ಸದ್ಯದಲ್ಲೇ ಭಾರತದಲ್ಲಿ ಬ್ಯಾನ್ ಆಗಲಿದೆ ಕ್ರಿಪ್ಟೋಕರೆನ್ಸಿ !! | ಈ ಕುರಿತು ಮಹತ್ವದ ಹೆಜ್ಜೆಯಿಡಲಿದೆಯೇ ಕೇಂದ್ರ ಸರ್ಕಾರ?!

ನವದೆಹಲಿ:ಅನಾವಶ್ಯಕ ಚಟುವಟಿಕೆಗಳಿಗೆ ಕ್ರಿಪ್ತೋಕರೆನ್ಸಿಯನ್ನು ಉಪಯೋಗಿಸುತ್ತಿದ್ದು, ಇದು ಅನೇಕ ಚರ್ಚೆಗೆ ದಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಎಲ್ಲಾ ಮಾದರಿಯ ಕ್ರಿಪ್ತೋಕರೆನ್ಸಿಯನ್ನು ಬ್ಯಾನ್ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಭಾರತದಲ್ಲಿ ಎಲ್ಲಾ ಮಾದರಿಯ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ಬ್ಯಾನ್ ಮಾಡುವ ಸಾಧ್ಯತೆಯಿದ್ದು,ಚಳಿಗಾಲದ ಅಧಿವೇಶನದಲ್ಲಿ 26 ವಿಧೇಯಕಗಳನ್ನು ಮಂಡಿಸಲಿದ್ದು, ಅದರಲ್ಲಿ ಕ್ಟಿಪ್ಟೋ ಕರೆನ್ಸಿ ಕೂಡ ಒಂದಾಗಿದೆ.ಲೋಕಸಭೆಯ ವೆಬ್‌ಸೈಟ್ ಪ್ರಕಾರ, ನವೆಂಬರ್ 29 ರಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವು 25 ಇತರ ಮಸೂದೆಗಳೊಂದಿಗೆ ಕ್ರಿಪ್ಟೋಕರೆನ್ಸಿಗಳ ಮಸೂದೆಯನ್ನು ಪರಿಚಯಿಸಲಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಇತ್ತೀಚೆಗಷ್ಟೇ ಕ್ರಿಪ್ತೋಕರೆನ್ಸಿ ಬಗ್ಗೆ ಪ್ರಸ್ತಾಪಿಸಿದ್ದರು, ಇದರ ಬೆನ್ನಲ್ಲೇ ಭಾರತದಲ್ಲಿ ಕ್ರಿಪ್ತೋಕರೆನ್ಸಿ ಯನ್ನು ಬ್ಯಾನ್ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿಯೂ ಕ್ರಿಪ್ಟೋ ಕರೆನ್ಸಿ ವಿಚಾರ ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿದೆ.ಹೂಡಿಕೆದಾರರನ್ನು ತಪ್ಪುದಾರಿಗೆಳೆಯಲು, ಆಕರ್ಷಿಸಲು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ನೀಡಲು ಇಂತಹ ಕರೆನ್ಸಿಗಳನ್ನು ಬಳಸಲಾಗುತ್ತಿದೆ ಎಂಬ ಕಳವಳದ ನಡುವೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಅಧಿಕೃತ ಡಿಜಿಟಲ್ ಕರೆನ್ಸಿ ಮಸೂದೆ – 2021 ರ ಕ್ರಿಪ್ಟೋಕರೆನ್ಸಿ ಮತ್ತು ನಿಯಂತ್ರಣದ ಪ್ರಕಾರ, ಭಾರತದಲ್ಲಿ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಪ್ರಯತ್ನಿಸುತ್ತದೆ, ಆದಾಗ್ಯೂ, ಆಧಾರವಾಗಿರುವ ತಂತ್ರಜ್ಞಾನ ಮತ್ತು ಅದರ ಬಳಕೆಗಳನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ಇದು ಅನುಮತಿಸುತ್ತದೆ. ಬಿಲ್ ರಚನೆಗೆ ಚೌಕಟ್ಟನ್ನು ರಚಿಸುವ ಗುರಿ ಹೊಂದಿದೆ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕೃತ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಸ್ತುತ, ದೇಶದಲ್ಲಿ ಕ್ರಿಪ್ಟೋ ಕರೆನ್ಸಿಗಳ ಬಳಕೆಯ ಮೇಲೆ ಯಾವುದೇ ನಿರ್ದಿಷ್ಟ ನಿಯಮಗಳು ಅಥವಾ ಯಾವುದೇ ನಿಷೇಧವಿಲ್ಲ. ಈ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹಿರಿಯ ಅಧಿಕಾರಿಗಳೊಂದಿಗೆ ಕ್ರಿಪ್ಟೋ ಕರೆನ್ಸಿಗಳ ಕುರಿತು ಸಭೆ ನಡೆಸಿದ್ದರು. ಸಮಸ್ಯೆಯನ್ನು ಎದುರಿಸಲು ಬಲವಾದ ನಿಯಂತ್ರಕ ಕ್ರಮಗಳನ್ನು ತೆಗೆದುಕೊಳ್ಳಬಹುದಾದ ಸೂಚನೆಗಳಿವೆ. ಪ್ರಸ್ತಾವಿತ ಮಸೂದೆಯು ಹೂಡಿಕೆದಾರರ ರಕ್ಷಣೆಗೆ ಒತ್ತು ನೀಡಲಿದೆ ಎಂದು ಮೂಲಗಳು ತಿಳಿಸಿವೆ.ಆಗಸ್ಟ್‌ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕ್ರಿಪ್ಟೋ ಕರೆನ್ಸಿ ಬಿಲ್‌ ಕ್ಯಾಬಿನೆಟ್‌ನಿಂದ ಅನುಮೋದನೆಗಾಗಿ ಕಾಯುತ್ತಿರುವುದಾಗಿ ಹೇಳಿದರು.

Leave a Reply

error: Content is protected !!
Scroll to Top
%d bloggers like this: