ಮಂಗಳೂರು : 1.92 ಕೋಟಿ ಮೌಲ್ಯದ ಅಮಾನ್ಯಗೊಂಡ ನೋಟು ಸಹಿತ ಮೂವರ ಬಂಧನ

ಮಂಗಳೂರು: 1.92 ಕೋಟಿ ರೂಪಾಯಿ ಮೌಲ್ಯದ ಅಮಾನ್ಯಗೊಂಡ ನೋಟುಗಳ ಸಹಿತ ಮೂವರನ್ನ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.

1000 ಮುಖಬೆಲೆಯ 500 ರೂ ಮುಖಬೆಲೆಯ 1 ಕೋಟಿ 92 ಲಕ್ಷದ 50 ಸಾವಿರ ಮೌಲ್ಯದ ಅಮಾನ್ಯಗೊಂಡ ನೋಟುಗಳು ಮತ್ತು ಸಾಗಿಸುತ್ತಿದ್ದ ಇನ್ನೋವಾ ಕಾರನ್ನು ಪೊಲೀಸರು ಜಪ್ತಿ ಮಾಡಲಾಗಿದೆ.

ಬಂಧಿತ ಆರೋಪಿಗಳನ್ನು ಮಂಗಳೂರಿನ ಜುಬೈರ್ ಹಮ್ಮಬ್ಬ(52), ಪಡೀಲ್ ನ ದೀಪಕ್(32)ಮತ್ತು ಬಜ್ಪೆಯ ನಾಸಿರ್ (40)ಎಂದು ಗುರುತಿಸಲಾಗಿದೆ.

ಚಿತ್ರದುರ್ಗ, ಶಿವಮೊಗ್ಗ ಕಡೆಯಿಂದ ತಂದಿದ್ದ ನೋಟುಗಳ ಸಮೇತ ಆರೋಪಿಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಬ್ಯಾಂಕ್ ನಲ್ಲಿ ಮೌಲ್ಯದ ಶೇ.50 ರಷ್ಟು ಕೊಡುತ್ತಾರೆ ಎಂದು ವಂಚಿಸಿ ಬೇರೆಯವರಿಗೆ ನೀಡಲೆಂದು ತಂದಿದ್ದರು ಎಂದು ಮಂಗಳೂರು ಪೊಲೀಸ್ ಅಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ

Leave A Reply

Your email address will not be published.