ಚಳಿಗಾಲದಲ್ಲಿ ಕಾಡುವ ಶೀತ ಸಂಬಂಧಿ ಕಾಯಿಲೆ ಪರಿಹಾರವೇನು? ಇಲ್ಲಿದೆ ಕೆಲವು ಸಲಹೆಗಳು

ಸಾಮಾನ್ಯ ಶೀತಕ್ಕೆ ಶ್ವಾಸೇಂದ್ರಿಯದ ಸೋಂಕು ಕಾರಣ. ಇದು ಮುಖ್ಯವಾಗಿ ಮಕ್ಕಳು, ವಯಸ್ಸಾದವರು ಮತ್ತು ಇತರ ರೋಗನಿರೋಧಕ ಶಕ್ತಿ ಇಲ್ಲದ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ರೋಗಲಕ್ಷಣಗಳಲ್ಲಿ ಗಂಟಲು ಕೆರೆತ, ಕಫದೊಂದಿಗೆ ಅಥವಾ ಕಫ ಇಲ್ಲದೆ ಕೆಮ್ಮು, ಮೂಗು ಸೋರುವುದು, ಸೀನು, ಕಣ್ಣುಗಳಲ್ಲಿ ನೀರು, ತಲೆನೋವು ಮತ್ತು ಸಣ್ಣ ಜ್ವರ ಸೇರಿವೆಚಳಿಗಾಲ ಮತ್ತು ಮಳೆಗಾಲದಲ್ಲಿ ನಮ್ಮ ದೇಹ ವಿವಿಧ ಸೋಂಕುಗಳಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಜನವರಿ ಮಧ್ಯದಿಂದ ಮಾರ್ಚ್ ಮಧ್ಯದವರೆಗೆ ಇರುವ ಶೀತ ಗಾಳಿ ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ.ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗಗಳು:1) ಸಾಮಾನ್ಯ ಶೀತ: ಸಾಮಾನ್ಯ ಶೀತಕ್ಕೆ ಶ್ವಾಸೇಂದ್ರಿಯದ ಸೋಂಕು ಕಾರಣ. ಇದು ಮುಖ್ಯವಾಗಿ ಮಕ್ಕಳು, ವಯಸ್ಸಾದವರು ಮತ್ತು ಇತರ ರೋಗನಿರೋಧಕ ಶಕ್ತಿ ಇಲ್ಲದ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ರೋಗಲಕ್ಷಣಗಳಲ್ಲಿ ಗಂಟಲು ಕೆರೆತ, ಕಫದೊಂದಿಗೆ ಅಥವಾ ಕಫ ಇಲ್ಲದೆ ಕೆಮ್ಮು, ಮೂಗು ಸೋರುವುದು, ಸೀನು, ಕಣ್ಣುಗಳಲ್ಲಿ ನೀರು, ತಲೆನೋವು ಮತ್ತು ಸಣ್ಣ ಜ್ವರ ಸೇರಿವೆ.2) ಸ್ಟೊಮಕ್ ಫ್ಲೂ: ಚಳಿಗಾಲದಲ್ಲಿ ನೊರೊವೈರಸ್‌ನಿಂದ ಬರುವ ಈ ಜ್ವರ ಬೇಗನೆ ಹರಡುತ್ತದೆ. ಇದು ಆಹಾರ ಮತ್ತು ಪಾನೀಯಗಳ ಮೂಲಕ ಸುಲಭವಾಗಿ ಹರಡುತ್ತದೆ. ರೋಗಲಕ್ಷಣಗಳು ವಾಕರಿಕೆ, ವಾಂತಿ, ನೀರಿನಂಶದ ಅತಿಸಾರ ಮತ್ತು ಹೊಟ್ಟೆ ಸೆಳೆತವನ್ನು ಒಳಗೊಂಡಿವೆ. ಶೀತ, ತಲೆನೋವು, ಆಯಾಸ ಮತ್ತು ಸ್ನಾಯು ನೋವುಗಳು ಸಹ ಬರಬಹುದು.3) ಒಣ ಚರ್ಮ: ಶುಷ್ಕ ಚರ್ಮವು ಸಾಮಾನ್ಯವಾಗಿ ಚಳಿಗಾಲದಲ್ಲಿ ಪರಿಸರದ ತೇವಾಂಶವು ತುಂಬಾ ಕಡಿಮೆಯಾದಾಗ ಹದಗೆಡುತ್ತದೆ. ಶೀತ ಮತ್ತು ಶುಷ್ಕ ಗಾಳಿಯಿಂದಾಗಿ ಚರ್ಮದ ನೀರಿನ ಅಂಶ ತ್ವರಿತವಾಗಿ ಆವಿಯಾಗಿ, ಚರ್ಮವನ್ನು ಶುಷ್ಕ ಮತ್ತು ಬಿಗಿಯಾಗಿಸುತ್ತದೆ.4) ಅಸ್ತಮಾ: ಆಸ್ತಮಾ ಎಂದರೆ ಶ್ವಾಸನಾಳವು ಕಿರಿದಾಗುವ ಸ್ಥಿತಿಯಾಗಿದ್ದು, ಇದು ಉಸಿರಾಟದ ತೊಂದರೆ, ಕೆಮ್ಮು ಮತ್ತು ಉಬ್ಬಸಕ್ಕೆ ಕಾರಣವಾಗುತ್ತದೆ. ಚಳಿಗಾಲ ಶ್ವಾಸನಾಳವನ್ನು ಇನ್ನಷ್ಟು ಸಂಕುಚಿತಗೊಳಿಸುತ್ತದೆ.5) ಫ್ಲೂ: ಫ್ಲೂ ಅನ್ನು ಸಾಮಾನ್ಯವಾಗಿ ನೆಗಡಿ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ. ಆದರೆ ಎರಡೂ ಬೇರೆ ಬೇರೆ. ಇದು ಸಾಮಾನ್ಯ ವೈರಲ್ ಸೋಂಕಾಗಿದ್ದು, ಶ್ವಾಸಕೋಶ, ಗಂಟಲು ಮತ್ತು ಮೂಗಿನ ಮೇಲೆ ಪರಿಣಾಮ ಬೀರುತ್ತದೆ. ಫ್ಲೂ ಸಾಮಾನ್ಯವಾಗಿ ಕಿರಿಯರು ಮತ್ತು ವಯಸ್ಸಾದವರ ಮೇಲೆ ಪರಿಣಾಮ ಬೀರುತ್ತದೆ. ರೋಗಲಕ್ಷಣಗಳಲ್ಲಿ ಅಧಿಕ ಜ್ವರ, ಶೀತ, ನೋಯುತ್ತಿರುವ ಗಂಟಲು, ವಾಕರಿಕೆ, ಮತ್ತು ತಲೆನೋವು ಒಳಗೊಂಡಿವೆ.ಚಳಿಗಾಲದ ಈ ಕಾಯಿಲೆಗಳಿಗೆ ಸಲಹೆಗಳು:ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಿ: ಉತ್ತಮ ವೈಯಕ್ತಿಕ ಸ್ವಚ್ಛತೆಯಿಂದ ನೆಗಡಿ ಮತ್ತು ಜ್ವರದಂತಹ ಸಾಂಕ್ರಾಮಿಕ ರೋಗಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಪ್ರಮುಖ ಮಾರ್ಗ. ನಿಮ್ಮಿಂದ ಇನ್ನೊಬ್ಬ ವ್ಯಕ್ತಿಗೆ ಸೋಂಕು ಹರಡುವುದನ್ನು ತಡೆಯಲು ಇದು ಸಹಾಯ ಮಾಡುತ್ತದೆ.ಯೋಗ ಕ್ರಿಯೆಗಳು: ಜಲ ನೇತಿಯಂತಹ ಯೋಗ ಕ್ರಿಯೆಗಳನ್ನು ಅಭ್ಯಾಸ ಮಾಡುವುದರಿಂದ ಶ್ವಾಸಕೋಶ ಸ್ವಚ್ಛವಾಗುತ್ತದೆ. ಮತ್ತು ಯಾವುದೇ ಅಡಚಣೆಯಿಲ್ಲದೆ ಸರಿಯಾದ ಗಾಳಿಯ ಓಡಾಟಕ್ಕೆ ಸಹಾಯ ಮಾಡುತ್ತದೆ. ಹೀಗಾಗಿ ಇದು ಆಸ್ತಮಾ ರೋಗಿಗಳಿಗೆ ಹೆಚ್ಚು ಅನುಕೂಲ. ಸರಿಯಾದ ಯೋಗ ತರಬೇತುದಾರರ ಮಾರ್ಗದರ್ಶನದಲ್ಲಿ ಇದನ್ನು ಅಭ್ಯಾಸ ಮಾಡಬೇಕು. ತಲೆನೋವು ತಪ್ಪಿಸಲು ಅಭ್ಯಾಸದ ನಂತರ ಮೂಗಿನ ಹೊಳ್ಳೆಯನ್ನು ಸರಿಯಾಗಿ ಊದಲು ಎಚ್ಚರಿಕೆ ತೆಗೆದುಕೊಳ್ಳಬೇಕು.ಗಿಡಮೂಲಿಕೆಗಳ ಪರಿಹಾರಗಳು:ತುಳಸಿ: ತುಳಸಿ ಉತ್ತಮ ನಂಜುನಿರೋಧಕ ಮತ್ತು ಆ್ಯಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಸಾಮಾನ್ಯ ಶೀತ ಮತ್ತು ಜ್ವರದಂತಹ ವೈರಲ್ ಸೋಂಕುಗಳಿಗೆ ಹೆಚ್ಚು ಸಹಾಯಕ. ಇದು ಕಫವನ್ನು ಕರಗಿಸುತ್ತದೆ.ಅರಿಶಿನ: ಅರಿಶಿನವು ಉತ್ತಮ ಆ್ಯಂಟಿವೈರಲ್ ಸಾಮರ್ಥ್ಯ ಹೊಂದಿದೆ ಮತ್ತು ಇನ್ಫ್ಲುಯೆನ್ಝಾ ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.ಆಹಾರ ಕ್ರಮಗಳುವಿಟಮಿನ್ ಸಿ ಸಮೃದ್ಧ ಆಹಾರಗಳು: ಅಂಗಾಂಶಗಳ ಪುನಶ್ಚೇತನಕ್ಕೆ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರ ತೆಗೆದುಕೊಳ್ಳುವುದು ಅವಶ್ಯಕ. ಇದು ಬಿಳಿ ರಕ್ತ ಕಣಗಳ ಉತ್ಪಾದನೆ ಸುಧಾರಿಸಲು ಮತ್ತು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳಲ್ಲಿ ಆಮ್ಲಾ, ಸ್ಟ್ರಾಬೆರಿ, ಬ್ರೊಕೊಲಿ, ಬ್ರಸೆಲ್ ಮೊಗ್ಗುಗಳು, ಮೆಣಸು, ನಿಂಬೆ, ಕಿತ್ತಳೆ ಮುಂತಾದ ಸಿಟ್ರಸ್ ಹಣ್ಣುಗಳು ಸೇರಿವೆ.ಪ್ರೋಬಯಾಟಿಕ್‌ಗಳು: ಪ್ರೋಬಯಾಟಿಕ್‌ಗಳು ಶ್ವಾಸಕೋಶದ ಸೋಂಕುಗಳನ್ನು ತಡೆಗಟ್ಟುತ್ತದೆ. ಇವು ಮಜ್ಜಿಗೆ, ಹುದುಗಿಸಿದ ಅಕ್ಕಿ ನೀರು, ಉಪ್ಪಿನಕಾಯಿ ತರಕಾರಿಗಳಲ್ಲಿ ಹೇರಳವಾಗಿ ಸಿಗುತ್ತವೆ.ಹೈಡ್ರೇಟೆಡ್ ಆಗಿರಿ: ಸಾಕಷ್ಟು ಪ್ರಮಾಣದ ಬೆಚ್ಚಗಿನ ನೀರು ಕುಡಿಯುವುದರಿಂದ ಚರ್ಮದ ತೇವಾಂಶ ಉಳಿಸಿಕೊಳ್ಳಬಹುದು.ಬಿಸಿ ಸೂಪ್‌ಗಳು: ಚಳಿಗಾಲದಲ್ಲಿ ರೋಸ್ಮರಿ, ಓರೆಗಾನೊ, ಶುಂಠಿ, ಬೆಳ್ಳುಳ್ಳಿ, ಮೆಣಸು, ಜೀರಿಗೆ ಮುಂತಾದ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಬಳಸಿದ ಸೂಪ್‌ಗಳು ಹೆಚ್ಚು ಪ್ರಯೋಜನಕಾರಿ.ವ್ಯಾಯಾಮ: ನಮ್ಮ ದೇಹ ಸುಸ್ಥಿತಿಯಲ್ಲಿರಿಸಲು ವ್ಯಾಯಾಮ ಅತ್ಯಂತ ಮುಖ್ಯ. ದೇಹದ ಶಾಖ ಹೆಚ್ಚಿಸಲು ಮತ್ತು ಹೃದಯದ ಕೆಲಸ ಸುಧಾರಿಸಲು ಸಹಾಯ ಮಾಡುವ ಕಾರ್ಡಿಯೋ ಅಥವಾ ಯೋಗ ಅಭ್ಯಾಸಗಳಿಗೆ ನಾವು ಒತ್ತು ಕೊಡಬಹುದು.

Leave A Reply

Your email address will not be published.