ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಈ ತಪ್ಪುಗಳನ್ನು ನೀವು ಎಂದಿಗೂ ಮಾಡಲೇ ಹೋಗಬೇಡಿ !! | ಅಡುಗೆ ಕೋಣೆಯಲ್ಲಿ ಚಪ್ಪಲಿ ಧರಿಸುವುದರಿಂದ, ತೆರೆದ ಪಾತ್ರೆಯಲ್ಲಿ ಹಾಲು ಇಡುವುದರಿಂದ ಏನೇನು ತೊಂದರೆಯಾಗುವುದು ಎಂಬುದನ್ನು ತಿಳಿದುಕೊಳ್ಳಿ

ವಾಸ್ತುಶಾಸ್ತ್ರದಲ್ಲಿ ಅಡುಗೆಮನೆ ಮತ್ತು ದೇವರ ಕೋಣೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಅಡುಗೆಮನೆ ಮನೆಯ ಒಂದು ಹೃದಯ ಭಾಗವಿದ್ದಂತೆ. ಮನೆಯ ಸದಸ್ಯರ ಆರೋಗ್ಯ ಹಾಗೂ ಮನೆಯ ಸಮೃದ್ಧಿಯಲ್ಲಿ ಅಡುಗೆ ಮನೆಯ ಪಾತ್ರ ಮಹತ್ವದ್ದು. ವಾಸ್ತುವಿನ ದೃಷ್ಟಿಯಿಂದ ಅಡುಗೆ ಮನೆಯಲ್ಲಿ ಗಮನಿಸಬೇಕಾದ ಅಂಶಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ವಾಸ್ತು ಶಾಸ್ತ್ರದ ಜೊತೆಗೆ ಜ್ಯೋತಿಷ್ಯಶಾಸ್ತ್ರದಲ್ಲೂ ಅಡುಗೆ ಮನೆಗೆ ಬಹಳ ಪ್ರಾಶಸ್ತ್ಯವನ್ನು ನೀಡಲಾಗಿದೆ. ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಎಲ್ಲಾ ವಿಷಯಗಳ ಕಡೆಗೂ ಗಮನ ಹರಿಸುವುದು ಮುಖ್ಯ. ಇಲ್ಲವಾದರೆ ಮನೆಯಲ್ಲಿ ವಾಸ್ತು ದೋಷಗಳು ಹೆಚ್ಚಾಗುತ್ತದೆ. ಇದರೊಂದಿಗೆ ಎಲ್ಲಾ ಸಮಸ್ಯೆಗಳೂ ಒಮ್ಮೆಲೆ ಬಂದೆರಗುತ್ತವೆ. ಆದ್ದರಿಂದ ವಾಸ್ತುವಿನ ದೃಷ್ಟಿಯಿಂದ ಅಡುಗೆ ಮನೆಯಲ್ಲಿ ಗಮನಿಸಬೇಕಾದ ಅಂಶಗಳು ಯಾವುವು ಎನ್ನುವುದನ್ನು ತಿಳಿದುಕೊಳ್ಳಬೇಕು.

ಮೊದಲನೆಯದಾಗಿ ವಾಸ್ತುಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಎಂದಿಗೂ ಚಪ್ಪಲಿಗಳನ್ನು ಧರಿಸಬಾರದು. ಇದರಿಂದ ವ್ಯಕ್ತಿಯು ಆರ್ಥಿಕ ನಷ್ಟವನ್ನು ಎದುರಿಸಬಹುದು. ಇದಲ್ಲದೇ ಎಂದಿಗೂ ಚಾಕು, ಕತ್ತರಿ ಅಥವಾ ಯಾವುದೇ ಹರಿತವಾದ, ಚೂಪಾದ ವಸ್ತುಗಳನ್ನು ಅಡುಗೆ ಮನೆಯ ಗೋಡೆಯ ಮೇಲೆ ತೂಗು ಹಾಕಬಾರದು. ಇದು ಅನೇಕ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುತ್ತದೆ.

ವಾಸ್ತುಶಾಸ್ತ್ರದ ಪ್ರಕಾರ ಪ್ರತಿಬಾರಿ ಆಹಾರ ತಯಾರಿಸಿದಾಗಲೆಲ್ಲಾ ಆ ಆಹಾರವನ್ನು ಪ್ರತ್ಯೇಕವಾಗಿ ಶುದ್ಧ ಪಾತ್ರೆಗಳಲ್ಲಿ ಇರಿಸಿ. ಒಂದು ಶುದ್ಧವಾದ ತಟ್ಟೆಯಲ್ಲಿ ನೀವು ತಯಾರಿಸಿದ ಆಹಾರವನ್ನು ಬಡಿಸಿ, ಅದನ್ನು ಹಸುವಿಗೆ ನೀಡಿ, ನಂತರ ಮನೆಯ ಸದಸ್ಯರು ಆಹಾರವನ್ನು ಸೇವಿಸಿ. ಇದು ಸಾಧ್ಯವಾಗದಿದ್ದಲ್ಲಿ ನೀವು ಆಹಾರ ಸೇವಿಸುವ ಮುನ್ನ ಒಂದು ತಟ್ಟೆಯಲ್ಲಿ ಸ್ವಲ್ಪ ಆಹಾರ ಪದಾರ್ಥವನ್ನು ಹಾಕಿ ಪಕ್ಕದಲ್ಲಿಡಿ. ಇದನ್ನು ಮಾಡುವುದರಿಂದ ಜೀವನದಲ್ಲಿ ಹಣಕ್ಕೆ ಸಂಬಂಧಿಸಿದ ಯಾವ ಸಮಸ್ಯೆಯೂ ಇರುವುದಿಲ್ಲವೆಂದು ಹೇಳಲಾಗುತ್ತದೆ. ಅಲ್ಲದೇ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ.

ಹಾಗೆಯೇ ಹಾಲನ್ನು ಅಡುಗೆ ಮನೆಯಲ್ಲಿಡುವಾಗ ವಿಶೇಷ ಜಾಗರೂಕತೆ ವಹಿಸಬೇಕು. ಹಾಲನ್ನು ಎಂದಿಗೂ ತೆರೆದಿಡಬಾರದು. ಅದನ್ನು ಬೇರೊಂದು ತಟ್ಟೆಯಿಂದ ಮುಚ್ಚಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇಲ್ಲವಾದರೆ ತೆರೆದಿಟ್ಟ ಪಾತ್ರೆಯಲ್ಲಿರುವ ಹಾಲು ಮನೆಯಲ್ಲಿ ಅನೇಕ ಸಮಸ್ಯೆಗಳನ್ನುಂಟು ಮಾಡಬಹುದು. ಅದು ಯಾವುದೇ ರೀತಿಯ ಆರ್ಥಿಕ, ದೈಹಿಕ ಮತ್ತು ಮಾನಸಿಕ ತೊಂದರೆಗಳು ಆಗಿರಬಹುದು.

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಆಹಾರ ಸೇವನೆ ಮಾಡುವುದು, ಅನೇಕ ರೀತಿಯ ಗ್ರಹದೋಷಗಳಿಂದ ಮುಕ್ತಿಯನ್ನು ನೀಡುತ್ತದೆ. ಅದಲ್ಲದೆ ಅಡುಗೆ ಮನೆಯ ಮಧ್ಯದಲ್ಲಿ ಎಂದಿಗೂ ಕುಳಿತು ಊಟ ಮಾಡಬಾರದು. ತಿನ್ನುವಾಗ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನತ್ತ ಮುಖ ಮಾಡಬೇಡಿ. ಇದು ಶುಭಕರವಾದುದಲ್ಲ.

ಅಡುಗೆ ಮನೆಯಲ್ಲಿನ ಗ್ಯಾಸ್‌ ಸ್ಟವ್‌ ಹೊರಗಿನಿಂದ ಯಾರಿಗೂ ಗೋಚರಿಸದಂತಿರಬೇಕು. ಇದು ಹಲವು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಹಾಗಾಗಿ ಈ ರೀತಿಯ ತಪ್ಪುಗಳನ್ನು ನೀವು ಎಂದಿಗೂ ಮಾಡಲೇಬೇಡಿ.

Leave A Reply

Your email address will not be published.