ಸರ್ಕಾರಿ ಬಸ್ ಪ್ರಯಾಣದ ವೇಳೆ ಮೊಬೈಲ್ ನಲ್ಲಿ ಜೋರಾಗಿ ಮಾತನಾಡಿದರೆ ದಂಡ ಫಿಕ್ಸ್ !! | ಜೋರಾಗಿ ಹಾಡು ಹಾಕಿದರೆ ಪ್ರಯಾಣದ ಮಧ್ಯದಲ್ಲೇ ಬಸ್ಸಿಂದ ಗೇಟ್ ಪಾಸ್

ಇನ್ನು ಮುಂದೆ ಸರ್ಕಾರಿ ಬಸ್ ಪ್ರಯಾಣದ ವೇಳೆ ಮೊಬೈಲ್ ಬಳಸಿ ಜೋರಾಗಿ ಮಾತನಾಡುವಂತಿಲ್ಲ. ಬಸ್ ಪ್ರಯಾಣದ ವೇಳೆ ಮೊಬೈಲ್‌ನಲ್ಲಿ ಜೋರಾಗಿ ಮಾತನಾಡಿ ಕಿರಿಕಿರಿ ಉಂಟು ಮಾಡಿದರೆ ದಂಡ ಬೀಳೋದು ಗ್ಯಾರೆಂಟಿ!

ಹೌದು, ಸರ್ಕಾರಿ ಬಸ್ ಪ್ರಯಾಣದ ವೇಳೆ ಮೊಬೈಲ್ ಫೋನ್ ಬಳಿಸಿ ಪ್ರಯಾಣಿಕರು ಮಾತನಾಡುವುದನ್ನು ನಿಷೇಧಿಸಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದಾರೆ. ಅಚ್ಚರಿ ಏನೆಂದರೆ, ಪ್ರಯಾಣದ ವೇಳೆ ಹಾಡು, ಸಿನಿಮಾ ಮುಂತಾದವುಗಳನ್ನು ಜೋರಾಗಿ ಹಾಕುವಂತಿಲ್ಲ. ಒಂದು ವೇಳೆ ಹಾಕಿದರೆ ಮೊದಲು ಬಸ್ ನಿರ್ವಾಹಕ ಪ್ರಯಾಣಕನಲ್ಲಿ ಮನವಿ ಮಾಡಿಕೊಳ್ಳಬೇಕು. ಮನವಿ ಕಡೆಗಣಿಸಿದರೆ ಬಸ್ ಅರ್ಧಕ್ಕೆ ನಿಲ್ಲಿಸಿ ಪ್ರಯಾಣಿಕರನ್ನು ಅಲ್ಲೇ ಇಳಿಸಿ ಮುಂದುವರೆಯಬೇಕು.

ಈ ಬಗ್ಗೆ ಏನಾದರು ಸಮಸ್ಯೆಗಳು ಎದುರಾದರೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ತಿಳಿಸಬೇಕು. ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1989ರ ನಿಯಮ 94(1)V ಪ್ರಕಾರ ಇದು ಕಾನೂನು ಬಾಹಿರವಾಗಿರುವುದರಿಂದ ಬಸ್‌ಗಳಲ್ಲಿ ಜೋರಾಗಿ ಶಬ್ದ ಉಂಟು ಮಾಡಿ ಮೊಬೈಲ್ ಬಳಸುವುದಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದರಿಂದ ಶಬ್ದಮಾಲಿನ್ಯ ಉಂಟಾಗುವುದರ ಜೊತೆಗೆ ಪ್ರಯಾಣಿಕರಿಗೂ ಕಿರಿಕಿರಿ ಉಂಟಾಗುತ್ತಿರುವ ಬಗ್ಗೆ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಈ ಬಗ್ಗೆ ಸುತ್ತೋಲೆ ಹೊರಡಿಸಿ ಆದೇಶಿಸಿದೆ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.