ತನ್ನ ಪ್ರೀತಿಯ ಹೆಂಡತಿಗಾಗಿ ತಾಜ್ ಮಹಾಲ್ ಮಾದರಿಯ ಮನೆ ನಿರ್ಮಿಸಿ ಉಡುಗೊರೆ ನೀಡಿದ ಪತಿರಾಯ!|ನಿರ್ಮಾಣಕ್ಕಾಗಿ ಬರೋಬ್ಬರಿ ಮೂರು ವರ್ಷಗಳನ್ನು ತೆಗೆದುಕೊಂಡ ತಾಜ್ ಮಹಲ್ ನ ಪ್ರತಿರೂಪ ಹೇಗಿದೆ ನೋಡಿ

ತಾಜಮಹಲ್ ಪ್ರೀತಿಯ ಸಂಕೇತ.ಪ್ರೇಮಿಗಳ ಪಾಲಿಗೆ ದೇವಾಲಯವೇ ಸರಿ. ಪ್ರತಿಯೊಬ್ಬ ಗಂಡ-ಹೆಂಡತಿಯಿಂದ ಹಿಡಿದು ಪ್ರೇಮಿಗಳವರೆಗೂ ಎಲ್ಲರಿಗೂ ತಾಜಮಹಲ್ ಭೇಟಿ ಮಾಡೋ ಆಸೆ ಇದ್ದೇ ಇರುತ್ತದೆ.ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಮುಂದೆ ನಿಂತು ಒಂದಲ್ಲ ಒಂದು ಬಾರಿ ತನ್ನ ಪ್ರೀತಿಗೆ ಪ್ರೇಮ ನಿವೇದನೆಯನ್ನು ಮಾಡಬೇಕು ಎಂಬುದು ಪ್ರತಿಯೊಬ್ಬ ಪ್ರೇಮಿಯ ಕನಸು.ಪ್ರೀತಿಯ ಸಂಕೇತವಾಗಿರುವ ಈ ತಾಜ್ ಮಹಲ್ ವೀಕ್ಷಣೆಗೆ ಪ್ರತಿನಿತ್ಯ ಪ್ರಪಂಚದ ಮೂಲೆ ಮೂಲೆಯಿಂದ ಜನರು ಬರುತ್ತಾರೆ.ಆದರೆ ಇಲ್ಲೊಬ್ಬ ಪತಿರಾಯ ತನ್ನ ಹೆಂಡತಿಯ ಮೇಲಿನ ಪ್ರೀತಿಯಿಂದ ತಾಜ್ ಮಹಲ್ ವರೆಗೂ ಹೋಗುವ ಅವಶ್ಯಕತೆ ಇಲ್ಲವೆಂಬಂತೆ ತಾಜ್ ಮಹಲ್ ಮಾದರಿಯ ಮನೆಯನ್ನೇ ನಿರ್ಮಿಸಿದ್ದಾನೆ.

ಭಾರತದ ಆಗ್ರಾದಲ್ಲಿರುವ ಭವ್ಯ ಸಮಾಧಿಯಾಗಿರುವ ತಾಜ್ ಮಹಾಲ್ ಅನ್ನು ಮೊಘಲ್‌‌ ಚಕ್ರವರ್ತಿ ಷಹ ಜಹಾನ್‌‌ ತನ್ನ ಮೆಚ್ಚಿನ ಪತ್ನಿ ಮಮ್ತಾಜ್‌ ಮಹಲ್‌ಳ ನೆನಪಿಗಾಗಿ ಕಟ್ಟಿಸಿದನು.ತಾಜ್‌ ಮಹಲ್ ವಾಸ್ತವವಾಗಿ ಅನೇಕ ಸಂರಚನೆಗಳ ಒಂದು ಸಮಗ್ರ ಸಂಕೀರ್ಣವಾಗಿದ್ದು, ಗೌರವರ್ಣದ ಗುಮ್ಮಟಾಕಾರದ ಅಮೃತಶಿಲೆಯ ಭವ್ಯ ಸಮಾಧಿಯು ಇದರ ಅತ್ಯಂತ ಸುಪರಿಚಿತ ಭಾಗವಾಗಿದೆ. ಇದರ ವಾಸ್ತುಶಿಲ್ಪಕ್ಕೆ ಮರುಳಾಗದವರೇ ಇಲ್ಲ.ಹೀಗಿರುವಾಗ ಮಧ್ಯಪ್ರದೇಶದಲ್ಲಿ ಪತಿಯೊಬ್ಬ ತನ್ನ ಹೆಂಡತಿಯಾಗಿ ತಾಜ್ ಮಹಲ್ ಮಾದರಿಯ ಮನೆಯನ್ನು ನಿರ್ಮಿಸಿ ಆಶ್ಚರ್ಯ ಮೂಡಿಸಿದ್ದಾರೆ.

ಮಧ್ಯಪ್ರದೇಶದ ಬುರ್ಹಾನ್‌ಪುರದ ನಿವಾಸಿಯಾಗಿರುವ ಆನಂದ್ ಚೋಕ್ಸೆ, ಬುರ್ಹಾನ್‌ಪುರದಲ್ಲಿಯೂ ತಾಜ್​ಮಹಲ್ ನಿರ್ಮಾಣವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಯೋಚಿಸುತ್ತಿದ್ದರು.ಅವರ ಯೋಜನೆಯಂತೆ ತಾಜ್​ಮಹಲ್​ ಮಾದರಿ ಹೋಲುವ ಮನೆಯನ್ನು ಬುರ್ಹಾನ್‌ಪುರದಲ್ಲಿ ನಿರ್ಮಿಸಿ ತಮ್ಮ ಹೆಂಡತಿಗೆ ಉಡುಗೊರೆಯಾಗಿ ನೀಡಿದ್ದಾರೆ.ತಾಜ್ ಮಹಲ್ ನ ಪ್ರತಿರೂಪವಾಗಿರುವ ಈ ತಾಜ್ ಮಹಲ್ ಮನೆ ನಿರ್ಮಾಣಕ್ಕೆ ಬರೋಬರಿ ಮೂರು ವರ್ಷಗಳು ತೆಗೆದುಕೊಂಡಿದ್ದು, ನಿರ್ಮಾಣ ಮಾಡುವಾಗ ಹಲವಾರು ರೀತಿಯ ಸವಾಲುಗಳು ಎದುರಾಗಿತ್ತು ಎಂದು ಮನೆ ನಿರ್ಮಿಸಿದ ಎಂಜಿನಿಯರ್ ಹೇಳಿಕೊಂಡಿದ್ದಾರೆ.

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

ತಾಜ್ ಮಹಲ್ ಮನೆ ತೀರ್ಮಾನಕ್ಕಾಗಿ ಹಲವು ಅಧ್ಯಯನಗಳು ನಡೆದು, ಜವಾದ ತಾಜ್ ಮಹಲನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಿದ ಬಳಿಕ ನಿರ್ಮಾಣ ಮಾಡಲು ಎಂಜಿನಿಯರ್ ಮುಂದಾಗಿದ್ದಾರೆ.ಅಲ್ಲದೆ ಮನೆಯೊಳಗಿನ ಕೆತ್ತನೆಗಾಗಿ ಅವರು ಬಂಗಾಳ ಮತ್ತು ಇಂದೋರ್‌ನ ಕಲಾವಿದರಿಂದ ಸಹಾಯ ಕೂಡ ಪಡೆದುಕೊಳ್ಳಲಾಗಿದೆ.ಇನ್ನು ಈ ಮನೆಯ ಗುಮ್ಮಟ 29 ಅಡಿ ಎತ್ತರದಲ್ಲಿದೆ. ಇದು ತಾಜ್ ಮಹಲ್ ತರಹದ ಗೋಪುರಗಳನ್ನು ಹೊಂದಿದೆ ಮತ್ತು ಮನೆಯ ನೆಲಹಾಸನ್ನು ರಾಜಸ್ಥಾನದ ಮಕ್ರಾನಾದಿಂದ ಮಾಡಲಾಗಿದೆ. ಮತ್ತು ಈ ಮನೆಯ ಪೀಠೋಪಕರಣಗಳನ್ನು ಮುಂಬೈನ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ. ಮನೆಯೊಳಗೆ ವಿಶಾಲವಾದ ಹಾಲ್ ಇದ್ದು, ಕೆಳಗೆ 2,ಮೇಲೆ ಎರಡು ಬೆಡ್ ರೂಂಗಳಿವೆ.ಅಲ್ಲದೇ ಮನೆಯ ಮೇಲಂತಸ್ತಿನಲ್ಲಿ ಗ್ರಂಥಾಲಯ ಹಾಗೂ ಧ್ಯಾನದ ಕೊಠಡಿ ಕೂಡ ಇದೆ.

ಅಷ್ಟೇ ಅಲ್ಲದೆ ಮನೆಯ ಒಳಗೂ ಹೊರಗೂ ದೀಪಾಲಂಕಾರ ಮಾಡಿದ್ದು ನಿಜವಾದ ತಾಜ್ ಮಹಲ್ ನಂತೆಯೇ ಈ ಮನೆಯೂ ಸಹ ಕತ್ತಲಲ್ಲಿ ಹೊಳೆಯುತ್ತದೆ. ಒಟ್ಟಾರೆ ಹೆಂಡತಿ ಮೇಲಿನ ಅಗಾಧವಾದ ಪ್ರೀತಿಯನ್ನು ತೋರಿಸಲು ವಸ್ತುಗಳನ್ನು ದುಬಾರಿಯಾಗಿ ಕೊಡುವ ಕಾಲದಲ್ಲಿ, ಅಸಂಖ್ಯಾತ ಪ್ರೇಮಿಗಳ ಪಾಲಿಗೆ ದೇವಾಲಯವಾಗಿರುವ ತಾಜ್ ಮಹಾಲ್ ಮಾದರಿಯ ಮನೆಯನ್ನ ನಿರ್ಮಾಣ ಮಾಡಿ ಅದನ್ನು ತನ್ನ ಹೆಂಡತಿಗೆ ಉಡುಗೊರೆಯಾಗಿ ನೀಡುವ ಮೂಲಕ ಆನಂದ್ ಕೂಡ ಶಹಜಾನ್ ನಂತೆ ತನ್ನ ಹೆಂಡತಿ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: