ಬುರ್ಖಾ ದೊಳಗೆ ಹಿಂದೂ ಯುವತಿ!! ಯುವಕನ ಭೇಟಿಯಾಗಲು ಮಾಡಿದ್ದಳು ಪ್ಲಾನ್
ಅವರಿಬ್ಬರ ತಿರುಗಾಟಕ್ಕೆ ಬುರ್ಖಾ ಧರಿಸಲು, ತನ್ನ ಬುರ್ಖಾ ನೀಡಿದ ಮುಸ್ಲಿಂ ಯುವತಿ!!

ಮೈಸೂರು : ಹಿಂದೂ ಯುವತಿಯೊಬ್ಬಳು ತನ್ನ ಮುಸ್ಲಿಂ ಸ್ನೇಹಿತೆಯ ಬುರ್ಖಾ ಹಾಕಿಕೊಂಡು ತಿರುಗಾಡುತ್ತಿರುವಾಗ ಸಿಕ್ಕಿ ಬಿದ್ದ ಘಟನೆ ಕೊಡ್ಲಿಪೇಟೆಯಲ್ಲಿ ನಡೆದಿದೆ.

ಈ ವಿಚಾರದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಬೆಳವಣಿಗೆ ಕುರಿತು ಹಿಂದೂ ಸಂಘಟನೆಗಳು ಇದೊಂದು ಲವ‌ಜೆಹಾದ್,ಮತಾಂತರದ ಇನ್ನೊಂದು ಭಾಗ ಎಂದು ಆರೋಪಿಸಿದೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಲ್ಲಿ ಅತೀಹೆಚ್ಚು ಚರ್ಚೆಯಲ್ಲಿರುವ, ಹಿಂದೂ ಸಂಘಟನೆಗಳು ಹೋರಾಟಗಳನ್ನು ನಡೆಸುತ್ತಿರುವ ‘ಲವ್ ಜಿಹಾದ್’ ತಡೆ ಸದ್ಯದ ಮಟ್ಟಿಗೆ ಒಂದು ರೀತಿಯಲ್ಲಿ ಪರಿಣಾಮ ಬೀರಿದ್ದರ ನಡುವೆಯೇ ಹೊಸತೊಂದು ತಂತ್ರ ರೂಪಿತಗೊಂಡಿದೆ ಎಂದಿದ್ದಾರೆ.

ಇಲ್ಲಿವರೆಗೆ ಮುಸ್ಲಿಂ ಯುವಕರೊಂದಿಗೆ ಹಿಂದೂ ಯುವತಿಯರು ರಾಜಾರೋಷವಾಗಿ ಸುತ್ತಾಡುವುದಕ್ಕೆ,ಲವ್ ಎಂಬ ಹೆಸರಿನ ಮೋಸಕ್ಕೆ ಬಲಿಯಾವುಗುವುದಕ್ಕೆ ಕೊಂಚ ಕಡಿವಾಣ ಬಿದ್ದಿರುವುದನ್ನು ಕಂಡ ಅನ್ಯಮತೀಯರು ತಮ್ಮ ಧರ್ಮದ ಯುವತಿಯರನ್ನು ಬಳಸಿ ಹಿಂದೂ ಯುವತಿಯರನ್ನು ಬುಟ್ಟಿಗೆ ಬೀಳಿಸಿಕೊಳ್ಳಲು ಮುಂದಾದ ಘಟನೆಯೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಮುಸ್ಲಿಂ ಯುವತಿಯರು ಹಿಂದೂ ಯುವತಿಯರ ಸ್ನೇಹ ಬೆಳೆಸಿ, ತಮ್ಮೊಂದಿಗೆ ಸುತ್ತಾಟಕ್ಕೆ ಕರೆದುಕೊಂಡು ಹೋಗಿ ತಮ್ಮದೇ ಬುರ್ಖಾ ವನ್ನು ಹಿಂದೂ ಯುವತಿಯರಿಗೆ ತೊಡಿಸಿ ಮುಸ್ಲಿಂ ಯುವಕರೊಂದಿಗೆ ಕಳುಹಿಸುತ್ತಿರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಸಾರ್ವಜನಿಕರು ಮುಸ್ಲಿಂ ಯುವತಿ ಸಹಿತ ಹಿಂದೂ ಯುವತಿಗೆ ಕ್ಲಾಸ್ ತೆಗೆದುಕೊಂಡ ಘಟನೆಯು ಬೆಳಕಿಗೆ ಬಂದಿದ್ದು, ಸದ್ಯ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುವುದರೊಂದಿಗೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

Leave a Reply

error: Content is protected !!
Scroll to Top
%d bloggers like this: