ಮೂಡುಬಿದಿರೆ : ಕರ್ನಾಟಕ ರಾಜ್ಯ ಮುಕ್ತ ವಿ. ವಿ.ಯ ಆಳ್ವಾಸ್ ದೂರಶಿಕ್ಷಣ ಕೇಂದ್ರದಿಂದ ವಿವಿಧ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

ಮೂಡುಬಿದಿರೆ: ಕರ್ನಾಟಕದಲ್ಲಿ ದೂರಶಿಕ್ಷಣಕ್ಕೆ ಯುಜಿಸಿಯಿಂದ ಮಾನ್ಯತೆ ಪಡೆದ ಏಕೈಕ ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆಳ್ವಾಸ್ ದೂರಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರದಿಂದ ದೂರ ಶಿಕ್ಷಣದ ವಿವಿಧ ಕೋರ್ಸ್‌ಗಳ ದಾಖಲಾತಿಗೆ ಅರ್ಜಿ ಆಹ್ವಾನಿಸಿದೆ.
ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿಗಳಿಗೆ ಅರ್ಹ ಅಭ್ಯರ್ಥಿಗಳು ಆಳ್ವಾಸ್ ಪದವಿ ಕಾಲೇಜಿನಲ್ಲಿರುವ ದೂರ ಶಿಕ್ಷಣ ಕೇಂದ್ರದ ಮೂಲಕ ನೋಂದಾವಣಿ ಮಾಡಬಹುದಾಗಿದೆ.

ಪದವಿಯಲ್ಲಿ ಬಿ.ಎ., ಬಿ.ಕಾಂ, ಬಿ.ಎಸ್ಸಿ, ಬಿ.ಸಿ.ಎ, ಬಿ.ಬಿ.ಎ, ಬಿ.ಲಿಟ್. ಸ್ನಾತಕೋತ್ತರ ಪದವಿಯಲ್ಲಿ ಎಂ.ಎ, ಎಂ.ಕಾಂ, ಎಂ.ಎಸ್ಸಿ, ಎಂ.ಬಿ.ಎ, ಎಂ.ಲಿಟ್, ಒಂದು ವರ್ಷ ಡಿಪ್ಲೊಮಾ ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್ ಅಂಡ್ ಹೆಲ್ತ್ ಎಜುಕೇಶನ್, ಇನ್ಫೋ ಟೆಕ್ನಾಲಜಿ ಕಂಪ್ಯೂಟರ್ ಅಪ್ಲಿಕೇಶನ್, 6 ತಿಂಗಳ ಸರ್ಟಿಫಿಕೇಟ್ ಕೋರ್ಸ್ ಸಿ.ಪಿ.ಆರ್. (ಪಂಚಾಯತ್ ರಾಜ್), ಫುಡ್ ಅಂಡ್ ನ್ಯೂಟ್ರಿಷನ್, ಕಮ್ಯುನಿಕೇಶನ್ ಟೆಕ್ನಾಲಜಿ, 6 ತಿಂಗಳ ಪಿ.ಜಿ. ಸರ್ಟಿಫಿಕೇಟ್ ಕೋರ್ಸ್ (ಪಿ.ಜಿ.ಸಿ.) ಪಿಜಿಸಿ ಇಂಗ್ಲಿಷ್, ಕಮ್ಯೂನಿಕೇಟಿವ್ ಇಂಗ್ಲಿಷ್, ಮಾರ್ಕೇಟಿಂಗ್ ಮೆನೆಜ್‌ಮೆಂಟ್, ಎಚ್. ಆರ್. ಮ್ಯಾನೇಜೆಂಟ್, ಬಿಸಿನೆಸ್ ಅಡ್ಮಿನಿಸ್ಟೇಷನ್, ಫೈನಾನ್ಸ್ ಮೆನೆಜ್‌ಮೆಂಟ್, ನ್ಯೂಟ್ರಿಷನ್ ಆ್ಯಂಡ್ ಡಯೆಟಿಸ್, ಜರ್ನಲಿಸಂ ಆ್ಯಂಡ್ ಮಾಸ್ ಕಮ್ಯುನಿಕೇಷನ್, ಕುವೆಂಪು ಸಾಹಿತ್ಯ ಬಿಸಿನೆಸ್ ಲಾ, ಕಂಪ್ಯೂಟರ್ ಅಪ್ಲಿಕೇಶನ್ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಯಾವುದೇ ದಂಡಶುಲ್ಕವಿಲ್ಲದೇ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 18, 200 ರೂ. ದಂಡಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30 ಹಾಗೂ 400 ರೂ. ದಂಡಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 15,

ಬಿಪಿಎಲ್ ಕಾರ್ಡ್ ಇರುವ ಮಹಿಳಾ ಕಲಿಕಾರ್ಥಿಗಳಿಗೆ 15% ರಿಯಾಯಿತಿಯೊಂದಿಗೆ ಪ್ರವೇಶ ಪಡೆಯ ಬಹುದಾಗಿದೆ. ಆಸಕ್ತರು 7090715010, 8197617333, 8971393222 ದೂರವಾಣಿ ಸಂಖ್ಯೆ ಮೂಲಕ ಆಳ್ವಾಸ್‌ ಕಲಿಕಾರ್ಥಿ ಸಹಾಯ ಕೇಂದ್ರವನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ Email: administration@alvas.org ಸಂಪರ್ಕಿಸಬಹುದು.

Leave A Reply

Your email address will not be published.