ಕಾರ್ ಪಾರ್ಕ್ ಮಾಡುವಾಗ ಅಪ್ಪನ ಕಾರಿನ ಎದುರು ಆಟವಾಡುತ್ತಾ ಬಂದ ಮಗು | ಕಾರಿನ ಕೆಳಗೆ ಸಿಕ್ಕಿ ಮಗು ನುಜ್ಜುಗುಜ್ಜು !!

ಅಪಾರ್ಟ್​ಮೆಂಟ್​ನಲ್ಲಿ ದೊಡ್ಡ ಅವಘಡ ನಡೆದು ಹೋಗಿದೆ. ಅಚಾತುರ್ಯಕ್ಕೆ ಸೆಕ್ಯೂರಿಟಿ ಗಾರ್ಡ್​ ಲಕ್ಷ್ಮಣ್​ ಅವರ ಮಗ ಬಲಿಯಾಗಿದ್ದಾನೆ.

ಲಕ್ಷ್ಮಣ್ ಅವರು ಎಸ್​ಯುವಿ ಕಾರನ್ನು ಒಳಗೆ ನಿಲ್ಲಿಸಲು ಮುಂದಾಗಿದ್ದರು. ಈ ವೇಳೆ ಲಕ್ಷ್ಮಣ್​ ಹಿಂದೆಯೇ ನಾಲ್ಕು ವರ್ಷದ ಮಗ ಸಾತ್ವಿಕ್​ ಓಡಿ ಬಂದು ರಸ್ತೆಯಲ್ಲಿ ಆಟವಾಡುತ್ತಿದ್ದ. ಕಾರ್​​ ಹಿಂದಕ್ಕೆ ಓಡಿ ಹೋಗಿದ್ದ ಮಗು ಅಚಾನಕ್​​ ಆಗಿ ಮುಂದೆ ಬಂದಿದೆ. ಇದನ್ನು ತಿಳಿಯದ ಲಕ್ಷಣ್​ ಕಾರನ್ನು ಮುಂದಕ್ಕೆ ಚಲಾಯಿಸಿದ್ದಾರೆ.
ಆಗ ಮಗುವಿನ ಮೇಲೆ ಹತ್ತಿದ್ದು, ಇದು ಅವರ ಗಮನಕ್ಕೂ ಕೂಡ ಬಂದಿಲ್ಲ. ಈ ಭಯಾನಕ ದೃಶ್ಯದ ಸಂಪೂರ್ಣ ವೀಡಿಯೋ ಅಪಾರ್ಟ್​ಮೆಂಟ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಪಾರ್ಟ್​ಮೆಂಟ್​ ಹೊರಗೆ ನಿಲ್ಲಿಸಿದ್ದ ಎಸ್​ಯುವಿ ಕಾರನ್ನು ನಿಲ್ಲಿಸಲು ಲಕ್ಷ್ಮಣ್​ ಮುಂದಾಗಿದ್ದ. ಇದಾದ ಕೆಲವೇ ಸೆಕೆಂಡ್​​ ನಂತರ ನಾಲ್ಕು ವರ್ಷದ ಸಾತ್ವಿಕ್​ ಮತ್ತೊಂದು ಮಗುವಿನ ಜೊತೆ ಆಟವಾಡಲು ಗೇಟ್​ನಿಂದ ಹೊರಗೆ ಬಂದಿದ್ದಾನೆ. ಈ ವೇಳೆ ಕಾರು ಹಿಂದೆ ಮುಂದೆ ಕೂಡ ಓಡಾಡಿದ ಆತ ಕಾರು ಮುಂದೆ ಬಂದು ನಿಂತಿದ್ದಾನೆ. ಈ ವೇಳೆ ಕಾರು ಮುಂದೆ ಮಗು ನಿಂತಿದ್ದು, ತಂದೆಗೆ ಅರಿವಾಗದೇ ಕಾರು ಚಲಾಯಿಸಿದ್ದಾರೆ. ಈ ವೇಳೆ ಸಾತ್ವಿಕ್​ ಚಕ್ರದ ಕೆಳಗೆ ಸಿಲುಕಿ ನಜ್ಜುಗುಜ್ಜಾಗಿದ್ದಾನೆ.

ಇದಾದ ಬಳಿಕ ಏನೋ ಅನಾಹುತ ನಡೆದಿರುವ ಅರಿವಾದ ತಂದೆ ಲಕ್ಷ್ಮಣ್​ಗೆ ಮಗ ಸಾವನ್ನಪ್ಪಿರುವುದು ತಿಳಿದಿದೆ. ತಕ್ಷಣಕ್ಕೆ ಆತ ಮಗ ಸಾತ್ವಿಕ್​ನನ್ನು ಅಪಾರ್ಟ್​ಮೆಂಟ್​ಗೆ ಕೊಂಡೋಯ್ದಿದ್ದಾರೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಗಂಭೀರವಾಗಿ ಗಾಯಗೊಂಡ ಮಗು ಬದುಕಿ ಉಳಿಯಲಿಲ್ಲ. ಇನ್ನು ಈ ಘಟನೆ ಕುರಿತು ಎಲ್​ಬಿ ನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.