ಪೆರಿಯಾಶಾಂತಿ:ರಸ್ತೆಯಲ್ಲಿ ಹರಿದ ನೀರಿನೊಂದಿಗೆ ಸ್ಕೂಟಿ ಸಹಿತ ಕೊಚ್ಚಿ ಹೋದ ಚಾಲಕ!!ವಿಪತ್ತು ನಿರ್ವಹಣಾ ತಂಡದ ಸದಸ್ಯರ ಸಮಯ ಪ್ರಜ್ಞೆಯಿಂದ ತಪ್ಪಿತು ಅನಾಹುತ

ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರಿಯಾಶಾಂತಿ ಎಂಬಲ್ಲಿ ರಸ್ತೆಯಲ್ಲೇ ನೀರಿನ ಹರಿವು ಹೆಚ್ಚಾಗಿ ಸ್ಕೂಟಿ ಸಮೇತ ವ್ಯಕ್ತಿಯೊಬ್ಬರು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದು, ಅದೃಷ್ಟವಷಾತ್ ಬೆಳ್ತಂಗಡಿ ಬೆಳಾಲು ವಿಪತ್ತು ನಿರ್ವಹಣಾ ತಂಡದ ಸದಸ್ಯರ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದ್ದು, ಸ್ಕೂಟಿ ಚಾಲಕ ಹಾಗೂ ಆತನ ಸ್ಕೂಟಿ ಸೇಫ್ ಆಗಿದೆ.

https://youtube.com/shorts/9kZkvksOxzE?feature=share

ಘಟನೆ ವಿವರ: ಸಂಜೆ ವೇಳೆಗೆ ಬಂದ ಮಳೆಯಿಂದಾಗಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರಿಯಾಶಾಂತಿ ಎಂಬಲ್ಲಿ ರಸ್ತೆಯಲ್ಲೇ ನೀರಿನ ಹರಿವು ಹೆಚ್ಚಾಗಿದ್ದು ವಾಹನಗಳೆಲ್ಲವೂ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದವು. ಇದೇ ವೇಳೆಗೆ ಶೀರಾಡಿ ಎಂಬಲ್ಲಿ ಇತ್ತೀಚೆಗೆ ನಾಪತ್ತೆಯಾದ ವ್ಯಕ್ತಿಯೊಬ್ಬರ ಶವ ಪತ್ತೆಗಾಗಿ ಹೋಗಿ ಮರಳುತ್ತಿದ್ದ ಬೆಳ್ತಂಗಡಿ ತಾಲೂಕು ಬೆಳಾಲಿನ ವಿಪತ್ತು ನಿರ್ವಹಣಾ ತಂಡ ರಸ್ತೆಯಲ್ಲಿ ಸಂಚಾರ ಸುವ್ಯವಸ್ಥೆಗೆ ಸಹಕರಿಸಿದರು ಎನ್ನಲಾಗಿದೆ. ಈ ಸಂದರ್ಭ ಸ್ಕೂಟಿ ಯಲ್ಲಿ ಬಂದ ವ್ಯಕ್ತಿಯೊರ್ವರು ಹರಿಯುತ್ತಿದ್ದ ನೀರಿನಲ್ಲಿ ಚಲಿಸುತ್ತಿರುವಾಗ ನೀರಿನ ಹರಿವು ಹೆಚ್ಚಾಗಿದ್ದು ಸ್ಕೂಟಿ ಸಮೇತ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋದರು.

ಇದನ್ನು ಕಂಡ ವಿಪತ್ತು ನಿರ್ವಹಣಾ ತಂಡದ ಯಶೋಧರ ಹಾಗೂ ಸದಸ್ಯರು ಕೂಡಲೇ ಕಾರ್ಯಪ್ರವೃತ್ತರಾಗಿ ಸ್ಕೂಟಿ ಚಾಲಕನನ್ನು ಬಚಾವ್ ಮಾಡಿದ್ದು,ಸ್ಕೂಟಿಯನ್ನು ಕೂಡಾ ಮೇಲಕ್ಕೆ ಎತ್ತಿದ್ದಾರೆ.ಅಲ್ಲೇ ಪಕ್ಕದಲ್ಲಿ ದೊಡ್ಡದೊಂದು ನದಿ ಹರಿಯುತ್ತಿದ್ದರಿಂದ ಸ್ವಲ್ಪ ಯಾಮಾರಿದ್ದರೂ ಸ್ಕೂಟಿ ಚಾಲಕನನ್ನು ಬದುಕಿಸಲು ಸಾಧ್ಯವಾಗುತ್ತಿರಲಿಲ್ಲ,ಸದ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದ್ದು, ತಂಡದ ಕಾರ್ಯಕ್ಕೆ ಸಾಮಾಜಿಕ ಜಾಲತಾಣ ಸಹಿತ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.ಸ್ಕೂಟಿ ನಿಡ್ಲೆ ಮೂಲದ ವ್ಯಕ್ತಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದ್ದು, ಈ ದಿನ ನನ್ನ ಮರುಜನ್ಮವೇ ಸರಿ ಎಂದು ಹೇಳುತ್ತಾ ಸ್ಕೂಟಿ ಚಾಲಕ ಭಾವುಕರಾಗಿ ವಿಪತ್ತು ನಿರ್ವಹಣಾ ತಂಡಕ್ಕೆ ಧನ್ಯವಾದ ಸಲ್ಲಿಸಿದರು.

Leave A Reply

Your email address will not be published.