ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 60 ಕಡೆಗಳಲ್ಲಿ ಎಸಿಬಿ ದಾಳಿ | ಕಂತೆ ಕಂತೆ ಹಣ ಎನಿಸುವುದರಲ್ಲಿ ಎಸಿಬಿ ಅಧಿಕಾರಿಗಳು ಫುಲ್ ಬ್ಯುಸಿ!!

ಇಂದು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 60 ಕಡೆ ಎಸಿಬಿ ದಾಳಿ ನಡೆಸಿ, ಚಳಿಯಲ್ಲಿ ಬೆಚ್ಚಗೆ ಮಲಗಿದ್ದ ಅಧಿಕಾರಿಗಳಿಗೆ ದಾಳಿಯ ಬಿಸಿ ಮುಟ್ಟಿಸಿದೆ. ಬಿಡಿಎ ಬಳಿಕ ಬಿಬಿಎಂಪಿಗೆ ಎಸಿಬಿ ಶಾಕ್‌ ನೀಡಿದ್ದು, ರಾಜ್ಯಾದ್ಯಂತ 60 ಕಡೆ ದಾಳಿ ನಡೆದಿದ್ದು, ಬೆಂಗಳೂರಿನಲ್ಲೇ 30 ಕಡೆ ಎಸಿಬಿ ದಾಳಿ ನಡೆದಿದೆ.

ಬೆಂಗಳೂರಿನಲ್ಲಿ ನಾಲ್ವರು ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮನೆ ಮೇಲೆಯೂ ದಾಳಿ ನಡೆದಿದೆ. ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ 20 ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿದ್ದಾರೆ.

ಮಂಗಳೂರು ಸ್ಮಾರ್ಟ್‌ ಸಿಟಿಯ ಇಇ ಕೆಎಸ್‌ ಲಿಂಗೇಗೌಡ, ಯಲಹಂಕ ಸರ್ಕಾರಿ ಆಸ್ಪತ್ರೆಯ ಫಿಸಿಯೋಥರಪಿಸ್ಟ್‌ ರಾಜಶೇಖರ, ಬಿಬಿಎಂಪಿ ಸಿಬ್ಬಂದಿ ಮಾಯಣ್ಣ, ಬಾಗಲಗುಂಟೆಯ ಗಿರಿ, ಮಂಡ್ಯದ ಎಂಜಿನಿಯರ್‌ ಶ್ರೀನಿವಾಸ್‌, ದೊಡ್ಡಬಳ್ಳಾಪುರದ ರೆವೆನ್ಯೂ ಇನ್ಸ್‌ಪೆಕ್ಟರ್‌ ಲಕ್ಷ್ಮೀನರಸಿಂಹಯ್ಯ, ಬೆಂಗಳೂರು ನಿರ್ಮಿತಿ ಕೇಂದ್ರದ ಮಾಜಿ ಪ್ರೊಜೆಕ್ಟ್‌ ಮ್ಯಾನೇಜರ್‌ ವಾಸುದೇವ್‌ ಮನೆ ಮೇಲೆ ದಾಳಿ ನಡೆದಿದೆ.

ಬೆಂಗಳೂರು ನಂದಿನಿ ಡೈರಿಯ ಜನರಲ್‌ ಮ್ಯಾನೇಜರ್‌ ಕೃಷ್ಣರೆಡ್ಡಿ, ಗದಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿಎಸ್ ರುದ್ರೇಶಪ್ಪ, ಸಹಕಾರ ಇಲಾಖೆ ಅಧಿಕಾರಿ ಕೆ ಮಸ್ತಿ, ಗೋಕಾಕ್‌ ಹಿರಿಯ ಮೋಟಾರ್‌ ಇನ್ಸ್‌ಪೆಕ್ಟರ್‌ ಸದಾಶಿವ ಮಾರಲಿಂಗಣ್ಣನವರ್, ಬೆಳಗಾವಿ ಹೆಸ್ಕಾಂ ನೇತಾಜಿ ಹೀರಾಜಿ ಪಾಟೀಲ್, ಬಳ್ಳಾರಿಯ ನಿವೃತ್ತ ಸಬ್‍ರಿಜಿಸ್ಟ್ರರ್ ಕೆಎಸ್ ಶಿವಾನಂದ, ಜೇವರ್ಗಿ ಪಿಡಬ್ಲ್ಯೂಡಿ ಜೆಇ ಎಸ್ ಎಂ ಬಿರಾದರ್ ಮನೆ ಮೇಲೆ ದಾಳಿ ನಡೆದಿದೆ.

Leave A Reply

Your email address will not be published.