ಕೋಟ್ಯಾಂತರ ರೂ ವಂಚನೆ ಮಗಳ ವಿರುದ್ದ ದೂರು ನೀಡಿದ ತಾಯಿ

ಬೆಂಗಳೂರು: ಕೋಟ್ಯಂತರ ರೂ. ಚಿನ್ನಾಭರಣ ಹಾಗೂ ವಜ್ರ ವಂಚಿಸಿರುವ ಬಗ್ಗೆ ತಾಯಿಯೊಬ್ಬರು ಜೆ.ಪಿ.ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೆ.ಪಿ. ನಗರದ ವಿಜಯಲಕ್ಷ್ಮಿ (69) ಎಂಬುವರು ಪುತ್ರಿ ತೇಜಾವಂತಿ ವಿರುದ್ಧ 4 ಕೋಟಿ ಮೌಲ್ಯದ ಚಿನ್ನಾಭರಣ ವಂಚಿಸಿರುವುದಾಗಿ ದೂರು ನೀಡಿದ್ದಾರೆ.

ಜೆ.ಪಿ. ನಗರದ 3ನೇ ಹಂತದಲ್ಲಿ ವಿಜಯಲಕ್ಷ್ಮಿ ವಾಸವಿದ್ದು ಹಿಫ್ ರೀಪ್ಲೇಸ್‌ಮೆಂಟ್‌ ಚಿಕಿತ್ಸೆಗೆ ಒಳಾಗಾಗಿ ವಿಶ್ರಾಂತಿಯಲ್ಲಿದ್ದರು. ಈ ವೇಳೆ ಪುತ್ರಿ ತೇಜಾವಂತಿ ಯೋಗಕ್ಷೇಮ ನೋಡಿಕೊಳ್ಳಲು ಮನೆಗೆ ಬರುತ್ತಿದ್ದಳು. ಈಕೆಗೆ ವಿಚ್ಛೇದನವಾಗಿದ್ದರಿಂದ ಹೆಚ್ಚು ಸಮಯ ಜತೆಯಲ್ಲೇ ಇರುತ್ತಿದ್ದಳು.

ನಾನು 7.5 ಕೆ.ಜಿ. ತೂಕದ ಚಿನ್ನಾ ಭರಣ ಹಾಗೂ ವಜ್ರವನ್ನು ಖರೀದಿಸಿ ಮನೆಯಲ್ಲಿ ಇಟ್ಟಿದ್ದೆ. ಮನೆಗೆ ಬರುತ್ತಿದ್ದ ತೇಜಾವಂತಿ ಒಡವೆಗಳನ್ನು ನೋಡಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟರೆ ಸುರಕ್ಷಿತವಾಗಿರುತ್ತದೆ ಎಂದು ಹೇಳಿ ನಂಬಿಸಿ ಬ್ಯಾಂಕ್‌ನಲ್ಲಿ ಇಡುವಂತೆ ಒತ್ತಾಯಿಸಿ ಬ್ಯಾಂಕ್‌ನಲ್ಲಿ ಒಡವೆ ಇಡುವುದಾಗಿ ಹೇಳಿ ಒಡವೆ ತೆಗೆದುಕೊಂಡು ಹೋಗಿದ್ದು, ಇದೀಗ ವಾಪಸ್‌ ಕೇಳಿದರೆ ನೀಡುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ

Leave A Reply

Your email address will not be published.