ರೈಲಿನಲ್ಲಿ ಸೀಟ್ ಸಿಗದ ಪ್ರಯಾಣಿಕನೊಬ್ಬ ಮಾಡಿದ ಒಂದು ಕ್ರಿಯೇಟಿವ್ ಐಡಿಯಾ | ಹೀಗೆ ಮಾಡಿದ್ರೆ ರೈಲಿನಲ್ಲಿ ಇನ್ನರ್ಧ ಜನರನ್ನು ತುಂಬಬಹುದು

ರೈಲು ಪ್ರಯಾಣ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಭಾರತದಲ್ಲಿ ಹೆಚ್ಚಿನ ಜನರು ದೂರ ಪ್ರಯಾಣಕ್ಕೆ ರೈಲು ಪ್ರಯಾಣವನ್ನು ಮೆಚ್ಚಿಕೊಂಡಿರುತ್ತಾರೆ. ಕುಟುಂಬ ಸಮೇತ ಎಲ್ಲಿಗಾದರೂ ತೀರ್ಥಯಾತ್ರೆ ಅಥವಾ ಪ್ರವಾಸಕ್ಕೆ ತೆರಳುವ ಯೋಜನೆ ಹೂಡಿದ್ದರೆ ರೈಲು ಪ್ರಯಾಣ ತುಂಬಾನೇ ಆರಾಮದಾಯಕ.

ಅದರಲ್ಲೂ ಸಾಲು-ಸಾಲು ರಜೆ ಇದ್ದರೆ ಸಾಮಾನ್ಯವಾಗಿ ರೈಲುಗಳು ಜನರಿಂದ ಕಿಕ್ಕಿರಿದು ಹೋಗಿರುತ್ತವೆ. ಕೆಲವೊಮ್ಮೆ ಎಷ್ಟೋ ತಿಂಗಳುಗಳ ಮೊದಲೇ ಟಿಕೆಟ್ ಮಾಡಿಸಿಟ್ಟರೂ ಕೊನೆಯ ಸಮಯದವರೆಗೆ ನಮ್ಮ ಟಿಕೆಟ್ ಇನ್ನೂ ಕಾಯ್ದಿರಿಸಿದ ಲಿಸ್ಟ್‌ನಲ್ಲಿಯೇ ಇರುತ್ತದೆ. ರೈಲು ನಿಲ್ದಾಣದಲ್ಲಿ  ಬಂದು ನಿಂತಾಗ ಸಹ ರೈಲಿನಲ್ಲಿರುವ ಟಿಕೆಟ್ ಕಲೆಕ್ಟರ್ ಹತ್ತಿರ ಹೋಗಿ ಒಂದು ಸೀಟು ಇದ್ದರೆ ನೋಡಿ ದಯವಿಟ್ಟು ಎಂದು ಕೇಳಿಕೊಳ್ಳುತ್ತೇವೆ.  ಹಾಗೋ ಹೀಗೋ ಅಡ್ಜಸ್ಟ್ ಮಾಡಿಕೊಂಡು ನಾವು ತಲುಪಬೇಕಾದ ಊರಿಗೆ ತಲುಪುತ್ತೇವೆ.

ನಿಮ್ಮ ಟಿಕೆಟ್ ಕೆಲವೊಮ್ಮೆ ಟಿಕೆಟ್ ರದ್ದತಿಯ ವಿರುದ್ಧ ಮೀಸಲಾತಿಗೆ (ಆರ್‌ಎಸಿ) ಅರ್ಹತೆ ಪಡೆದರೂ, ಕಿರಿದಾದ ಆಸನದಲ್ಲಿ ಇನ್ನೊಬ್ಬ ಪ್ರಯಾಣಿಕರೊಂದಿಗೆ ಹೊಂದಿಕೊಳ್ಳಬೇಕಾಗುತ್ತದೆ. ಇದು ದುಃಸ್ವಪ್ನಕ್ಕಿಂತ ಕಡಿಮೆಯಿಲ್ಲ ಎಂದು ಹೇಳಬಹುದು. ಆದಾಗ್ಯೂ, ರೈಲಿನಲ್ಲಿ ದೃಢೀಕೃತ ಆಸನ ಪಡೆಯದೇ ಕೊನೆಗೆ ಅದಕ್ಕೆ ಒಂದು ಪರಿಹಾರ ಕಂಡು ಕೊಂಡಿದ್ದಾರೆ.

ಹೌದು ವೈರಲ್ ಆಗಿರುವ ಈ ವಿಡಿಯೋದಲ್ಲಿ ರೈಲಿನಲ್ಲಿ ಸೀಟು ಸಿಗದೇ ವ್ಯಕ್ತಿ ಏನು ಮಾಡಿದ್ದಾನೆ ಎಂಬುದನ್ನು ನೋಡಿ. ನೀವು ಈ ದೃಶ್ಯವನ್ನು ನೋಡಿ, ಅರೆ ನಾವು ಹೀಗೆ ಮಾಡಬಹುದಿತ್ತಲ್ಲವೇ ಎಂದುಕೊಳ್ಳುತ್ತೀರಿ ಮತ್ತು ಇದನ್ನು ನೋಡಿದ ನಿಮಗೆ ನಗು ಬರುವುದಂತೂ ಗ್ಯಾರಂಟಿ.

ಇನ್‌ಸ್ಟಾಗ್ರಾಮ್‌ನಲ್ಲಿ ಮೀಮ್ಸ್ ಬಿಕೆಎಸ್ ಎಂಬ ಪುಟದಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಒಂದು ರೈಲಿನ ಕಂಪಾರ್ಟ್‌ಮೆಂಟ್‌ನ ಒಳಗೆ ಏನು ನಡೆದಿದೆ ಎನ್ನುವುದನ್ನು ತೋರಿಸುತ್ತದೆ. ಎಲ್ಲಾ ಆಸನಗಳು ಪ್ರಯಾಣಿಕರಿಂದ ತುಂಬಿತ್ತು. ಕುಳಿತುಕೊಳ್ಳಲು ಸಹ ಸ್ಥಳವಿರದೆ ಮತ್ತು ತನಗೆ ಸೀಟು ಸಿಗದ ಕಾರಣ ಒಬ್ಬ ಜಾಣ ಪ್ರಯಾಣಿಕ ಎಂತಹ ಯೋಜನೆ ಮಾಡಿದ್ದಾನೆ ನೀವೇ ನೋಡಿ.

ಉಯ್ಯಾಲೆ ಕಟ್ಟಿಕೊಂಡ ಪ್ರಯಾಣಿಕ

ಪ್ರಯಾಣಿಕರು ಓಡಾಡುವ ಆಸನಗಳ ಮಧ್ಯೆ ಇರುವಂತಹ ಜಾಗದಲ್ಲಿ ಎರಡು ತುದಿಗಳಲ್ಲಿರುವ ಆಸನಗಳ ಸರಪಳಿಗೆ ತನ್ನ ಕಂಬಳಿಯನ್ನು ಬಿಗಿಯಾಗಿ ಕಟ್ಟಿರುವುದನ್ನು ಕಾಣಬಹುದು. ಕ್ಲಿಪ್ ಮುಂದುವರಿಯುತ್ತಿದ್ದಂತೆ, ಒಬ್ಬ ವ್ಯಕ್ತಿಯು ಕಂಬಳಿಯಲ್ಲಿ ಹಾಗೆಯೇ ಇಳಿದು ಅಲ್ಲಿಯೇ ಮಲಗುವುದನ್ನು ನಾವು ನೋಡಬಹುದಾಗಿದೆ. ಇದೇ ಆತ ಹುಡುಕಿಕೊಂಡ ಉಪಾಯ.

https://www.instagram.com/tv/CWXnMLwDFVP/?utm_source=ig_web_copy_link

ಈ ವೀಡಿಯೋವನ್ನು ಸುಮಾರು 73,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, 6,900ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ನೆಟ್ಟಿಗರು ಹಲವಾರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಈ ರೀತಿಯ ಜುಗಾಡ್ ಹೇಗೆ ಅತ್ಯಂತ ಆರಾಮದಾಯಕವಾಗಿದೆ ಮತ್ತು ಅವರು ಅದನ್ನು ಪ್ರಯತ್ನಿಸಿದ್ದಾರೆ ಎಂದು ಸೂಚಿಸಿದರೆ, ಇತರರು ಪ್ರತಿಕ್ರಿಯೆಯಾಗಿ ನಗುವ ಎಮೋಜಿ ಹಂಚಿಕೊಂಡಿದ್ದಾರೆ. ಈ ವೀಡಿಯೋಗೆ “ಭಾರತದ ಜನರ ಬುದ್ದಿವಂತಿಕೆಗೆ ಯಾರು ಸರಿಸಾಟಿ ಇಲ್ಲ” ಎಂದು ಚಿಕ್ಕದಾಗಿ ಮತ್ತು ಚೊಕ್ಕದಾಗಿ ಶೀರ್ಷಿಕೆಯನ್ನು ಬರೆದಿದ್ದಾರೆ.

ಆದರೆ ಪ್ರಯಾಣಿಕರಿಗೆ ಇಂತಹ ಪರಿಸ್ಥಿತಿಗಳನ್ನು ತಪ್ಪಿಸಲು ಐಆರ್‌ಸಿಟಿಸಿ ಭಾರತೀಯ ರೈಲ್ವೇ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದೆ. ಟಿಕೆಟ್ ಕಾಯ್ದಿರಿಸಲು ಪ್ರಯಾಣಿಕರು ಐಆರ್‌ಸಿಟಿಸಿ ಪೋರ್ಟಲ್‌ನಲ್ಲಿ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ರಚಿಸಬೇಕಾಗುತ್ತದೆ. ಲಾಗಿನ್ ಪಾಸ್‌ವರ್ಡ್ ಕ್ರಿಯೇಟ್​ ಮಾಡಲು, ಪ್ರಯಾಣಿಕರು ತಮ್ಮ ಇಮೇಲ್ ಮತ್ತು ಫೋನ್ ಸಂಖ್ಯೆಯನ್ನು ನಮೂದಿಸಬೇಕು. ನಿಮ್ಮ ಇಮೇಲ್ ಮತ್ತು ಫೋನ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ, ನೀವು ಸುಲಭವಾಗಿ ಟಿಕೆಟ್ ಕಾಯ್ದಿರಿಸಬಹುದು.

Leave A Reply

Your email address will not be published.