ಸಿದ್ದರಾಮಯ್ಯಗೆ ಮತ್ತೆ ಕಾಕಾ ಕಂಟಕ?? | ಎಲ್ಲೇ ಹೋದರೂ ಮಾಜಿ ಸಿಎಂ ನ ಬೆನ್ನು ಬಿಡುತ್ತಿಲ್ಲವಂತೆ ಕಾಗೆ !!?

ಬೆಂಗಳೂರು:ಏನು ಪವಾಡನೋ ಅಥವಾ ಕಾಗೆ ಪ್ರೀತಿನೋ? ಒಟ್ಟಾಗಿ ಈ ಕಾಗೆ ಮಾತ್ರ ಇವರ ಬೆನ್ನು ಬಿಟ್ಟಿಲ್ಲ ನೋಡಿ. ಒಂದಲ್ಲ ಒಂದು ಬಾರಿ ಇವರು ಸುದ್ದಿಯಲ್ಲೇ ಇದ್ದಾರೆ!ಇವರೇ ನಮ್ಮ ಮಾಜಿ ಮುಖ್ಯಮಂತ್ರಿ, ಇದೀಗ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ.

ಎಲ್ಲಿ ಹೋದ್ರು ಇವರೇ ಟಾರ್ಗೆಟ್ ಎಂಬಂತಿದೆ ಸಿದ್ದು ವೆಡ್ಸ್ ಕಾಗೆ ಪೈಪೋಟಿ.ಕಾರು, ಕಾಲು ಎಲ್ಲಾ ಆಯ್ತು. ಈಗ ಮತ್ತೇ ಕಚೇರಿ ಫಲಕ!!ಇದೀಗ ಸಿದ್ದರಾಮಯ್ಯಗೆ ‘ಕಾಗೆ ಕಂಟಕ’ ಎದುರಾಗಿದೆಯೇ ಎಂಬ ಚರ್ಚೆಯ ಬಿಸಿ ಮತ್ತೇ ಏರುತ್ತಿದೆ.ಇವರದ್ದು ಏನು ಗ್ರಹಚಾರನೋ ಏನು?.ಐದು ವರ್ಷಗಳ ಹಿಂದೆ ಸರ್ಕಾರದ ವತಿಯಿಂದ ತಮಗೆಂದು ನೀಡಲಾಗಿದ್ದ ಕಾರಿನ ಮೇಲೆ ಕಾಗೆ ಕುಳಿತಿತ್ತು. ಅಂದು ಅದರಿಂದ ಏನು ಕಂಟಕ ಎದುರಾಗಬಹುದು ಎಂಬ ಭಯದಲ್ಲೇ ಸಿದ್ದರಾಮಯ್ಯ ಅವರು ಆ ಕಾರನ್ನು ಬದಲಿಸಿ ಹೊಸ ಕಾರನ್ನು ಪಡೆದಿದ್ದರು.ಆದರೆ ಕಾರು ಬದಲಾವಣೆ ಕುರಿತು ಸ್ಪಷ್ಟನೆ ನೀಡಿದ್ದ ಅವರು ಆ ಕಾರು ಸರಿಯಿಲ್ಲದ್ದರಿಂದ ಹೊಸ ಕಾರು ಪಡೆಯಲಾಗಿತ್ತು ಎಂಬುದು ಅವರ ಮಾತಾಗಿತ್ತು.

ಅಂದಿಗೆ ಕೊನೆಯಾಗದೆ ನಂತರ ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮರಣಾರ್ಥವಾಗಿ ನಡೆದ ‘ಗಿಳಿವಿಂಡು’ ಎಂಬ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಪಾಲ್ಗೊಂಡಿದ್ದು, ಅಂದೂ ಕೂಡ ಕಾಗೆ ಬೆನ್ನು ಬಿಡಲಿಲ್ಲ.ಆ ದಿನ ಅಲ್ಲಿ ಅವರ ಎಡ ತೊಡೆ ಮೇಲೆ ಕಾಗೆ ಹಿಕ್ಕೆ ಹಾಕಿತ್ತು. ಅವರ ಬಲಬದಿಯಲ್ಲಿ ಅಂದು ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ, ಎಡಬದಿಯಲ್ಲಿ ಸಚಿವ ರಮಾನಾಥ ರೈ ಕೂತಿದ್ದರು.ಆದರೆ ಕಾಗೆಗೆ ಮಾತ್ರ ಸಿದ್ದರಾಮಯ್ಯನವರ ಮೇಲೆಯೇ ಪ್ರೀತಿ.ಅದು ಶನಿಕಾಟ ಎಂದು ಅಂದು ಜ್ಯೋತಿಷಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಇದೀಗ ವಿಧಾನಸಭೆಯ ವಿರೋಧಪಕ್ಷದ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರಿಗೆ ವಿಧಾನಸೌಧದಲ್ಲಿ ನೀಡಲಾಗಿರುವ ಕಚೇರಿ ಬಳಿಗೇ ಕಾಗೆಯೊಂದು ಬಂದು ಕುಳಿತಿದ್ದು ಕಂಡುಬಂದಿದೆ. ಸಿದ್ದರಾಮಯ್ಯ ಅವರಿಗೆ ಕಾಗೆ ಕಂಟಕದ ಮೂಲಕ ಮತ್ತೆ ಶನಿಕಾಟ ಆರಂಭವಾಗಿದೆಯೇ ಎಂಬ ಚರ್ಚೆ ರಾಜಕೀಯ ಆಸಕ್ತರ ವಲಯದಲ್ಲಿ ನಡೆಯುತ್ತಿದೆ.ಅವರ ಕಚೇರಿಯ ಫಲಕದ ಮೇಲೆ ಕಾಗೆ ಕಾಣಿಸಿಕೊಂಡಿರುವ ಚಿತ್ರವೊಂದು ವಾಟ್ಸ್​ಆಯಪ್​ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು,ಒಟ್ಟಾಗಿ ಸಿದ್ದು-ಕಾಗೆ ಫುಲ್ ವೈರಲ್!

Leave a Reply

error: Content is protected !!
Scroll to Top
%d bloggers like this: