ಕಲಾವಿದನ ಕೈಚಳಕದಿಂದ ಮೂಡಿದೆ ವಿಶೇಷ ನೇತ್ರ !! | ಕಣ್ಣಂಚಿನಿಂದ ಕೆನ್ನೆ ಮೇಲೆ ಕಣ್ಣ ಹನಿ ಜಾರುತ್ತಿರುವ ಈ ಚಿತ್ರಣದ ವೀಡಿಯೋ ವೈರಲ್

ಪುಟ್ಟ ಕಲಾವಿದನಿಂದ ಹಿಡಿದು ದೊಡ್ಡ-ದೊಡ್ಡ ಪ್ರತಿಭೆಗಳು ಕೂಡ ಇಂದು ಸೋಶಿಯಲ್ ಮೀಡಿಯಾ ಮೂಲಕ ಜಗತ್ತಿಗೆ ಪರಿಚಯವಾಗುತ್ತಿದ್ದಾರೆ.ಆದರೆ ಅದೆಷ್ಟೋ ಕಲಾವಿದರು ಇನ್ನೂ ತೆರೆಮರೆಯಲ್ಲಿ ಇದ್ದಾರೆ.ಇದೀಗ ಇನ್ಸ್ಟಾಗ್ರಾಮ್ ನಲ್ಲಿ ಒಬ್ಬ ಕಲೆಗಾರನ ಕೈ ಚಳಕದ ಚಿತ್ರಣದ ವಿಡಿಯೊ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುವಂತಿದೆ.

ಈ ವಿಡಿಯೋದಲ್ಲಿ ಕಣ್ಣಂಚಿನಿಂದ ಕೆನ್ನೆಯ ಮೇಲೆ ನೀರು ಜಾರುವುದರಲ್ಲಿದೆ ಎಂಬ ಚಿತ್ರಣವಿದ್ದು, ಇದು ನಿಜವಾದ ಕಣ್ಣು ಅನ್ನಿಸುವಷ್ಟರ ಮಟ್ಟಿಗೆ ಆಕರ್ಷಕವಾಗಿ ಕಾಣಿಸುವ ಚಿತ್ರ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ.ಹೌದು. ಈತನ ಚಿತ್ರದಲ್ಲಿ ಕಣ್ಣಂಚಿನಿಂದ ನೀರು ಬರುತ್ತಿರುವಂತಿದ್ದು,ರಿಯಲಿಸ್ಟಿಕ್​ ಸ್ಕೆಚ್​ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಅದೆಷ್ಟೋ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತದೆ.ಅವುಗಳಲ್ಲಿ ಕೆಲವು ಚಿತ್ರಗಳನ್ನು ನೋಡಿದಾಕ್ಷಣ ನಿಜವಾದ ವಸ್ತು ಅನ್ನಿಸುವಷ್ಟು ಸುಂದರವಾಗಿ ಮೂಡಿಬಂದಿರುತ್ತವೆ. ಇವುಗಳೆಲ್ಲವೂ ಕಲಾವಿದನ ಕೈಚಳಕದಿಂದ ಮೂಡಿರುವಂಥದ್ದು, ಇದೀಗ ಆದ ವಿಡಿಯೋ ಕೂಡ ವಿಭಿನ್ನವಾಗಿದೆ.

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

ಇನ್ಸ್ಟಾಗ್ರಾಮ್​ನಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದ್ದು,ಮೊದಲು ಯುಟ್ಯೂಬ್​ನಲ್ಲಿ ವಿಡಿಯೋ ಹಂಚಿಕೊಂಡ ಬಳಿಕ, ಇತರ ಸಾಮಾಜಿಕ ಮಾಧ್ಯಗಳಲ್ಲಿ ವಿಡಿಯೊ ಹರಿದಾಡಿತು. ನೆಟ್ಟಿಗರ ಗಮನಸೆಳೆದ ವಿಡಿಯೊ ಇದಾಗಿದ್ದು, ನಿಜವಾಗಿಯೂ ವ್ಯಕ್ತಿ ಅಳುತ್ತಿದ್ದಂತೆಯೇ ಅನಿಸುತ್ತಿದೆ ಎಂದು ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ವಿಡಿಯೊ ಪೋಸ್ಟ್ ಮಾಡಿದ ಬಳಿಕ ಸುಮಾರು 30,000 ಕ್ಕೂ ಹೆಚ್ಚಿನ ಲೈಕ್ಸ್​ಗಳನ್ನು ಗಳಿಸಿಕೊಂಡಿದೆ. ತುಂಬಾ ಅದ್ಭುತವಾದ ವಿಡಿಯೋವಿದು ಎಂದು ಓರ್ವರು ಹೇಳಿದರೆ,ವಾವ್ ಅದ್ಭುತ ಎಂದು ಅಭಿಪ್ರಾಯವನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅದೆಷ್ಟೊ ವಿಡಿಯೊಗಳು ಮನಸ್ಸಿಗೆ ಹೆಚ್ಚು ಇಷ್ಟವಾಗುತ್ತವೆ. ಅವುಗಳಲ್ಲಿ ಕೆಲವನ್ನು ಪದೇ ಪದೇ ನೋಡಬೇಕು ಅನ್ನುವಷ್ಟು ಅಚ್ಚರಿ ಮೂಡಿಸುತ್ತವೆ. ಇದೀಗ ವೈರಲ್ ಆದ ವಿಡಿಯೊ ಕ್ಲಿಪ್ ಕೂಡಾ ಅಂಥದ್ದೇ, ಕಲಾವಿದ ತುಂಬಾ ಸುಂದರವಾಗಿ ಕಣ್ಣಿನ ಚಿತ್ರವನ್ನು ಬಿಡಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Leave a Reply

error: Content is protected !!
Scroll to Top
%d bloggers like this: