“ಜಿಲ್ಲಾಧಿಕಾರಿ ಕಚೇರಿಗೆ ಲಗ್ಗೆ ಹಾಕ್ತಿವಿ-ಅವನ ಕೊರಳ ಪಟ್ಟಿಯನ್ನು ಹಿಡಿತೀವಿ!” ಸಮಾವೇಶವೊಂದರಲ್ಲಿ ಕಿಡಿಕಾರಿದ್ದ ಕಾರಂತ್!!|ಪುಂಜಾಲಕಟ್ಟೆ ಠಾಣೆಯಲ್ಲಿ ಜಗದೀಶ್ ಕಾರಂತರ ಮೇಲೆ ಪ್ರಕರಣ ದಾಖಲಿಸಿದ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ

ಕೆಲ ದಿನಗಳ ಹಿಂದೆ ನಡೆದ ಇತಿಹಾಸ ಪ್ರಸಿದ್ಧ ಕಾರಿಂಜೇಶ್ವರನ ಮಣ್ಣಿಗೆ ‘ಜಾಗರಣದ ವೀರ ನಡಿಗೆ’ ಕಾರ್ಯಕ್ರಮದಲ್ಲಿ ಭಾಷಣಗಾರರಾಗಿ ಆಗಮಿಸಿದ್ದ ಸಂಘಟನೆಯ ಪ್ರಖರ ವಾಗ್ಮಿ ಜಗದೀಶ್ ಕಾರಂತ್ ಮೇಲೆ ಪಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಕಾರಿಂಜದಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ ಎಂಬ ಮಾಹಿತಿಯ ಮೇರೆಗೆ ಹಿಂದೂ ಜಾಗರಣ ವೇದಿಕೆಯ ಸಮ್ಮುಖದಲ್ಲಿ ಕಾರಿಂಜ ದೇವಾಲಯಕ್ಕೆ ಕಾಲ್ನಡಿಗೆ ಜಾತಾ ಹಾಗೂ ಬೃಹತ್ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಜಗದೀಶ್ ಕಾರಂತ್ ತನ್ನ ಭಾಷಣದುದ್ದಕ್ಕೂ ಕಿಡಿಕಾರಿದಲ್ಲದೇ, ಜಿಲ್ಲೆಯ ಜವಾಬ್ದಾರಿಯುತ ಜಿಲ್ಲಾಧಿಕಾರಿಯವರನ್ನು ಏಕವಚನದಲ್ಲಿ ಸಂಬೋಧಿಸಿದ್ದರು. ಅದಲ್ಲದೇ ವರ್ಗಾವಣೆ ತೆಗೆದುಕೊಂಡು ಹೋಗು, ಇಲ್ಲದಿದ್ದಲ್ಲಿ ನಮ್ಮ ಪ್ರತಿಭಟನೆ ಮುಂದುವರಿದು ಕಚೇರಿಯೊಳಗೆ ನುಗ್ಗಿ ಕೊರಳಪಟ್ಟಿಗೆ ಕೈಹಾಕಿ ಕೇಳುತ್ತೇವೆ ಎಂದು ಬಹಿರಂಗವಾಗಿ ಮಾತನಾಡಿದ್ದರು.

ಸದ್ಯ ಕಾರಂತರ ಭಾಷಣದ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಪುಂಜಾಲಕಟ್ಟೆ ಠಾಣೆಯಲ್ಲಿ ಜಗದೀಶ್ ಕಾರಂತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Leave A Reply

Your email address will not be published.