ದ.ಕ.ಡಿಸಿಸಿ ಬ್ಯಾಂಕ್‌ನಿಂದ ಟ್ರಸ್ಟ್ ಗೆ ಅಕ್ರಮ ಹಣ ವರ್ಗಾವಣೆ | ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ವಿರುದ್ದ ಗುಡುಗಿದ ಸಹಕಾರ ಸಚಿವ , ಅಧ್ಯಕ್ಷರು ವಜಾ ಮಾಡಲು ಇಲಾಖೆಗೆ ಅಧಿಕಾರ ಇದೆ-ಎಸ್.ಟಿ.ಸೋಮ ಶೇಖರ್

Share the Article

ಉಡುಪಿ : ದಕ್ಷಿಣ ಕನ್ನಡ – ಉಡುಪಿ ಡಿಸಿಸಿ ಬ್ಯಾಂಕಿನಿಂದ ಪ್ರತಿವರ್ಷ ನವೋದಯ ಚಾರಿಟೇಬಲ್ ಟ್ರಸ್ಟ್ ಗೆ 19 ಲಕ್ಷ ರೂ. ಟ್ರಾನ್ಸ್ ಫರ್ ಆಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಉಡುಪಿಯ ಪುರಭವನದಲ್ಲಿ ನಡೆದ ಜನ ಸ್ವರಾಜ್’ ಸಮಾವೇಶದಲ್ಲಿ ಮಾತನಾಡಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅವರು ಈ ಗಂಭೀರ ಆರೋಪ ಮಾಡಿದ್ದಾರೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಜಾ ಮಾಡುವ ಅಧಿಕಾರ ಸಹಕಾರ ಇಲಾಖೆಗೆ ಇದೆ.ಅವರ ವಿರುದ್ದ ಈಗಾಗಲೇ ದೂರುಗಳು ಬಂದಿವೆ.ಅವು ತನಿಖಾ ಹಂತದಲ್ಲಿದೆ ಎಂದರು.

ಎಲ್ಲಾ ರೀತಿಯ ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಹಂಚಿಕೆ ಕುರಿತ ತನಿಖೆಯನ್ನು ವಿಧಾನ ಪರಿಷತ್ ಚುನಾವಣೆ ಮುಗಿದ – ಕೂಡಲೇ ಆರಂಭಿಸಲಿದ್ದೇವೆ. ಇದಕ್ಕಾಗಿ ಉಭಯ ಜಿಲ್ಲೆಗಳಿಗೂ ಪ್ರತ್ಯೇಕ ತಂಡ ರಚನೆ ಮಾಡಲಾಗುತ್ತದೆ. ಪ್ರಸ್ತುತ ಸಹಕಾರ ಸಂಘಗಳಲ್ಲಿ ಕೇಳಿದ ಎಲ್ಲರಿಗೂ ಸಾಲ ಸಿಗುತ್ತಿಲ್ಲ. ಮುಂದೆ ಅದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಸೋಮಶೇಖರ್‌ ಹೇಳಿದರು.

ಹಾಲು ಉತ್ಪಾದಕರ ಒಕ್ಕೂಟವನ್ನು ಪ್ರತ್ಯೇಕಿಸುವ ಚರ್ಚೆಯೂ ಆರಂಭ ವಾಗಿದೆ. ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ ಮೊದಲಾದೆಡೆಗಳಲ್ಲಿ – ಪ್ರತ್ಯೇಕ ಹಾಲು ಉತ್ಪಾದಕರ ಒಕ್ಕೂಟ ಮಾಡಿದ್ದೇವೆ ಎಂದು ಹೇಳಿದರು.

ವೇದಿಕೆಗೆ ಬಂದ ಮೇಲೆ ಏನಾದರೂ ಮಾತನಾಡಬೇಕಲ್ಲಾ -ಸೋಮಶೇಖರ್ ಹೇಳಿಕೆಗೆ ರಾಜೇಂದ್ರ ಕುಮಾರ್ ಪ್ರತಿಕ್ರಿಯೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,ಸಚಿವರಾದ ಸುನೀಲ್ ಕುಮಾರ್, ಎಸ್. ಅಂಗಾರ, ಬಿಜೆಪಿ , ಮಾಜಿ ಸಚಿವೆ ಡಿ‌.ವಿ.ಸದಾನಂದ ಗೌಡ,ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ, ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಲ್ಲಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕರಾದ ಸುಕುಮಾರ ಶೆಟ್ಟಿ ಉಮಾನಾಥ ಕೋಟ್ಯಾನ್, ಲಾಲಾಜಿ ಆರ್‌. ಮೆಂಡನ್, ಕೆ. ರಘುಪತಿ ಭಟ್,ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಶಂಕರಪ್ಪ,ಯಶ್ ಪಾಲ್ ಸುವರ್ಣ ಮೊದಲಾದವರಿದ್ದರು.

ವೇದಿಕೆಗೆ ಬಂದ ಮೇಲೆ ಏನಾದರೂ ಮಾತನಾಡಬೇಕಲ್ಲಾ -ಸೋಮಶೇಖರ್ ಹೇಳಿಕೆಗೆ ರಾಜೇಂದ್ರ ಕುಮಾರ್ ಪ್ರತಿಕ್ರಿಯೆ

ವೇದಿಕೆಗೆ ಬಂದ ಮೇಲೆ ಏನಾದರೂ ಮಾತನಾಡಬೇಕಲ್ಲಾ -ಸೋಮಶೇಖರ್ ಹೇಳಿಕೆಗೆ ರಾಜೇಂದ್ರ ಕುಮಾರ್ ಪ್ರತಿಕ್ರಿಯೆ

Leave A Reply

Your email address will not be published.