ಪ್ರಾಣಿಗಳ ತುಪ್ಪಳದಿಂದ ತಯಾರಿಸಿದ ಬಟ್ಟೆಗಳ ಬಗ್ಗೆ ತಿಳಿದಿರಬಹುದು, ಆದರೆ ಮನುಷ್ಯನ ಮೀಸೆಯಿಂದ ತಯಾರಾದ ಬಟ್ಟೆಯ ಬಗ್ಗೆ ಎಂದಾದರೂ ಕೇಳಿದ್ದೀರಾ??? | ಇಲ್ಲಿದೆ ನೋಡಿ ಈ ವಿಚಿತ್ರ ಬಟ್ಟೆಯ ಕುರಿತ ಸುದ್ದಿ

ನೀವು ಕುರಿಯ ಉಣ್ಣೆಯಿಂದ ತಯಾರಿಸಿದ ದಿರಿಸನ್ನು ಧರಿಸಿರಬಹುದು. ಅದಲ್ಲದೆ ಇತರ ಪ್ರಾಣಿಗಳ ತುಪ್ಪಳದಿಂದ ಮಾಡಿದ ಬಹಳಷ್ಟು ಬಟ್ಟೆಗಳನ್ನೂ ಬಳಸಿರಬಹುದು. ವಿವಿಧ ಪ್ರಾಣಿಗಳ ತುಪ್ಪಳವನ್ನು ಹೇಗೆ ಪ್ರತ್ಯೇಕಿಸುವುದು ಎಂಬುದರ ಕುರಿತು ತಿಳಿದಿರುವ ಅನೇಕ ಜನರಿದ್ದಾರೆ. ಹೀಗಿರುವಾಗ ಮನುಷ್ಯರ ಮೀಸೆಯಿಂದ ತಯಾರಿಸಲಾದ ಬಟ್ಟೆ ಬಗ್ಗೆ ತಿಳಿದರೆ ನೀವು ಆಶ್ಚರ್ಯಚಕಿತರಾಗುವುದಂತೂ ಖಂಡಿತ.

ಆಸ್ಟ್ರೇಲಿಯಾದ ಮೆನ್ಸ್ ವೆಯರ್ ಕಂಪನಿ ಈ ಸೂಟ್ ತಯಾರಿಸಿದೆ. ಇದು ತುಂಬಾ ವಿಲಕ್ಷಣ ಸಂಗತಿಯಾದರೂ ಕೂಡ ನಿಜ. ಆಸ್ಟ್ರೇಲಿಯಾದ ಮೆನ್ಸ್ ವೆಯರ್ ಕಂಪನಿಯು ಪುರುಷರ ಮೀಸೆ ಕೂದಲಿನಿಂದ ಮಾಡಿದ ಸೂಟ್ ಅನ್ನು ಸಿದ್ದಪಡಿಸಿದೆ. ಮೀಸೆ ಕೂದಲಿನಿಂದ ಸೂಟ್ ತಯಾರಿಸುವ ಈ ಕಂಪನಿಯ ಹೆಸರು ಪಾಲಿಟಿಕ್ಸ್ ಮೆನ್ಸ್ ವೇರ್ ಬ್ರಾಂಡ್.

ಪೊಲಿಟಿಕ್ಸ್ ಬ್ರ್ಯಾಂಡ್ ಈ ವಿಶಿಷ್ಟವಾದ ಸೂಟ್ ಅನ್ನು ಸಿದ್ಧಪಡಿಸಿದೆ. ಮೆಲ್ಬೋರ್ನ್ ಮೂಲದ ವಿಷ್ಯುವಲ್ ಆರ್ಟಿಸ್ಟ್ ಪಮೇಲಾ ಕ್ಲೀಮನ್-ಪಾಸ್ಸಿ ಅವರೊಂದಿಗೆ ಸೇರಿಕೊಂಡು ಇದನ್ನು ಸಿದ್ಧಪಡಿಸಲಾಗಿದೆ. ಈ ಸೂಟ್ ಅನ್ನು ಮೂವೆಂಬರ್ ಎಂಬ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ನಡೆಯುವ ಸಮಾರಂಭ. ಈ ಸಮಾರಂಭದಲ್ಲಿ ವಿಶ್ವದಾದ್ಯಂತ ಪುರುಷರಿಗೆ ತಮ್ಮ ಮೀಸೆಯನ್ನು ಬೆಳೆಸಲು ವಿನಂತಿಸಲಾಗುತ್ತದೆ. ವಾಸ್ತವವಾಗಿ, ಪುರುಷರಲ್ಲಿ ಸಂಭವಿಸುವ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಮಾಡಲಾಗುತ್ತದೆ.

https://www.instagram.com/p/CWJvCMbMFrP/?utm_source=ig_web_copy_link

ಪಾಲಿಟಿಕ್ಸ್ ಬ್ರಾಂಡ್ ಈ ಸೂಟ್ ಅನ್ನು ಮಾನವನ ಮೀಸೆಯ ಕೂದಲಿನಿಂದ ತಯಾರಿಸಲಾಗಿದೆ. ಅನೇಕ ಜನರು ಈ ಸೂಟ್ ಅನ್ನು ವಿಚಿತ್ರವಾಗಿ ಮತ್ತು ನೋಡಲು ಅಸಹ್ಯಕರವಾಗಿ ಕಾಣುತ್ತಾರೆ. ಈ ಸೂಟ್‌ಗೆ ಮೊ ಹೇರ್ ಸೂಟ್ ಎಂದು ಹೆಸರಿಸಲಾಗಿದೆ. ಪಮೇಲಾ ಕ್ಲೀಮನ್-ಪಾಸ್ಸಿ ಈ ಸೂಟ್ ಮಾಡಲು ತುಂಬಾ ಶ್ರಮಪಟ್ಟಿದ್ದಾರೆ. ಅವರು ವಿವಿಧ ಸಲೂನ್‌ಗಳಿಂದ ಮೀಸೆ ಕೂದಲನ್ನು ಸಂಗ್ರಹಿಸಿದ್ದಾರೆ. ಈ ಪ್ರಾಜೆಕ್ಟ್ ಗಾಗಿ ಜನರು ತಮ್ಮ ಮೀಸೆ ಕತ್ತರಿಸಿದ ನಂತರ ಕೂದಲುಗಳನ್ನು ಪೌಚ್ ನಲ್ಲಿ ಕಳುಹಿಸುತ್ತಿದ್ದರು.

ಪಮೇಲಾ ಅವರ ಪತಿ ಪ್ರೊಟೆಸ್ಟ್ ಕ್ಯಾನ್ಸರ್‌ನಿಂದ ನಿಧನರಾಗಿದ್ದರು. ಇದರ ನಂತರ, ಅವರು ಪುರುಷರಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸಲು ಪ್ರಾರಂಭಿಸಿದ್ದಾರೆ. ಈ ಜಾಗೃತಿಗೆ ಬಹಳಷ್ಟು ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Leave A Reply

Your email address will not be published.