ಗಿಳಿಗಳ ಪೋಷಣೆಗಾಗಿ ಈತ ಮಾಡಿದ್ದು ಸಂಬಳದ ಶೇ.40 ಖರ್ಚು…

ಚೆನ್ನೈ : ಪಕ್ಷಿಗಳ ಮೇಲೆ ಜನರಿಗೆ ಏನೋ ಒಂಥರ ಪ್ರೀತಿ.

ಪುಟಾಣಿ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಪಕ್ಷಿಗಳನ್ನು ಕಂಡು ಉತ್ಸಾಹದಿಂದ ಮನಸ್ಸಿನಲ್ಲಿ ತಾವೇ ಆಕಾರದಲ್ಲಿ ಹಾರುವಂತೆ ಸಂತಸಪಡುತ್ತಾರೆ. ಅದರಲ್ಲೂ ಗಿಳಿಮರಿಗಳನ್ನು ಕಂಡರೆ ಸಾಕು ವಿಶೇಷ ಕಾಳಜಿಯನ್ನೇ ಮಾಡುತ್ತಾರೆ. ಅದರಂತೆ ಚೆನ್ನೈನಲ್ಲಿ ಪಕ್ಷಿಪ್ರೇಮಿಯೊಬ್ಬರು ಗಿಳಿಗಳ ಆರೈಕೆಗೆ ಟೊಂಕ ಕಟ್ಟಿ ನಿಂತಿದ್ದಾರೆ.

ಹೌದು ಚೆನ್ನೈ ಮೂಲದ ವ್ಯಕ್ತಿಯಾದ ಜೋಸೆಫ್ ಸೇಕರ್ ಎಂಬಾತ ಗಿಳಿಗಳ ಆರೈಕೆಗಾಗಿ ತಮ್ಮ ಸಂಬಳದಿಂದ ಶೇ.40ರಷ್ಟು ಖರ್ಚು ಮಾಡುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.

ಚೆನ್ನೈನ “ಬರ್ಡ್‌ಮ್ಯಾನ್’ ಎಂದೇ ಪ್ರಸಿದ್ದಿ ಹೊಂದಿರುವ ಇವರು ಗಿಳಿಗಳ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದಾರೆ. ಇವರು ತೋರಿಸುವ ಪ್ರೀತಿಗೆ ಮಾರು ಹೋಗಿ ಸಾವಿರಾರು ಗಿಳಿಮರಿಗಳು ಇವರನ್ನು ಹುಡುಕಿಕೊಂಡು ಬರುತ್ತವೆ.

ಕಳೆದ 16 ವರ್ಷಗಳಿಂದ ತಮ್ಮ ತಾರಸಿಯಲ್ಲಿ ಸಾವಿರಾರು ಗಿಳಿಗಳಿಗೆ ಆಹಾರ ನೀಡುತ್ತಿದ್ದಾರೆ .

ವೃತ್ತಿಯಲ್ಲಿ ಎಲೆಕ್ಟಿಷಿಯನ್ ಮತ್ತು ಕ್ಯಾಮೆರಾ ತಂತ್ರಜ್ಞರಾಗಿರುವ ಇವರು, ತಾವು ಕೆಲಸ ಮಾಡುವ ಅಂಗಡಿಯ ಮೇಲ್ಬಾಗದಲ್ಲಿ ಪ್ರತಿದಿನ ಕನಿಷ್ಠ 2000 ಗಿಳಿಗಳಿಗೆ ಆಹಾರವನ್ನು ನೀಡುತ್ತಾರೆ. ಚಳಿಗಾಲದಲ್ಲಿ ಪಕ್ಷಿಗಳ ಸಂಖ್ಯೆ 8000ಕ್ಕೆ ಏರುತ್ತದೆ ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

Leave A Reply

Your email address will not be published.