ಯಾದಗಿರಿಯಲ್ಲಿ ಆಂತರಿಕ ಅಂಕದ ಆಮಿಷವೊಡ್ಡಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಾಗಿದ ಕಾಮುಕ ಶಿಕ್ಷಕ!!

ಶಿಕ್ಷಣವನ್ನು ನೀಡಬೇಕಾದ ಶಿಕ್ಷಕನೇ ನೈತಿಕ ಮೌಲ್ಯ ಮರೆತು ತನ್ನ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಾಗಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ: ಕಿತ್ತೂರು ರಾಣಿಚೆನ್ನಮ್ಮಶಾಲೆ ವಿದ್ಯಾರ್ಥಿನಿಯರು ಕಾಮುಕ ಶಿಕ್ಷಕನ ಕಾಟಕ್ಕೆ ಬೇಸತ್ತಿದ್ದಾರೆ.ವಿದ್ಯಾರ್ಥಿನಿಯರು ಭಯದಲ್ಲೇ ವ್ಯಾಸಂಗ ಮಾಡುವಂತಾಗಿದೆ. ಮಕ್ಕಳಿಗೆ ಪಾಠ ಮಾಡಿ ಜ್ಞಾನ ನೀಡಬೇಕಾದ ಶಿಕ್ಷಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಯಾದಗಿರಿ ತಾಲೂಕಿನ ಮುಂಡರಗಿ ಗ್ರಾಮದ ಹೊರಭಾಗದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮುಖ್ಯ ಗುರುಗಳಾದ ಹಯ್ಯಾಳಪ್ಪ ಜಾಗೀರದಾರ ವಿರುದ್ಧ ಮಹಿಳಾ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜ್ಞಾನ ವಿಷಯದ ಶಿಕ್ಷಕನಾದ ಹಯ್ಯಾಳಪ್ಪ ಜಾಗೀರದಾರ ಮಕ್ಕಳಿಗೆ ಶಿಕ್ಷಣ ಒದಗಿಸುವ ಕಾರ್ಯ ಮಾಡದೆ, ಹೆಚ್ಚು ಅಂತರಿಕ ಅಂಕಗಳು ನೀಡಲಾಗುತ್ತದೆಂದು ವಿದ್ಯಾರ್ಥಿನಿಯರಿಗೆ ಅಮಿಷವೊಡ್ಡಿ ವಿದ್ಯಾರ್ಥಿನಿಯರ ಕೈ ಹಿಡಿದು ಎಳೆದಾಡಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ ಬಗ್ಗೆ ಮಹಿಳಾ ಪೊಲೀಸ ಠಾಣೆಯಲ್ಲಿ ಪೊಸ್ಕೊ ಕಾಯ್ದೆಯಡಿ ದೂರು ದಾಖಲಿಸಲಾಗಿದೆ. ಹಯ್ಯಾಳಪ್ಪ ಜಾಗೀರದಾರನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಇದೆ ನವೆಂಬರ್ 1 ರಾಜ್ಯೋತ್ಸವ ದಿನವೇ ವಿದ್ಯಾರ್ಥಿನಿಯರು ವಸತಿ ಶಾಲೆಯಲ್ಲಿ ಎಚ್.ಎಂ ಹಯ್ಯಾಳಪ್ಪ ವಿರುದ್ಧ ಕ್ರಮಕೈಗೊಳ್ಳಲು ಹಾಗೂ ವಿವಿಧ ಬೇಡಿಕೆಗೆ ಒತ್ತಾಯಿಸಿ ವಸತಿ ಶಾಲೆಯಿಂದ ಜಿಲ್ಲಾಧಿಕಾರಿ ಕಚೇರಿವರಗೆ 10 ಕಿಮಿ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿನಿಯರ ಪ್ರತಿಭಟನೆಯಿಂದ ಖುದ್ದು ಜಿಲ್ಲಾಧಿಕಾರಿ ಡಾ.ಆರ್.ರಾಗಾಪ್ರಿಯಾ ಅವರು ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದರು.ಈ ವೇಳೆ ‌ಕೂಡ ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯ ನೀಡುವ ಬಗ್ಗೆ ಜಿಲ್ಲಾಧಿಕಾರಿ ಬಳಿ ನೋವು ತೊಡಿಕೊಂಡಿದ್ದಾರೆ

.ಕಾಮುಕ ಶಿಕ್ಷಕನ ವಿರುದ್ಧ ಕೇಸ್​ ದಾಖಲು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ 10 ದಿನಗಳ ನಂತರ ಶಿಕ್ಷಕ ಹಯ್ಯಾಳಪ್ಪ ವಿರುದ್ಧ ಪೊಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಶಿಕ್ಷಕ ಹಯ್ಯಾಳಪ್ಪ ರಜೆ ಪಡೆದಿದ್ದರು. ಪ್ರಾಂಶುಪಾಲ ವಿರುದ್ಧ ವಿದ್ಯಾರ್ಥಿನಿಯರು ನೀಡಿರುವ ಲೈಂಗಿಕ ಕಿರುಕುಳದ ದೂರಿನ ಸತ್ಯಾಸತ್ಯತೆ ಪರಿಶೀಲನೆ ಮಾಡಿ ಕ್ರಮಕೈಗೊಳ್ಳಲು ಜಿಲ್ಲಾ ಸಮಾಜ‌ ಕಲ್ಯಾಣ ಇಲಾಖೆ ಉಪನಿರ್ದೇಶಕ ಅವರು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗೆ ಕೂಡ ಪತ್ರ ಬರೆಯಲಾಗಿದೆ.ಪತ್ರ ಬರೆದ ನಂತರ ನಿನ್ನೆ ಹಯ್ಯಾಳಪ್ಪ ವಿರುದ್ಧ ಮಹಿಳಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ರೀತಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕೂಡ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ ವೆಸಗಿರುವದು ಬೆಳಕಿಗೆ ಬಂದಿದ್ದು ಈ ಕುರಿತಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಖುದ್ದಾಗಿ ಭೇಟಿ ನೀಡಿ ವರದಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಸಲ್ಲಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ. ವಸತಿ ಶಾಲೆಯ ಶಿಕ್ಷಕ ಹಯ್ಯಾಳಪ್ಪ ನ ನಡೆತೆಯಿಂದ ವಿದ್ಯಾರ್ಥಿಗಳು ಆತಂಕದಲ್ಲಿ ಅಭ್ಯಾಸ ಮಾಡುವಂತಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ.

Leave A Reply

Your email address will not be published.