ಪುತ್ತೂರು : ಕೃಷಿ ಜಮೀನನ್ನು ನೋಡಲು ಬಂದು ನಾಪತ್ತೆಯಾಗಿದ್ದ ಫೊಟೋಗ್ರಾಫರ್ ಕೊಲೆ ,ನಾಪತ್ತೆ ಪ್ರಕರಣಕ್ಕೆ ತಿರುವು | ಕೊಲೆ ಮಾಡಿ ಕಥೆ ಕಟ್ಟಿದರು

ಪುತ್ತೂರಿನಲ್ಲಿರುವ ಕೃಷಿ ಜಮೀನನ್ನು ನೋಡಲು ಬಂದು ಪುನಃ ಊರಿಗೆ ತೆರಳಿದ್ದ ಮೈಸೂರು ಸುಬ್ರಹ್ಮಣ್ಯನಗರದ ಫೋಟೋ ಗ್ರಾಫರ್ ಜಗದೀಶ್(58ವ)ರವರು ನಾಪತ್ತೆಯಾಗಿರುವ ಪ್ರಕರಣಕ್ಕೆ ತಿರುವು ದೊರಕಿದೆ.

ಕೃಷಿ ಜಮೀನಿನ ಉಸ್ತುವಾರಿ ವಹಿಸಿಕೊಂಡವರು ಜಗದೀಶ್ ಅವರನ್ನು ಕೊಲೆ ಮಾಡಿದ ಬಗ್ಗೆ ಮಾಹಿತಿ ಲಭಿಸಿದೆ.

ಮೈಸೂರು ಜಿಲ್ಲೆಯ ಸುಬ್ರಹ್ಮಣ್ಯನಗರದಲ್ಲಿ ಫೊಟೋಗ್ರಾಫರ್ ಆಗಿರುವ ಜಗದೀಶ್ ಅವರು ತನ್ನ ಪತ್ನಿ, ಮಗನೊಂದಿಗೆ ಅಲ್ಲೇ ವಾಸ್ತವ್ಯ ಹೊಂದಿದ್ದರು. ತಿಂಗಳಿಗೊಮ್ಮೆ ಪುತ್ತೂರು ಆರ್ಯಾಪು ಗ್ರಾಮದ ಕುಂಜೂರುಪಂಜದಲ್ಲಿರುವ ಕೃಷಿ ಜಮೀನನ್ನು ನೋಡಲು ಬರುತ್ತಿದ್ದು, ನ.18ರಂದು ಮೈಸೂರಿನಿಂದ ಬೆಳಿಗ್ಗೆ ಪುತೂರು ಕುಂಜೂರುಪಂಜದ ಕೃಷಿ ಜಮೀನಿಗೆ ಬಂದಿದ್ದರು. ಬಳಿಕ ಅವರು ಪುತ್ತೂರಿಗೆ ಮಧ್ಯಾಹ್ನ ಹೋಗಿ ಸಂಜೆ ಪುಳಿತ್ತಡಿಗೆ ಬಂದು ಅಲ್ಲಿಂದ ಮೈಸೂರಿಗೆ ಹೋಗಲೆಂದು ಓಮ್ನಿ ಕಾರಿನಲ್ಲಿ ಸುಳ್ಯ ತನಕ ತೆರಳಿದ್ದರು. ಅಲ್ಲಿಂದ ಬಸ್‌ನಲ್ಲಿ ಮೈಸೂರಿಗೆ ಹೋಗುವುದಾಗಿ ತೆರಳಿದ್ದರೂ ಮೈಸೂರಿಗೆ ತಲುಪದೆ ಅವರು ನಾಪತ್ತೆಯಾಗಿದ್ದಾರೆ. ಅವರ ಪತ್ನಿ ಶರ್ಮಿಳಾ ಅವರು ನ.19ರ ನಸುಕಿನ ಜಾವ ಗಂಡ ಜಗದೀಶ್ ಅವರಿಗೆ ಕರೆ ಮಾಡಿದಾಗ ಅವರ ಪೋನ್ ಸ್ವಿಚ್ ಆಫ್ ಆಗಿತ್ತು. ಈ ನಿಟ್ಟಿನಲ್ಲಿ ಅವರು ಮನೆ ಮಂದಿಗೆ ಗಂಡ ನಾಪತ್ತೆಯಾಗಿರುವ ಕುರಿತು ಮಾಹಿತಿ ನೀಡಿದ್ದರು. ಜಗದೀಶ್ ಅವರ ಸಹೋದರ ಮಂಗಳೂರಿನಲ್ಲಿರುವ ಶಶಿಧರ್ ಎಂಬವರು ಪುತ್ತೂರು ಸಂಪ್ಯ ಪೊಲಿಸರಿಗೆ ಜಗದೀಶ್ ಅವರು ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು.

ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಸೈ ಉದಯ ರವಿ ಅವರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತೋಟದ ಮೇಲ್ವಿಚಾರಕ ಸುಬ್ಬಣ್ಣ ಎಂಬವರನ್ನು ತನಿಖೆ ನಡೆಸಿದಾಗ ವಾಸ್ತವ ಬಯಲಾಗಿದೆ‌. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ….

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply

Your email address will not be published.