ ದುಡ್ಡು ಮಂಗ ಮಾಯ. ಇದಕ್ಕೆ ಕಾರಣ ಅವಳು !!

ಹೌದು, ಅದು ಲಕ್ಷ್ಮಿ ದೇವಿಯ ಕೋಪ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಕರ್ಮಗಳೇ ಲಕ್ಷ್ಮಿ ದೇವಿಯ ಪ್ರಕೋಪಕ್ಕೆ ಕಾರಣ ಎನ್ನಲಾಗುತ್ತದೆ. ವ್ಯಕ್ತಿಯು ತನ್ನ ತಪ್ಪು ಕಾರ್ಯಗಳನ್ನು ತೊಡೆದುಹಾಕದಿದ್ದರೆ, ಅವನ ಮನೆಯಲ್ಲಿ ಬಡತನವು ನೆಲೆಸಲು ಪ್ರಾರಂಭಿಸುತ್ತದೆ. ಅಲ್ಲದೆ ವ್ಯಕ್ತಿಯ ಕುಟುಂಬವು ಬಡತನವನ್ನು ತೊಡೆದುಹಾಕಲು ಪರಿಹಾರಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇಂದು ನಾವು ನಿಮಗೆ ಕೆಲ ಕೆಲಸಗಳ ಬಗ್ಗೆ ಮಾಹಿತಿ ನೀಡುತ್ತಿದ್ದು, ಆ ಕೆಲಸಗಳನ್ನು ಮನೆಯಲ್ಲಿ ಅಪ್ಪಿ-ತಪ್ಪಿಯೂ ಕೂಡ ಮಾಡಬೇಡಿ.

ಮೊದಲನೆಯದು ಕೋಪ. ಕೋಪ ತನ್ನನ್ನು ಮಾತ್ರವಲ್ಲ ಇತರರನ್ನು ಸುಡುತ್ತದೆ. ಕೋಪಿಸಿಕೊಳ್ಳುವುದು, ಇತರರನ್ನು ನಿಂದಿಸುವುದು ಸಲ್ಲದು. ಇದರಿಂದ ಸಂಬಂಧಗಳು ಹಾಳಾಗುತ್ತವೆ ಅದರ ಜೊತೆಗೆ ಲಕ್ಷ್ಮಿ ನಮ್ಮಿಂದ ದೂರ ಹೋಗುತ್ತಾಳೆ. ಎಲ್ಲಿ ಪ್ರೀತಿ-ವಿಶ್ವಾಸ, ಸಹಬಾಳ್ವೆ, ತಾಳ್ಮೆ ಇರುತ್ತದೋ ಅಲ್ಲಿ ಲಕ್ಷ್ಮಿ ಕಟಾಕ್ಷ ಸಾಧ್ಯವಾಗುತ್ತದೆ.

ಪ್ರತಿದಿನ ಸೂರ್ಯೋದಯದ ನಂತರ ಏಳುವುದು ಮತ್ತು ಸೂರ್ಯಾಸ್ತಕ್ಕಿಂತ ಮೊದಲು ಮಲಗುವುದು ಒಳ್ಳೆಯದಲ್ಲ. ಸನಾತನ ಧರ್ಮದಲ್ಲಿ ರಾತ್ರಿ ಬೇಗ ಮಲಗುವುದು ಮತ್ತು ಮುಂಜಾನೆ ಎದ್ದೇಳುವುದು ಉತ್ತಮ ಎಂದು ಹೇಳಲಾಗುತ್ತದೆ. ದೀರ್ಘಕಾಲದವರೆಗೆ ಮಲಗುವುದರಿಂದ, ವ್ಯಕ್ತಿಯ ದೈನಂದಿನ ದಿನಚರಿಯು ತೊಂದರೆಗೊಳಗಾಗಿ, ಅದು ಅವನ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ರೀತಿ ಅಭ್ಯಾಸ ಮಾಡಿಕೊಂಡವರು ಬಹುಬೇಗ ರೋಗಗಳಿಗೆ ತುತ್ತಾಗುತ್ತಾರೆ. ರೋಗ ಬಂದರೆ ಮತ್ತೆ ಎಲ್ಲಿ ಸಂಪತ್ತು?! ಜೊತೆಗೆ ದೇಹ ಮತ್ತು ಸಂಪತ್ತು ಕೂಡಾ ನಶಿಸುತ್ತದೆ.

ಮನೆಯಲ್ಲಿ ಮುಂಜಾನೆ ದೀಪ ಹಚ್ಚುವುದು ಮತ್ತು ರಾತ್ರಿಯಾಗುತ್ತಿದ್ದಂತೆ ದೀಪಗಳನ್ನು ಅಥವಾ ಲೈಟ್ ಗಳನ್ನು ಬೆಳಗಿಸುವುದು ಕಡ್ಡಾಯ. ಒಂದೊಮ್ಮೆ ಹಾಗೆ ಮಾಡದಿದ್ದರೆ ಲಕ್ಷ್ಮಿ ಮುನಿಸಿಕೊಳ್ಳುತ್ತಾರೆ.

ಹಿರಿಯರನ್ನು ಮತ್ತು ಧಾರ್ಮಿಕ ಗುರುಗಳನ್ನು ಅವಮಾನಿಸಬೇಡಿ. ಅದು ಯಾವುದೇ ಧರ್ಮವಿರಲಿ, ಧಾರ್ಮಿಕ ಗುರುಗಳ ನಿಂದೆ ಸಲ್ಲದು. ಕುಟುಂಬದ ಹಿರಿಯರು ಯಾವುದೇ ಮನೆಯ ನಿಜವಾದ ಅಡಿಪಾಯ. ಹಿರಿಯರನ್ನು ಗೌರವಿಸದ ಮನೆಗಳಲ್ಲಿ ತಾಯಿ ಲಕ್ಷ್ಮಿ ಎಂದಿಗೂ ನಿಲ್ಲುವುದಿಲ್ಲ. ಆದುದರಿಂದ, ನಿಮ್ಮ ಹಿರಿಯರನ್ನು ಯಾವ ಕಾರಣಕ್ಕೂ ಕೂಡ ಅಗೌರವಿಸಬೇಡಿ ಮತ್ತು ಸಾಧ್ಯವಾದಷ್ಟು ಅವರಿಗೆ ಸೇವೆ ಮಾಡಲು ಪ್ರಯತ್ನಿಸಿ. 

ಅಶುದ್ಧವಾದ ಬಟ್ಟೆಗಳನ್ನು ತೊಡುವುದರಿಂದ ಶ್ರೀಲಕ್ಷ್ಮಿ ನಮ್ಮೆಡೆಗೆ ತಿರಸ್ಕಾರದಿಂದ ನೋಡುವಂತೆ ಮಾಡುತ್ತದೆ. ದಿನವೂ ಹೋಗಿದ್ದು ಪರಿಶುದ್ಧವಾಗಿ ಇರುವ ಬಟ್ಟೆಯನ್ನು ಧರಿಸುವುದು ಅತ್ಯಗತ್ಯ.

ಮನೆಯ ಮತ್ತು ಸುತ್ತಮುತ್ತಲ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳದೆ ಹೋದರೆ ಅದು ಸಂಪತ್ ಲಕ್ಷ್ಮಿಯನ್ನು ಕೆರಳಿಸುತ್ತದೆ. ದಿನವೂ ಮನೆಯಲ್ಲಿ ಗುಡಿಸಿ, ಸಾರಿಸಿ ರಂಗೋಲಿ ಇಡಬೇಕು. ಶುದ್ಧಿ ಮಾಡಿದ ರೂಮುಗಳು, ಜೇಡರಬಲೆ ತೆಗೆದು ಶುಚಿಯಾಗಿಟ್ಟುಕೊಳ್ಳುವ ಪರಿಸರ ಅತ್ಯಗತ್ಯ. ಮನೆಯಲ್ಲಿ ಶೇಖರವಾಗುವ ಕಸಗಳನ್ನು ತಕ್ಷಣ ವಿಲೇವಾರಿ ಮಾಡುವುದು ಅನಿವಾರ್ಯ. ಹೀಗೆ ಮಾಡದೆ ಹೋದರೆ ಸಂಪತ್ತು ನಮ್ಮಿಂದ ವಿಮುಖವಾಗುತ್ತದೆ.

ಕಡಿಮೆ ಸಮಯದಲ್ಲಿ ಶ್ರೀಮಂತರಾಗಲು, ಅಕ್ರಮವಾಗಿ ಗಳಿಸಿದ ಹಣ ದಾರಿದ್ರ್ಯಕ್ಕೆ ದಾರಿಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಪ್ಪು ಚಟುವಟಿಕೆಗಳಿಂದ ಹಣವನ್ನು ಗಳಿಸುವಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಅವರು ಬಡವರಿಗೆ ಕಿರುಕುಳ ನೀಡಿ ಅವರ ಶೋಷಣೆ ಮಾಡಲು ಕೂಡ ಹಿಂಜರಿಯುವುದಿಲ್ಲ. ಆದರೆ, ಅದು ಅನೈತಿಕ ಮತ್ತು ತಪ್ಪಾಗಿ ಗಳಿಸಿದ ಹಣ. ಅಂತಹ ಹಣವು ಶೀಘ್ರದಲ್ಲೇ ವ್ಯರ್ಥವಾಗುತ್ತದೆ. ಆದ್ದರಿಂದ, ಇಂತಹ ತಪ್ಪು ಕೆಲಸಗಳ ಬಲೆಗೆ ಬೀಳುವ ಬದಲು, ನಿಮ್ಮ ಕಠಿಣ ಪರಿಶ್ರಮ ಮುಂದುವರೆಸಿ ಪ್ರಾಮಾಣಿಕವಾಗಿ ಹಣ ಗಳಿಕೆ ಮಾಡಿ. ಅದು ನಿಮ್ಮ ಬಳಿ ಶಾಶ್ವತವಾಗಿ ಉಳಿಯುತ್ತದೆ.

ಬಡವರನ್ನು ಮತ್ತು ನಿರ್ಗತಿಕರನ್ನು ಎಂದಿಗೂ ಅಗೌರವದಿಂದ ನೋಡಬೇಡಿ. ಸನಾತನ ಸಂಸ್ಕೃತಿಯಲ್ಲಿ, ದಾನಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ಹೇಳಲಾಗಿದೆ. ಹಬ್ಬಗಳಂದು ಮಾತ್ರವಲ್ಲದೆ ಕಾಲಕಾಲಕ್ಕೆ ಅಗತ್ಯವಿರುವವರಿಗೆ ದಾನ ಮಾಡುವ ಪ್ರಾಚೀನ ಸಂಪ್ರದಾಯವು ದೇಶದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ಯಾವುದೇ ನಿರ್ಗತಿಕ ಅಥವಾ ಭಿಕ್ಷುಕನು ನಿಮ್ಮಿಂದ ಯಾವುದೇ ಸಹಾಯವನ್ನು ಕೇಳಿದರೆ, ಖಂಡಿತವಾಗಿಯೂ ಅವನಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಿ. ನೀವು ಸಹಾಯ ಮಾಡುವ ಸ್ಥಿತಿಯಲ್ಲಿಲ್ಲದಿದ್ದರೆ, ಕನಿಷ್ಠ ಅವನನ್ನು ಅಗೌರವಗೊಳಿಸಬೇಡಿ. ಯಾವುದೇ ನಿರ್ಗತಿಕರೊಂದಿಗೆ ಅನುಚಿತವಾಗಿ ವರ್ತಿಸುವುದರಿಂದ ದೇವರು ಕೋಪಗೊಳ್ಳುತ್ತಾನೆ ಮತ್ತು ತಾಯಿ ಲಕ್ಷ್ಮಿ ಕೂಡ ಅಂತಹ ಸೊಕ್ಕಿನವರ ಮನೆಯನ್ನು ತೊರೆಯುತ್ತಾಳೆ.

ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಯುವತಿ ಸಾವು

ಕುಟುಂಬದಲ್ಲಿ ನಿಂದನೀಯ ಪದಗಳನ್ನು ಬಳಸುವುದನ್ನು ತಪ್ಪಿಸಿ. ಪತಿ-ಪತ್ನಿ ಬಂಡಿಯ ಎರಡು ಚಕ್ರಗಳಾಗಿದ್ದು, ಜೀವನದುದ್ದಕ್ಕೂ ಪರಸ್ಪರ ಸಮತೋಲನ ಕಾಯ್ದುಕೊಂಡು ಜೀವನದಲ್ಲಿ ಮುನ್ನಡೆಯಬೇಕು. ಇಂತಹ ಪರಿಸ್ಥಿತಿಯಲ್ಲಿ ಪತಿ-ಪತ್ನಿಯರ ನಡುವೆ ಸದಾ ಜಗಳ ನಡೆಯುತ್ತಿದ್ದರೆ ಮತ್ತು ಅವರು ಪರಸ್ಪರ ಅವಹೇಳನಕಾರಿ ಮಾತುಗಳನ್ನಾಡುತ್ತಿದ್ದರೆ, ಅವರ ಮನೆಯಲ್ಲಿ ಬಡತನ ಬರಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಕುಟುಂಬ ಸದಸ್ಯರು ಪರಸ್ಪರ ಜಗಳವಾಡುವ ಮನೆಗಳಲ್ಲಿ ತಾಯಿ ಲಕ್ಷ್ಮಿ ಎಂದಿಗೂ ವಾಸಿಸುವುದಿಲ್ಲ. ಹೀಗಿರುವಾಗ ನೀವು ಲಕ್ಷ್ಮಿ ದೇವಿಯನ್ನು ಸಂತೋಷವಾಗಿರಿಸಲು ಬಯಸಿದರೆ, ಮನೆಯಲ್ಲಿ ಯಾರಿಗೂ ಅವಹೇಳನಕಾರಿ ಪದಗಳನ್ನು ಬಳಸಬೇಡಿ.

ಯಾವತ್ತೂ ಮೇಲೆ ಹೇಳಿದ ಹಾಗೆ ಸಂಪತ್ತನ್ನು ಕಳೆದುಕೊಳ್ಳುವ ಕೆಲಸಗಳನ್ನು ಮಾಡಬೇಡಿ. ಹಾಗೊಂದು ವೇಳೆ ಮಾಡಿದ್ದಲ್ಲಿ, ಸಕಲ ಸಂಪತ್ತಿನ ಅಧಿದೇವತೆ ಶ್ರೀ ಮಹಾಲಕ್ಷ್ಮಿ ನಿಮ್ಮ ಮನೆಯಿಂದ ಸದ್ದಿಲ್ಲದೆ ಎದ್ದು ಮುನಿಸಿಕೊಂಡು ಹೊರನಡೆಯುತ್ತಾಳೆ. ಸಂಪತ್ತು ಮತ್ತು ಅದು ತರುವ ಆರೋಗ್ಯ ಮತ್ತು ಸುಖ ನಿಮಗೆ ಅಗತ್ಯವಿದ್ದರೆ ನಿಮ್ಮ ನಡವಳಿಕೆಗಳ ಮೇಲೆ ಎಚ್ಚರವಿರಲಿ !!

Leave A Reply

Your email address will not be published.