ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ ನಿಂದ ಹಿಂದೂಯಿಸಂ ಮತ್ತು ಹಿಂದುತ್ವದ ಬಗ್ಗೆ ಪಾಠ | ಗರಂ ಆದ ಜನರಿಂದ ರಮ್ಯಾಗೆ ಮೇಲಿಂದ ಮೇಲೆ ಕಾಮೆಂಟ್ ಗಳ ಚಾಟಿ ಏಟು !

ಸ್ಯಾಂಡಲ್ ವುಡ್ ಕ್ವೀನ್ ನಟಿ, ಮಾಜಿ ಸಂಸದೆ ರಮ್ಯಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಹಿಂದುತ್ವ ಮತ್ತು ಹಿಂದೂಯಿಸಂ ಬಗ್ಗೆ ಅವರು ನೀಡಿರುವ ವ್ಯಾಖ್ಯೆ ಇದೀಗ ಸಾಮಾಜಿಕ ತಾಣದಲ್ಲಿ ಪರ, ವಿರೋಧದ ಚರ್ಚೆಗೆ ಕಾರಣವಾಗಿದೆ. ಹಿಂದುತ್ವ ಮತ್ತು ಹಿಂದೂಯಿಸಂ ಎರಡೂ ಒಂದೇ ಅಲ್ಲ ಎಂದು ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ.

ಹಿಂದುತ್ವ ಮತ್ತು ಹಿಂದೂಯಿಸಂ ಎರಡೂ ಒಂದೇ ಅಲ್ಲ. ಹಿಂದೂಯಿಸಂ ಎಂಬುದು ರಾಜಕೀಯವಲ್ಲ. ಆದರೆ ಹಿಂದುತ್ವ ಎಂಬುದು ರಾಜಕೀಯವಾಗಿದೆ. ಹಿಂದೂಯಿಸಂ ಎಂದರೆ ಎಲ್ಲರನ್ನೂ ಒಳಗೊಳ್ಳುವಂತದ್ದು ಮತ್ತು ಎಲ್ಲರಿಗೂ ಪ್ರೀತಿ ಹಂಚುವಂತದ್ದು. ಅದಕ್ಕೆ ವಿರುದ್ಧವಾದ್ದದ್ದೇ ಹಿಂದುತ್ವ. ನಿಜವಾದ ಹಿಂದುಗಳಿಗೆ ವ್ಯತ್ಯಾಸ ತಿಳಿಯುತ್ತದೆ ಎಂದು ರಮ್ಯಾ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ರಮ್ಯಾ ಅವರ ಈ ಪೋಸ್ಟ್ ಗೆ ಕೆಲವು ಮಂದಿ ಬೆಂಬಲ ವ್ಯಕ್ತಪಡಿಸಿದ್ದು, ಹಲವರು ವಿರೋಧಿಸಿದ್ದಾರೆ.

ನಮ್ಮ ಪುರಾತನ ಹಿಂದೂ ಧರ್ಮವು ರಾಜಕಾರಣಿಗಳಿಂದ ಒಂದು ರಾಜಕೀಯ ಸಾಧನವಾಗಿ ಬಳಕೆ ಆಗುತ್ತಿರುವುದನ್ನು ನೋಡಲು ನೋವಾಗುತ್ತದೆ. ನಾನು ಹಿಂದೂ ಅಷ್ಟೇ. ಯಾವ ಪಕ್ಷ ಕೂಡ ನನ್ನ ಹಿಂದೂಯಿಸಂ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ರಮ್ಯಾ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ರಮ್ಯಾ ಈ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡುತ್ತಾ ತಮ್ಮ ಅಭಿಪ್ರಾಯವನ್ನು ಸೂಚಿಸುತ್ತಿದ್ದಾರೆ. ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ನಿಮ್ಮಿಂದ ನಾವು ಹಿಂದೂ ಧರ್ಮದ ಬಗ್ಗೆ ಪಾಠ ಕಲಿಯಬೇಕಾಗಿಲ್ಲ ಎಂದು ಕುಟುಕಿದ್ದಾರೆ.

2 ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾಂಗ್ರೆಸ್ ಪಕ್ಷದ ಡಿಜಿಟಲ್ ಅಭಿಯಾನವಾದ ಜನ್ ಜಾಗರಣ ಅಭಿಯಾನದ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಹಿಂದೂ ಧರ್ಮ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವೇನು? ಅವು ಒಂದೇ ಆಗಿರಬಹುದೇ? ಒಂದೇ ಆಗಿದ್ದರೆ, ಏಕೆ ಒಂದೇ ಹೆಸರಿಲ್ಲ? ವಿಭಿನ್ನ ವಿಷಯಗಳಾಗಿವೆ ಎಂದು ಹೇಳಿದ್ದರು. ಇದೇ ವಿಚಾರವಾಗಿ ಇದೀಗ ರಮ್ಯಾ ಕೂಡಾ ಮಾತನಾಡಿದ್ದಾರೆ.

ನಾನು ಮಾನವನಾಗಿ ಹುಟ್ಟಿದೆ, ಮಾನವನಾಗಿರುವೆ, ಧರ್ಮದ ಹೊರತಾಗಿ ಎಲ್ಲರೂ ಮಾನವರು ಇಂದು ನೆಟ್ಟಿಗರು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ವಸುದೈವ ಕುಟುಂಬಕಂ,
ಪ್ರತಿಯೊಬ್ಬರು ಇದರ ಅರ್ಥ ತಿಳಿದುಕೊಳ್ಳಬೇಕು,
ಸತ್ಯದ ಮಾತು. ಒಪ್ಪುವಂತಹ ಮಾತು, ನಾವೆಲ್ಲ ಒಂದು ಎಂದು ಬರೀ ಬಾಯಿ ಮಾತಾಗಿದೆ, ಮನದ ಮಾತು ಯಾರಿಗೂ ಕೇಳಿಸಲ್ಲ ಅನ್ನೋದು ಕೆಲವರ ಭಾವನೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ನನ್ನ ಹಿಂದುಯಿಸಂ ಮೇಲೆ ಯಾರೂ ಪ್ರಭಾವ ಬೀರಲಾಗದು, ಎಲ್ಲ ಹಿಂದುಗಳು ಹುಟ್ಟಿನಿಂದಲೇ ಹಿಂದುಗಳು, ನಮ್ಮ ಭಾವನೆಗಳಿಗೆ ಧಕ್ಕೆ ಮಾಡೋದನ್ನು ಮೊದಲು ನಿಲ್ಲಿಸಿ, ನಮಗೆ ನಿಮ್ಮಂತಹ ವ್ಯಕ್ತಿಗಳಿಂದ ಯಾವುದೇ ಸೆರ್ಟಿಫಿಕೇಟ್ ಬೇಕಿಲ್ಲ ಎಂದೊಬ್ಬರು ಹೇಳಿದ್ದಾರೆ. ಹಿಂದುಯಿಸಂ ಧರ್ಮ ಆಗಿದ್ದರೆ ದಯವಿಟ್ಟು ಅರ್ಥ ತಿಳಿದುಕೊಂಡು ಮಾತನಾಡಿ. ಹಿಂದುತ್ವಂ ಅಂದರೆ ಹಿಂದುಗಳ ಇರುವಿಕೆ, ಹಿಂದು ಸಂಪ್ರದಾಯ ಇರುವಿಕೆ ಅಥವಾ ಹಿಂದುಯಿಸಂ ಅನುಸರಿಸುವವರು ಎಂದು ಕೂಡ ಅರ್ಥೈಸಲಾಗುತ್ತದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಹಿಂದುತ್ವಂ, ಹಿಂದುಯಿಸಂ ಬೇರೆ ಬೇರೆ ಆದರೆ ಇಸ್ಲಾಂ & ಇಸ್ಲಾಮಿಕ್ ಏನು? ಕ್ರಿಶ್ಚಿಯಾನಿಟಿ, ಕ್ರಿಶ್ಚಿಯನ್ ಏನು?
ಹಿಂದುಯಿಸಂನ ಬುಲೆಟ್ ಪ್ರೂಫ್ ಜಾಕೆಟ್‌ ಹಿಂದುತ್ವ
ಯಾಕೆ? ಏನಾಯ್ತು? ಈಗ ಯಾಕೆ ಹಿಂದುತ್ವ, ಹಿಂದುಯಿಸಂ ಬಗ್ಗೆ ಮಾತನಾಡುತ್ತಿದ್ದೀರಿ?
ನಿಮ್ಮನ್ನು ನಟಿಯಾಗಿ ಇಷ್ಟಪಡ್ತೀವಿ, ದಯವಿಟ್ಟು ನಿಮ್ಮ ಹೊಲಸು ರಾಜಕೀಯ ತೋರಿಸಬೇಡಿ ಎಂದೊಬ್ಬರು ಚಾಟಿ ಬೀಸಿದ್ದಾರೆ.

Leave A Reply

Your email address will not be published.