ಆಧಾರ್ ಕಾರ್ಡ್ ಬಳಸುವಾಗ ತಪ್ಪಿಯೂ ಈ ಕೆಲಸ ಮಾಡಬೇಡಿ | ಒಂದು ವೇಳೆ ಈ ತಪ್ಪು ನಡೆದು ಹೋದರೆ ನೀವು ತೆರಬೇಕಾದೀತು ಭಾರಿ ದಂಡ!!

ಭಾರತದಲ್ಲಿ ಆಧಾರ್ ಕಾರ್ಡ್ ಒಂದು ಮುಖ್ಯ ದಾಖಲೆಯ ಲಾಗ್ ಇಲ್ಲದೆ ಕಡ್ಡಾಯ ದಾಖಲೆಯೂ ಆಗಿದೆ. ಇದು ಇಲ್ಲದೇ ನೀವು ಯಾವುದೇ ಸರ್ಕಾರಿ ಅಥವಾ ಸರ್ಕಾರೇತರ ಕೆಲಸವನ್ನು ಮಾಡಲು ಸಾಧ್ಯವಿಲ್ಲ.

ಆಧಾರ್ ಕಾರ್ಡ್‌ ನಿಯಮಗಳಲ್ಲಿ ಇದೀಗ ಪ್ರಮುಖವಾದ ಅಪ್‌ಡೇಟ್‌ ಆಗಿದೆ. ಒಂದು ವೇಳೆ ನೀವೇನಾದರೂ ತಪ್ಪಾದ 12-ಅಂಕಿಯ ಬಯೋಮೆಟ್ರಿಕ್ ಐಡಿ ಸಂಖ್ಯೆಯನ್ನು ಒದಗಿಸಿದರೆ ರೂ. 10,000 ದಂಡ ವಿಧಿಸಬಹುದು.

ಹೌದು, ಇನ್ನು ಮುಂದೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಉಲ್ಲೇಖಿಸುವಾಗ ಜಾಗರೂಕರಾಗಿ ಇರಬೇಕು. ಆದಾಯ ತೆರಿಗೆ ಕಾಯ್ದೆ 1961ರ ಇತ್ತೀಚಿನ ತಿದ್ದುಪಡಿಗಳಲ್ಲಿ ಆದಾಯ ತೆರಿಗೆ ಇಲಾಖೆಯು ಈಗ ಆಧಾರ್ ಕಾರ್ಡ್ ಹೊಂದಿರುವವರಿಗೆ ಪರ್ಮನೆಂಟ್​ ಅಕೌಂಟ್​ ನಂಬರ್ (PAN) ಬದಲಿಗೆ 12-ಅಂಕಿಯ ಬಯೋಮೆಟ್ರಿಕ್ ಐಡಿ ಸಂಖ್ಯೆಯನ್ನು ಬಳಸಲು ಅನುಮತಿ ನೀಡಿದೆ.

ಹಣಕಾಸು ಮಸೂದೆ 2019ರಲ್ಲಿ ತಿಳಿಸಿದಂತೆ, ಪಾನ್ ಕಾರ್ಡ್ ಬದಲಿಗೆ ಆಧಾರ್ ಅನ್ನು ಬಳಸಲು ಅವಕಾಶ ನೀಡಲಾಗಿದೆ. ಇದು ತಪ್ಪು ಆಧಾರ್ ಸಂಖ್ಯೆಯನ್ನು ನೀಡಿದಲ್ಲಿ ದಂಡವನ್ನು ಸಹ ಪರಿಚಯಿಸಿದೆ. ಹೊಸ ದಂಡದಲ್ಲಿ ಒಬ್ಬರು ಪಾನ್ ಬದಲಿಗೆ ಆಧಾರ್ ಅನ್ನು ಬಳಸಿದರೆ ಮತ್ತು ತಪ್ಪು ಸಂಖ್ಯೆಯನ್ನು ಒದಗಿಸಿದರೆ ಮಾತ್ರ ನಿಯಮಗಳು ಅನ್ವಯಿಸುತ್ತವೆ. ಆದಾಯ ತೆರಿಗೆ ರಿಟರ್ನ್ಸ್ (ITR), ಬ್ಯಾಂಕ್ ಖಾತೆ ತೆರೆಯುವುದು ಇಂತಹ ಆದಾಯ ತೆರಿಗೆ ಇಲಾಖೆ ನಿಯಮಗಳ ಪ್ರಕಾರ ಪಾನ್ ಅನ್ನು ಉಲ್ಲೇಖಿಸುವುದು ಕಡ್ಡಾಯವಾಗಿರುವ ಕಡೆಗಳಲ್ಲಿ ಆಧಾರ್ ಸಂಖ್ಯೆಯನ್ನು ಬಳಸಬಹುದು.

ಹೊಸ ಆಧಾರ್ ನಿಯಮ:

ಆಧಾರ್ ಅನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ನೀಡಲಾಗುತ್ತದೆ. ಆದರೆ ಆದಾಯ ತೆರಿಗೆ ಇಲಾಖೆಯು UIDAIನಿಂದ ದಂಡವನ್ನು ವಿಧಿಸುವುದಿಲ್ಲ. ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 272B ಅಡಿಯಲ್ಲಿ ಆದಾಯ ತೆರಿಗೆ ಇಲಾಖೆಯು ಪಾನ್ ಗೆ ಸಂಬಂಧಿಸಿದ ನಿಬಂಧನೆಗಳನ್ನು ಅನುಸರಿಸುವಲ್ಲಿ ವಿಫಲರಾದ ಸಂದರ್ಭದಲ್ಲಿ ವ್ಯಕ್ತಿಗಳಿಗೆ ದಂಡ ವಿಧಿಸಬಹುದು. ಅಂದರೆ, ಪಾನ್ ಪಡೆಯಲು, ಉಲ್ಲೇಖಿಸಲು ಅಥವಾ ದೃಢೀಕರಿಸಲು ವಿಫಲವಾದರೆ ದಂಡ ಹಾಕಬಹುದು. ಪ್ರತಿ ಬಾರಿ ವಿಫಲವಾದಾಗಲೂ ದಂಡದ ಮೊತ್ತ 10,000 ರೂಪಾಯಿ ಆಗಿರುತ್ತದೆ. ಗಮನಿಸಬೇಕಾದ ಸಂಗತಿ ಏನೆಂದರೆ, ಈ ಮೊದಲು ದಂಡವು ಪಾನ್‌ಗೆ ಸೀಮಿತವಾಗಿತ್ತು. ಆದರೆ ಕಳೆದ ಸೆಪ್ಟೆಂಬರ್‌ನಿಂದ ಪಾನ್-ಆಧಾರ್ ವಿನಿಮಯ ಸಾಧ್ಯತೆ ಜಾರಿಗೆ ಬಂದಾಗಿನಿಂದ ದಂಡವನ್ನು ಆಧಾರ್‌ಗೂ ವಿಸ್ತರಿಸಲಾಗಿದೆ.

ನೀವು ಹೀಗೆ ಮಾಡಿದಲ್ಲಿ ದಂಡ ವಿಧಿಸಬಹುದು:

  • ನೀವು ಪಾನ್ ಕಾರ್ಡ್ ಗೆ ಬದಲಾಗಿ ಸುಳ್ಳು ಆಧಾರ್ ಸಂಖ್ಯೆಯನ್ನು ಒದಗಿಸಿದಲ್ಲಿ
  • ನಿರ್ದಿಷ್ಟ ವಹಿವಾಟುಗಳಲ್ಲಿ ನಿಮ್ಮ ಪಾನ್ ಅಥವಾ ಆಧಾರ್ ಅನ್ನು ಒದಗಿಸಲು ವಿಫಲರಾದಲ್ಲಿ
  • ಆಧಾರ್ ಸಂಖ್ಯೆಯನ್ನು ಮಾತ್ರ ನೀಡಿದ್ದು, ಬಯೋಮೆಟ್ರಿಕ್ ಗುರುತನ್ನು ದೃಢೀಕರಿಸಲು ವಿಫಲವಾದಲ್ಲಿ ಭಾರೀ ದಂಡ ಬೀಳುತ್ತದೆ

ಇಂತಹ ಪ್ರತಿಯೊಂದು ಪ್ರಕರಣಕ್ಕೆ ರೂ 10,000 ದಂಡವನ್ನು ವಿಧಿಸಲಾಗುತ್ತದೆ ಅಂದರೆ ಒಬ್ಬರು 2 ನಮೂನೆಗಳಲ್ಲಿ ತಪ್ಪಾದ ಆಧಾರ್ ಸಂಖ್ಯೆಯನ್ನು ನೀಡಿದರೆ ನಿಮಗೆ ₹ 20,000 ದಂಡ ವಿಧಿಸಬಹುದು. ಹಾಗಾಗಿ ಇನ್ನು ಮುಂದೆ ತುಂಬಾ ಜಾಗರೂಕರಾಗಿ ಆಧಾರ್ ನಂಬರ್ ಅನ್ನು ನಮೂದಿಸುವುದು ಒಳ್ಳೆಯದು.

ಇನ್ನು ಗಮನಿಸಬೇಕಾದ ವಿಷಯವೆಂದರೆ, ಹೊಸ ನಿಯಮಗಳ ಅಡಿಯಲ್ಲಿ ಪಾನ್ ಅಥವಾ ಆಧಾರ್ ಅನ್ನು ಸರಿಯಾಗಿ ಉಲ್ಲೇಖಿಸಲಾಗಿದೆ ಮತ್ತು ದೃಢೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ವಿಫಲವಾದಲ್ಲಿ ವ್ಯಕ್ತಿಗಳು ಮಾತ್ರವಲ್ಲದೆ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಇತ್ಯಾದಿಗಳಿಗೂ ದಂಡ ವಿಧಿಸಬಹುದು.

Leave A Reply

Your email address will not be published.