ಅನಾದಿ ಕಾಲದಿಂದಲೂ ವಿಜ್ಞಾನಿಗಳ ಸಹಿತ ಕುತೂಹಲಿಗರನ್ನು ಕಾಡಿದ್ದ ಆ ಒಂದು ಪ್ರಶ್ನೆಗೆ ಕೊನೆಗೂ ಸಿಕ್ಕಿದೆ ಉತ್ತರ!!ಕೋಳಿ V/S ಮೊಟ್ಟೆಯ ಮಧ್ಯೆ ಗೆದ್ದು ಬೀಗಿದ್ಯಾರು ಗೊತ್ತೇ??

ಆ ಪ್ರಶ್ನೆಯೇ ಒಂಥರಾ ಕುತೂಹಲ!.ಶಾಲೆಯಲ್ಲಿ, ಸಿನಿಮಾಗಳಲ್ಲಿ ಆ ಪ್ರಶ್ನೆ ಕೇಳಿದರೆಂದರೆ ಅದೊಂದು ತಮಾಷೆಗೂ ಕಾರಣವಾಗುತ್ತದೆ.ಅಜ್ಜ-ಮುತ್ತಜ್ಜಂದಿರ ಕಾಲದಿಂದಲೂ ಅನೇಕ ವಿಜ್ಞಾನಿಗಳ ಸಹಿತ ಕುತೂಹಲಿಗರಲ್ಲಿ ಮೂಡಿದ್ದ ಆ ತಮಾಷೆಯ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದಂತಾಗಿದೆ.ಅಷ್ಟಕ್ಕೂ ಆ ಪ್ರಶ್ನೆ ಕೇಳಿದರೆ ನಿಮಗೂ ನಗುಬರಬಹುದು.

ಹೌದು. ಇಷ್ಟೆಲ್ಲಾ ಸುತ್ತುಹಾಕಿ ಕೇಳುತ್ತಿರುವ ಹಾಗೂ ಉತ್ತರ ಸಿಕ್ಕಿರುವ ಆ ಪ್ರಶ್ನೆಯೇ ‘ಕೋಳಿ ಮೊದಲಾ ಮೊಟ್ಟೆ ಮೊದಲಾ?’. ಕೋಳಿಯೇ ಮೊದಲು ಎಂದು ವಾದಿಸುವ ಅನೇಕ ವಿಜ್ಞಾನಿಗಳಿದ್ದರೂ ಇಲ್ಲಿ ಬಂದ ಮಾಹಿತಿಯ ಪ್ರಕಾರ ಮೊಟ್ಟೆಯೇ ಮೊದಲಾಗಿದೆ.ಇದು ಹೇಗೆ ಸಾಧ್ಯ? ಕೋಳಿ ಇಲ್ಲದೇ ಮೊಟ್ಟೆ ಎಲ್ಲಿಂದ ಬಂತು? ಮೊಟ್ಟೆ ಇಲ್ಲದೇ ಕೋಳಿ ಎಲ್ಲಿಂದ ಬಂತು?.ಎಂಥವರನ್ನೂ ಒಂದರೆಕ್ಷಣ ತಬ್ಬಿಬ್ಬಾಗಿಸುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದದರೂ ಹೇಗೆ ಎಂದು ಮುಂದಕ್ಕೆ ಹೇಳ್ತೇವೆ ನೋಡಿ.

ಮೊದಲನೆಯದಾಗಿ ಕೋಳಿಯೇ ಮೊಟ್ಟೆ ಇಡಲು ಕೋಳಿ ಉದ್ಭವ ಮೂರ್ತಿಯಲ್ಲ, ಹಾಗಾದರೆ ಮೊಟ್ಟೆ ಹೇಗೆ ಬಂತು ಎನ್ನಲು ಕುರುಹುಗಲಿಲ್ಲ. ಆದರೂ ಮೊಟ್ಟೆ ಮೊದಲು ಎಂಬ ಉತ್ತರ ಮಾತ್ರ ಸದ್ಯಕ್ಕೆ ಸಿಕ್ಕಿದೆ. ಅದು ಹೇಗೆ ಎಂದು ಇಲ್ಲಿ ಪ್ರಶ್ನಿಸುವವರಿಗೆ, ಒಂದುವೇಳೆ ಆನೆ ಇಟ್ಟ ಮೊಟ್ಟೆಯಿಂದ ಸಿಂಹ ಹುಟ್ಟಿದರೆ ಯಾರ ಮರಿ ಎನ್ನುತ್ತಾರೆ?.ಅದೇ ರೀತಿ ಇಲ್ಲೂ ನಡೆದಿರಬಹುದು ಎಂಬುವುದು ತಿಳಿದಿರುವವರ ವಾದ.ಹಲವಾರು ವರ್ಷಗಳ ಹಿಂದೆ ಕೋಳಿ ಮಾದರಿಯ ಪ್ರಾಣಿಗಳು ಮತ್ತೊಂದು ಮಾದರಿಯೊಂದಿಗೆ ಸಂಪರ್ಕ ಹೊಂದಿ ಮೊಟ್ಟೆ ಅಥವಾ ಕೋಳಿ ಉತ್ಪತ್ತಿಯಾಗಿರಲೂ ಸಾಕು ಎನ್ನುವುದು ವಾದ.

ಹೀಗೆ ವಿಭಿನ್ನ ಡಿಎನ್ಎ ಗಳ ಸಮ್ಮಿಶ್ರಣದ ಬಳಿಕ ರೂಪಾಂತರಗೊಂಡು ಪರಿವರ್ತನೆಯಗಿರಲೂ ಸಾಕು. ತದನಂತರ ಅಂದಿನ ಕಾಲದ ಪ್ರೊಟೋ ಕೋಳಿ ಮೊಟ್ಟೆಯು ಇಂದಿನ ಕೋಳಿಗೆ ಜನ್ಮ ನೀಡಿರಬಹುದು ಎಂಬುವುದು ವಾದ. ಅದೇನೇ ಇರಲಿ, ಕೋಳಿ ಮತ್ತು ಮೊಟ್ಟೆ ಪ್ರಿಯರ ಪ್ರಕಾರ ಹೋಟೆಲ್ ನಲ್ಲಿ ಕೂತು ಆರ್ಡರ್ ಮಾಡುವಾಗ ಯಾವ ಐಟಂ ಮೊದಲು ಟೇಬಲ್ ಗೆ ಬರುತ್ತದೆ ಅದೇ ಮೊದಲು ಎಂಬಂತಾಗಿದೆ.

Leave A Reply

Your email address will not be published.