ವಿಧಾನ ಪರಿಷತ್ ಚುನಾವಣೆಯ ಒಟ್ಟು 25 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು,ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ.ಒಟ್ಟು 25 ವಿಧಾನ ಪರಿಷತ್‌ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಬಿಜೆಪಿಯು ಶುಕ್ರವಾರ ರಾತ್ರಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯುತ್ತಿದ್ದು, ರಾಜ್ಯದ ಆಡಳಿತ ಪಕ್ಷ ಬಿಜೆಪಿಗೆ ಚುನಾವಣೆ ಪ್ರತಿಷ್ಠೆಯಾಗಿದೆ.ಬೆಳಗಾವಿ 2, ಧಾರವಾಡ 2, ದಕ್ಷಿಣ ಕನ್ನಡ 2, ಮೈಸೂರು 2 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇನ್ನೂ ಅಭ್ಯರ್ಥಿಗಳು ಘೋಷಣೆಯಾಗಬೇಕಿದೆ.

ಈಗಾಗಲೇ ಚುನಾವಣೆ ಅಧಿಸೂಚನೆ ಪ್ರಕಟವಾಗಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನವೆಂಬರ್ 23 ಕೊನೆ ದಿನ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 26 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ.ಡಿ. 10ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಡಿ. 14ರಂದು ಫಲಿತಾಂಶ ಹೊರಬೀಳಿದೆ.

ಬಿಜೆಪಿ ಕ್ಷೇತ್ರದ 20 ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ:

ಕೊಡಗು – ಸುಜಾ ಕುಶಾಲಪ್ಪ
ದಕ್ಷಿಣ ಕನ್ನಡ- ಕೋಟ ಶ್ರೀನಿವಾಸ ಪೂಜಾರಿ
ಚಿಕ್ಕಮಗಳೂರು- ಎಂ.ಕೆ ಪ್ರಾಣೇಶ್‌
ಶಿವಮೊಗ್ಗ- ಡಿ.ಎಸ್‌ ಅರುಣ್‌
ಧಾರವಾಡ – ಪ್ರದೀಪ್‌ ಶೆಟ್ಟರ್‌
ಬೆಳಗಾವಿ – ಮಹಂತೇಶ ಕವಟಗಿಮಠ
ಕಲಬುರಗಿ – ಬಿ.ಜಿ ಪಾಟೀಲ್‌
ಚಿತ್ರದುರ್ಗ – ಕೆ.ಎಸ್‌ ನವೀನ್‌
ಮೈಸೂರು – ರಘು ಕೌಟಿಲ್ಯ
ಹಾಸನ – ವಿಶ್ವನಾಥ್‌
ಉತ್ತರ ಕನ್ನಡ- ಗಣಪತಿ ಉಳ್ವೇಕರ್‌
ಬೀದರ್‌- ಪ್ರಕಾಶ್‌ ಖಂಡ್ರೆ
ಬೆಂಗಳೂರು – ಗೋಪಿನಾಥ್‌ ರೆಡ್ಡಿ
ಮಂಡ್ಯ – ಮಂಜು ಕೆ.ಆರ್‌ ಪೇಟೆ
ಕೋಲಾರ – ಕೆ.ಎನ್‌ ವೇಣುಗೋಪಾಲ್‌
ರಾಯಚೂರು – ವಿಶ್ವನಾಥ್‌ ಎ ಬನಹಟ್ಟಿ
ಬೆಂಗಳೂರು ಗ್ರಾಮಾಂತರ- ಬಿ.ಎಂ ನಾರಾಯಣಸ್ವಾಮಿ
ಬಳ್ಳಾರಿ – ವೈ ಎಂ ಸತೀಶ್‌
ತುಮಕೂರು – ಎನ್‌. ಲೋಕೇಶ್‌
ವಿಜಯಪರು – ಪಿ.ಚ್‌ ಪೂಜಾರ್‌

Leave A Reply

Your email address will not be published.