ಕೊಳ್ತಿಗೆ : ಮಹಿಳೆ ನಾಪತ್ತೆ ,ಪತ್ತೆಗೆ ಮನವಿ

ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಮಾಲೆತ್ತೋಡಿ ದಿ. ಕೃಷ್ಣಪ್ಪ ನಾಯ್ಕರ ಪತ್ನಿ ಶ್ರೀಮತಿ ಸರಸ್ವತಿ ಎಂಬವರು ನಾಪತ್ತೆಯಾಗಿದ್ದು, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ. 20ರಂದು ಅಡ್ಯಾರಿನಲ್ಲಿ ನಡೆದ ತಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಮುಂಜಾನೆ 6.30 ಕ್ಕೆ ಮನೆಯಿಂದ ಹೊರಟವರು ಮದುವೆ ಕಾರ್ಯಕ್ರಮಕ್ಕೂ ಹೋಗದೆ ಹಿಂತುರುಗಿ ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಸುಮಾರು 10 ವರ್ಷಗಳಿಂದ ಇವರು ಮಾನಸಿಕ ಅಸ್ವಸ್ಥರಾಗಿದ್ದರೆನ್ನಲಾಗಿದೆ. ಸರಸ್ವತಿಯವರು ಕೆಂಪು ಸೀರೆ, ಕುಪ್ಪಸ ತೊಟ್ಟಿದ್ದು, ಕೂದಲನ್ನು ಕಟ್ ಮಾಡಿಕೊಂಡಿದ್ದಾರೆ. ಗೋಧಿ ಮೈಬಣ್ಣ, ಅಂದಾಜು 5 ಫೀಟ್ ಎತ್ತರ ಹೊಂದಿದ್ದು, ಸುಮಾರು 60 ವರ್ಷ ವಯಸ್ಸಾಗಿರಬಹುದು.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೆಳ್ಳಾರೆ ಠಾಣಾ ಪಿ.ಎಸ್.ಐ. ಆಂಜನೇಯ ರೆಡ್ಡಿ (Mob: 95355 56173) ಅಥವಾ ವೇಣುಚಂದ್ರ ಮಾಲೆತ್ತೋಡಿ (Mob: 9482959846) ಅಥವಾ ಬೆಳ್ಳಾರೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

error: Content is protected !!
Scroll to Top
%d bloggers like this: