40 ವರ್ಷಗಳಿಂದ ಬುಲೆಟ್ ಪ್ರೂಫ್ ಗಾಜಿನ ಕೋಣೆಯೊಳಗೆ ಬಂಧಿಯಾಗಿದೆ ಕಂಸರೂಪಿ ನರರಾಕ್ಷಸ!! ಜೈಲು ಸಿಬ್ಬಂದಿಗಳ ಸಹಿತ ಡಾನ್ ಗಳ ಬೆವರು ಹರಿಸಿದ ನಟೋರಿಯಸ್ ಯಾರುಗೊತ್ತಾ

ಬಾಲ್ಯದಲ್ಲಿ ನಡೆಯುವ ಕೆಲ ಘಟನೆಗಳು ಯೌವ್ವನಕ್ಕೆ ಬರುವ ಹೊತ್ತಲ್ಲಿ ಹೆಚ್ಚು ಕಾಡುತ್ತದೆ ಹಾಗೂ ಇದರಿಂದ ಪ್ರೆರೇಪಿತರಾಗಿ ತಮ್ಮ ಜೀವನವನ್ನೇ ಬೇರೆ ದಿಕ್ಕಿಗೆ ಬದಲಿಸುವಂತೆ ಮಾಡುತ್ತದೆ ಎಂಬುವುದಕ್ಕೆ ಈತನ ಸ್ಟೋರಿ ಒಂದು ಒಳ್ಳೆಯ ಉದಾಹರಣೆ.ಬಾಲ್ಯದಲ್ಲಿ ಕಷ್ಟ ಕಂಡು ಬೆಳೆದಿದ್ದ ಯುವಕ ಬೆಳೆಯುತ್ತಲೇ ಅದರ ವಿರುದ್ಧ ಹೋರಾಟಕ್ಕಿಳಿದು ತನ್ನ ಅಹಿಂಸೆಯ ಮಾರ್ಗದಲ್ಲಿ ನಡೆದಿದ್ದರಿಂದ ಸತತವಾಗಿ 40 ವರ್ಷಗಳಿಂದ ಜೈಲಿನಲ್ಲಿಯೇ ಕೊಳೆಯುವಂತಾಗಿದೆ. ಜೈಲಿನಲ್ಲಿದ್ದರೂ ಕೂಡಾ ತನ್ನ ಕಂಸ ಬುದ್ಧಿಯನ್ನು ಬಿಡದ ಈತನನ್ನು ಕಂಡರೆ ಜೈಲು ಸಿಬ್ಬಂದಿಯೇ ಒಂದರೆಕ್ಷಣ ನಡುಗುತ್ತಾರಂತೆ. ಯಾವ ಡಾನ್ ಗಳು ಕೂಡಾ ಈತನ ಮುಂದೆ ಯಾವ್ಯಾವ ಲೆಕ್ಕಕ್ಕೂ ಇಲ್ಲ ಎಂಬಂತೆ ತನ್ನ ಹವಾ ಮೇಂಟೈನ್ ಮಾಡಿರುವ ಈತನೇ ಬ್ರಿಟನ್‌ನ ಮೋಸ್ಟ್ ನಟೋರಿಯಸ್ ರಾಬರ್ಟ್ ಮೌಡ್.

40ಕ್ಕೂ ಹೆಚ್ಚು ವರ್ಷಗಳಿಂದ ಜೈಲಿನಲ್ಲೇ ಇರುವ ಹಂತಕ.ಇಡೀ
ವಿಶ್ವದಲ್ಲಿ ಯಾರದ್ರೂ ನಟೋರಿಯಸ್ ಹಂತಕರಿದ್ರೆ, ಇವನ
ಹೆಸರು ಮುಂಚೂಣಿಯಲ್ಲಿರುತ್ತೆ, ಬ್ರಿಟನ್‌ನಲ್ಲಿ ಒಂದು ಕಾಲದಲ್ಲಿ ತಲ್ಲಣ ಮೂಡಿಸಿದ್ದ ರಾಬರ್ಟ್ ಮೌಡ್ಲೀ.ಜೈಲಿಗೆ ಹೋದ ಮೇಲೂ ಅಲ್ಲಿದ್ದವರು ಬೆಚ್ಚಿ ಬೀಳುವಂತೆ
ಮಾಡಿದ್ದ.ಯಾಕಂದ್ರೆ, ರಾಬರ್ಟ್ ಮೌಡ್ಲೀ ಹೊರಗೆ ಅಷ್ಟೇ ಅಲ್ಲ.. ಜೈಲಿಗೆ ಹೋದ ಮೇಲೂ ತನ್ನ ಪಾತಕ
ಚರಿತ್ರೆಯನ್ನ ಮುಂದುವರಿಸಿದ್ದ.. ಅಷ್ಟಕ್ಕೂ ರಾಬರ್ಟ್.

ರಾಬರ್ಟ್ 1953ರಲ್ಲಿ ಬ್ರಿಟನ್‌ನ ಲಿವರ್‌ಪೋಲ್‌ನಲ್ಲಿ ಜನಿಸಿದವನು. ಹುಟ್ಟಿದ 12 ಮಕ್ಕಳಲ್ಲಿ ರಾಬರ್ಟ್
4ನೇಯವನಾಗಿದ್ದ, ಆದ್ರೆ, ಚಿಕ್ಕ ವಯಸ್ಸಿನಲ್ಲಿ ರಾಬರ್ಟ್‌ಗೆ ಅಪ್ಪ-ಅಮ್ಮನಿಂದ ಪ್ರೀತಿ ಅನ್ನೋದೇ ಸಿಗಲಿಲ್ಲ. ಬದಲಾಗಿ ರಾಬರ್ಟ್ ಅಪ್ಪ-ಅಮ್ಮ ಮಕ್ಕಳಿಗೆ ನಿರಂತರ ಕಿರುಕುಳ ನೀಡುತ್ತಿದ್ರು. ಇದೆಲ್ಲಾ ಕಾರಣಗಳಿಂದ ರಾಬರ್ಟ್ ಮತ್ತು ಸಹೋದರರು ಬಾಲ್ಯವನ್ನು, ಆಶ್ರಮದಲ್ಲಿಯೇ ಕಳೆಯಬೇಕಾಯ್ತು. ದೊಡ್ಡವನಾದ ಮೇಲೆ ರಾಬರ್ಟ್‌ಗೆ ಆತನ ಬಾಲ್ಯ ತೀವ್ರವಾಗಿ ಕಾಡಿತ್ತು. ಪುಟ್ಟ ಪುಟ್ಟ ಮಕ್ಕಳ ಮೇಲೆ ದೌರ್ಜನ್ಯವೆಸಗುತ್ತಿದ್ದವರ ಮೇಲೆ ಇನ್ನಿಲ್ಲದ ಕ್ರೌರ್ಯ ಬೆಳೆಸಿಕೊಂಡಿದ್ದ ರಾಬರ್ಟ್, 1974ರಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದವನನ್ನ ಭೀಭತ್ಸವಾಗಿ ಮುಗಿಸಿದ್ದ. ಆ ಕೊಲೆಗಳನ್ನ ಮಾಡುತ್ತಿದ್ದ ರಾಬರ್ಟ್ ದಿನ ಪೊಲೀಸರ ಕೈಗೆ ಸಿಕ್ಕಿ ಬೀಳ್ತಾನೆ. ಅಲ್ಲಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಈಗ 40ಕ್ಕೂ ಅಧಿಕ ವರ್ಷಗಳಿಂದ ಜೈಲಿನಲ್ಲಿಯೇ ಇದ್ದಾನೆ.

ಬ್ರಿಟನ್‌ನಲ್ಲಿ ಅತೀ ಹೆಚ್ಚು ವರ್ಷಗಳಿಂದ ಜೈಲು ಶಿಕ್ಷೆಗೆ
ಗುರಿಯಾಗಿರುವ ಒಬ್ಬನೇ ಕೈದಿ ಅಂದ್ರೆ, ಅದು ರಾಬರ್ಟ್
ಮೌಡ್ಲೀ.ರಾಬರ್ಟ್ ಜೈಲಿಗೆ ಹೋದ ಬಳಿಕವಾದ್ರೂ,ಕೊಂಚ ಸದ್ಗುಣಗಳನ್ನ ಅವಳವಡಿಸಿಕೊಂಡಿದ್ರೆ, ಅವನ
ಶಿಕ್ಷೆಯ ಪ್ರಮಾಣ ಕಡಿಮೆಯಾಗಿ, ಯಾವತ್ತೋ ಜೈಲಿನಿಂದ
ಬಿಡುಗಡೆಯಾಗುವ ಸಾಧ್ಯತೆ ಇತ್ತು, ಆದ್ರೆ, ಕಂಬಿ ಹಿಂದೆ ಸೇರಿದ್ರೂ ರಾಬರ್ಟ್, ತನ್ನ ಕ್ರೌರ್ಯವನ್ನ ಬಿಟ್ಟಿರಲಿಲ್ಲ.

ಜೈಲಿನೊಳಗೇ ಸಿಬ್ಬಂದಿ, ಕೈದಿಗಳ ಸರಣಿ ಹತ್ಯೆ ಹುಡುಕಿ ಹುಡುಕಿ ಕೊಲ್ಲುತ್ತಿದ್ದ ಕಿಲ್ಲರ್ ರಾಬರ್ಟ್!

ಒಂದು ಕಾಲದಲ್ಲಿ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿ ಸಿಕ್ಕಿಬಿದ್ದಿದ್ದ ರಾಬರ್ಟ್‌ನನ್ನ ಯಾರ್ಕ್ ಶೈರ್‌ನಲ್ಲಿರುವ ವೇಕ್‌ಫೀಲ್ ಜೈಲಿನಲ್ಲಿ ಇರಿಸಲಾಗಿತ್ತು.ಅಲ್ಲಿ ರಾಬರ್ಟ್ ಅಕ್ಷರಶಃ ರಾಕ್ಷಸನಾಗಿಬಿಟ್ಟಿದ್ದ.
ಜೈಲಿನಲ್ಲಿ ಕೂಡಾ ಇಬ್ಬರು ಕೈದಿಗಳನ್ನ ಹೊಡೆದು,ಚಾಕುವಿನಿಂದ ಮನಬಂದಂತೆ ಇರಿದು ಕೊಂದಿದ್ದ.

ಇದಾದ ಬಲಿಕ ಮತ್ತೊಂದು ಕೊಲೆ ಮಾಡಿದ ರಾಬರ್ಟ್ ಇಲ್ಲಿವರೆಗೂ ಒಟ್ಟು ನಾಲ್ಕು ಕೊಲೆಗಳನ್ನು ಮಾಡಿದ್ದು, ಮೂರು ಕೊಲೆಗಳು ಜೈಲಿನೊಳಗೆಯೇ ಆಗಿದ್ದವು. ರಾಬರ್ಟ್‌ನ ಕ್ರೌರ್ಯ ವೇಕ್‌ಫೀಲ್ ಜೈಲು ಸಿಬ್ಬಂದಿಗೆ ನಡುಕ ಹುಟ್ಟಿಸಿತ್ತು. ಯಾವಾಗ, ಇವನ ರಾಕ್ಷಸೀಯ ಪ್ರವೃತ್ತಿಗೆ ಕೊನೆಯೇ ಇಲ್ಲ ಅಂತಾ ಪೊಲೀಸರು ಅಂದುಕೊಂಡೋ, ಅಂದಿನಿಂದ ಈ ಕೊಲೆಗಡುಕನಿಗಾಗಿ
ವಿಶೇಷ ಕೊಠಡಿಯೇ ಸಿದ್ಧವಾಯ್ತು.

ರಾಬರ್ಟ್‌ಗಾಗಿ ಗಾಜಿನಿಂದ ಮಾಡಿ ಬುಲೆಟ್‌ಪ್ರೂಫ್ ಸೆಲ್ 40 ವರ್ಷಗಳಿಂದ ಯಾವ ಕೈದಿಗಳ ಜೊತೆಗೂ ಇಲ್ಲ ಸಂಪರ್ಕ :ರಾಬರ್ಟ್ ಮೌಡ್ನಲೀ ಯಾವಾಗ ತನ್ನ 4ನೇ
ಕೊಲೆಯನ್ನ ಜೈಲಲ್ಲಿ ಮಾಡ್ತಾನೋ, ಅಂದಿನಿಂದ ಅವನಿದ್ದ
ಜಾಗವನ್ನ ಜೈಲು ಸಿಬ್ಬಂದಿಗಳು ಬದಲಿಸಿಯೇ ಬಿಟ್ಟಿದ್ದಾರೆ. ಅದು
ಹೇಗೆ ಅಂದ್ರೆ, ರಾಬರ್ಟ್‌ಗೇ ಅಂತಲೇ ಗಾಜಿನಿಂದ ಮಾಡಿದ ಬುಲೆಟ್‌ದ್ರೂಫ್ ಸೆಲ್‌ನ ರೆಡಿಮಾಡ್ತಾರೆ. ಆ ಸೆಲ್‌ನೊಳಗೆ
ನಿದ್ರಿಸಲು ಕಾಂಕ್ರೀಟ್‌ನಿಂದ ಮಾಡಿದ ಮಂಚವಿದೆ. ಜೊತೆಗೆ, ಒಂದು ಟೇಬಲ್, ಕುರ್ಚಿ, ಕಾರ್ಡ್‌ಬೋರ್ಡ್,

ಶೌಚಾಲಯ ಹಾಗೂ ಸಿಂಕ್ ಇದೆ.ಹಾಗಾಗಿ, ರಾಬರ್ಟ್
ಸೆಲ್‌ಬಿಟ್ಟು ಒಳಗೆ ಬರುವ ಹಾಗೇ ಇಲ್ಲ.. ಟೈಮಿಗೆ ಸರಿಯಾಗಿ ಊಟ, ತಿಂಡಿ ಸಪ್ಪೆ ಆಗುತ್ತೆ. ಬರೋಬ್ಬರಿ
ಬರೋಬ್ಬರಿ 4 ದಶಕಗಳಿಂದ ರಾಬರ್ಟ್ ಇದೇ ರೀತಿ ಜೈಲಿನ
ಗ್ಲಾಸ್‌ಬಾಕ್ಸ್‌ನಲ್ಲಿ ಜೀವನ ಸವೆಸುತ್ತಿದ್ದಾನೆ.

ಬಾಲ್ಯದಲ್ಲಿ ತಾನು ಅನುಭವಿಸಿದ ಕಿರುಕುಳದಿಂದ ಬೇಸತ್ತು ಹೋಗಿದ್ದ, ರಾಬರ್ಟ್ ಒಂದು ದಿನ ಕೊಲೆಗಾರನಾಗಿ ಕೊನೆಯಾಗ್ತಾನೆ. ಆದ್ರೆ, ಒಂದು ಕೊಲೆ ಮಾಡಿ ಜೈಲು ಸೇರುವ ಆತ, ಸರಣಿ ಹಂತಕನಾಗಿ ಕುಖ್ಯಾತಿ ಪಡೀತಾನೆ ಅದೇನೇ ಇರಲಿ ತಾನು ಮಾಡಿದ ಪ್ರಮಾದಗಳನ್ನು
ತಿದ್ದುಕೊಳ್ಳೋದು ಬಿಟ್ಟು, ಮತ್ತೆ ಮತ್ತೆ ಅದೇ ತಪ್ಪನ್ನ ಮಾಡಿ ಜೀವನ ಪರ್ಯಂತ ಗಾಜಿನ ಬಾಕ್ಸ್‌ನೊಳಗೆ ಕೊಳೆಯೋ ಹಾಗಾಗಿದ್ದಾನೆ ರಾಬರ್ಟ್.ರಾಬರ್ಟ್‌ನ ಬಾಲ್ಯ, ಯೌವ್ವನ ಕ್ರೌರ್ಯವನ್ನಾಧಿರತ ಡಾಕ್ಯುಮೆಂಟರಿ ಈಗ ಬಹು
ಹಿಂದೆಯೇ ಬಿಡುಗಡೆಯಾಗಿತ್ತು. ಒಟ್ಟಾರೆ, ಜಗತ್ತಿನ ಸರಣಿ
ಹಂತಕರ ಲಿಸ್ಟ್‌ನಲ್ಲಿ ರಾಬರ್ಟ್ ಹೆಸರು ಮುಂಚೂಣಿಯಲ್ಲಿದೆ ಅಂದ್ರೆ ತಪ್ಪಾಗಲ್ಲ.

ಒಂದು ತಪ್ಪು ಮಾಡಿ ಆಯ್ತು. ಮಾಡಿದ ತಪ್ಪಿಗೆ ಶಿಕ್ಷೆಗೆ ಗುರಿಯಾಗಿದ್ದು, ಆಯ್ತು ಆದ್ರೆ, ಆ ತಪ್ಪಿನ ಅರಿವಾಗಿ ಒಳ್ಳೆ
ಗುಣ ಅಳವಡಿಸಿಕೊಂಡಿದಿದ್ರೆ ರಾಬರ್ಟ್ ಇಷ್ಟೊತ್ತಿಗಾಗಲೇ
ಬಿಡುಗಡೆಯಾಗಿ, ಹೊರಗೆ ಬಂದು ಹೊಸ ಜೀವನ ನಡೆಸಬಹುದಾಗಿತ್ತು. ಬಟ್, 68 ವರ್ಷ ವಯಸ್ಸಿನ ರಾಬರ್ಟ್ ಇನ್ನೆಷ್ಟು ವರ್ಷ ಬದುಕುತ್ತಾನೋ ಗೊತ್ತಿಲ್ಲ. ಜೀವನ ಪೂರ್ತಿ ಜೈಲಲ್ಲೇ ಇರಬೇಕಾಗುತ್ತದೆ ಅನ್ನೋದರಲ್ಲಿ ಯಾವುದೇ ಸಂಶಯವಿಲ್ಲ.

Leave A Reply

Your email address will not be published.