ಅಂದು ಉಪೇಂದ್ರ ಜತೆ ಉಜ್ಜಾಡಿದ್ಲು, ಈಗ ಮತ್ತದೇ ಎಕ್ಸ್ ಕ್ಲೂಜಿವ್ ದೃಶ್ಯಗಳಲ್ಲಿ ಆಕೆ ಪ್ರತ್ಯಕ್ಷ | ‘ಮದ್ವೆ ಆದ್ಮೇಲೆ ಫಸ್ಟ್‌ನೈಟ್ ನಲ್ಲಿ ಎಲ್ರೂ ಏನ್ಮಾಡ್ತಾರೆ, ಅದೇ ನಾವೂ ಮಾಡಿದ್ದೀವಿ’ ಎಂದವಳ ಬಗ್ಗೆ…!

ಬೆಂಗಳೂರು: ರಚಿತಾ ರಾಮ್ ನಿಮಗೆ ಗೊತ್ತಲ್ಲ. ಅದೇ ಅವತ್ತು ‘ಐ ಲವ್ ಯೂ’ ಅನ್ನುತ್ತಾ ನಟ ಉಪೇಂದ್ರ ಹುಡುಗಿಯೊಬ್ಬಳನ್ನು ಬುಗುರಿ ಥರ ಆಡಿಸಿದ್ದರಲ್ಲ, ಅದೇ ಆ ಹುಡುಗಿಯ ಬರಿದು ಬೆನ್ನು, ಸೆರಗು ಸರಿಸಿದ ಸೊಂಟ ಸವರಿದ್ದನಲ್ಲ….ಮತ್ತೆ ಆಕೆ ಅದೇ ಭಂಗಿಯಲ್ಲಿ ಪ್ರತ್ಯಕ್ಷ !!

‘ಐ ಲವ್ ಯೂ’ ಸಿನಿಮಾದಲ್ಲಿ ನಟಿಸಿ ಒಂದು ಹಾಡಿನ ಕಾರಣಕ್ಕೆ ತೀರಾ ಗಮನ ಸೆಳೆದಿದ್ದ ನಟಿ ರಚಿತಾ ರಾಮ್ ಇದೀಗ ‘ಲವ್ ಯೂ ರಚ್ಚು’ ಸಿನಿಮಾದಲ್ಲೂ ಅಂಥದ್ದೇ ಕಾರಣಕ್ಕೆ ಟಾಕ್ ಆಫ್ ದ ಟೌನ್ ಎಂಬಂತೆ ಆಗಿದ್ದಾರೆ. ಅಷ್ಟಕ್ಕೂ ಹಾಗಾಗಲಿಕ್ಕೆ ಕಾರಣ ಮತ್ತಂಥದ್ದೇ ದೃಶ್ಯ ಹಾಗೂ ರಚಿತಾ ಮಾತು.

ಆದಿನ ಅಂತಹ ಪಾತ್ರದಲ್ಲಿ ಕಾಣಿಸಿಕೊಂಡು ಆಕೆಯ ಅಭಿಮಾನಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಳು ರಚಿತಾ. ಅಷ್ಟೇ ಅಲ್ಲದೆ ಉಪೇಂದ್ರ ಪತ್ನಿ ಪ್ರಿಯಾಂಕಾ ಗರಂ ಆಗಿ ರಚಿತಾಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆಕೆಯ ತಂದೆ ಕೂಡಾ ಬೇಸರ ವ್ಯಕ್ತಪಡಿಸಿದ್ದರಂತೆ. ಅದಾದ ನಂತರ ಮಾಧ್ಯಮಗಳ ಮುಂದೆ ಬಂದು ಗೊಳೋ ಎಂದು ಕಣ್ಣೀರ ಕೋಡಿ ಹರಿಸಿ, ಮುಂದೆ ಅಂತಹ ಪಾತ್ರ ಮಾಡುವುದಿಲ್ಲ ಎಂದು ಶಪಥ ಮಾಡಿದ್ದಳು ರಚಿತಾ ರಾಮ್. ಆದರೆ ಈಗ ಮತ್ತೆ ಇನ್ನಷ್ಟು explosive ಪಾತ್ರದಲ್ಲಿ ಭಾಗವಹಿಸಿದ್ದಾಳೆ ರಚಿತಾ. ರಚ್ಚುವನ್ನು ತೆರೆಯ ಮೇಲೆ ರಚ್ಚಾ ಪಚ್ಚೆ ಉಜ್ಜಾಡಿಸಲಾಗಿದೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

‘ಐ ಲವ್ ಯೂ’ ಚಿತ್ರದ ಹಾಡಿನಲ್ಲಿ ಉಪೇಂದ್ರ ಜತೆ ಮಾದಕವಾಗಿ ಕಾಣಿಸಿಕೊಂಡಿದ್ದ ರಚಿತಾ ರಾಮ್ ನಂತರ ನಾನು ಅಂಥ ದೃಶ್ಯಗಳಲ್ಲಿ ನಟಿಸಬಾರದಿತ್ತು, ಇನ್ನು ಮುಂದೆ ಆ ರೀತಿ ನಟಿಸುವುದಿಲ್ಲ ಎಂದು ಕಣ್ಣೀರು ಹಾಕಿ ಹೇಳಿಕೊಂಡಿದ್ದರು. ಈಗ ‘ಲವ್ ಯೂ ರಚ್ಚು’ ಚಿತ್ರದಲ್ಲೂ ಹಾಗೆ ಕಾಣಿಸಿಕೊಂಡಿದ್ದರಿಂದ ಅವರನ್ನು ಸುದ್ದಿಗಾರರು ಪ್ರಶ್ನೆ ಮಾಡಿದ್ದರು.

ಅಂಥ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅತ್ತಿದ್ದ ನೀವು ಮತ್ತೆ ಅಂಥದ್ದೇ ದೃಶ್ಯಗಳಲ್ಲಿ ಅಭಿನಯಿಸಿದ್ದೇಕೆ? ಎಂಬ ಪ್ರಶ್ನೆಗೆ ಅವರು ನೀಡಿರುವ ಉತ್ತರ ಎಲ್ಲರನ್ನೂ ಹೌ ಹಾರಿಸುವಂತೆ ಮಾಡಿದೆ.

‘ಮದ್ದೆ ಆದ್ಮಲೆ ಫಸ್ಟ್‌ನೈ ಎಲ್ಲೂ ಏನ್ಮಾಡ್ತಾರೆ, ಅದೇ ನಾವೂ ಮಾಡಿದ್ದೀವಿ’ ಎಂದ ರಚಿತಾ ತಾವು ಮಾದಕವಾಗಿ ಕಾಣಿಸಿಕೊಂಡಿರುವುದಕ್ಕೆ ಸಮಜಾಯಿಷಿ ನೀಡಿದ್ದಾರೆ. ‘ಸುಮೆ ಮಾಡಲ್ಲ, ಮಾಡಿದ್ದಿ ಅಂದ್ರೆ ಅದ್ರೂ ಒಂದು ರೀಸನ್ ಇರುತ್ತೆ, ಜಾಸ್ತಿ ಡಿಟೇಲ್ಸ್ ಹೋಗಿಲ್ಲ, ಬೇಸಿಕ್ ಏನಿದ್ಯೋ ಅಷ್ಟು ಮಾಡಿದ್ವಿ’ .ಅಷ್ಟೇ ಅಲ್ಲದೆ ಈಗ ಆಕೆ ತೀರಾ ಕಾನ್ಫಿಡೆನ್ಸ್ ಹೊಂದಿದ್ದು, ” ಫಸ್ಟ್ ನೈಟ್ ನಲ್ಲಿ ಯಾರೆಲ್ಲಾ ಏನು ಮಾಡುತ್ತಾರೋ ಅದನ್ನೇ ನಾನು ಮಾಡಿದ್ದು ” ಎಂದು ಜಸ್ತಿಫೈಕೇಶನ್ ನೀಡಿದ್ದಾಳೆ. ಅಲ್ಲಿಗೆ ಭಾರದ ಸೂಟ್ ಕೇಸ್ ಆಕೆಯ ತಿಜೋರಿ ಜೊತೆ ಸೇರಿದ್ದು ಕನ್ಫರ್ಮ್ ಆಗಿದೆ. ದುಡ್ಡು ಮುಂದೆ ನಡೆದರೆ, ಎಲ್ಲಾ ದಾರಿಗಳೂ ಓಪನ್ ಆಗತ್ತೆ ಅನ್ನೋ ಮಾತು ಸತ್ಯ ಆಗಿದೆ.

ಗುರು ದೇಶಪಾಂಡೆ ನಿರ್ಮಾಣ, ಶಂಕರ್ ಎಸ್. ರಾಜ್ ನಿರ್ದೇಶನದಲ್ಲಿ ಅಜೇಯ್ ರಾವ್ ಹಾಗೂ ರಚಿತಾ ರಾಮ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಲವ್ ಯೂ ರಚ್ಚು’ ಚಿತ್ರದ ಮುದ್ದು ನೀನೇ.. ಎಂಬ ಹಾಡು ನಿನ್ನೆಯಷ್ಟೇ ಬಿಡುಗಡೆ ಆಗಿದೆ. ಈ ಹಾಡಿನಲ್ಲಿ ಅಜೇಯ್ ರಾವ್ ಜತೆ ಮೈ ಕಾಣಿಸುವಂತೆ ಮಾದಕವಾಗಿ ಕಾಣಿಸಿಕೊಂಡಿರುವ ರಚಿತಾ ರಾಮ್ ಪ್ರಶ್ನೆ ಎದುರಿಸಬೇಕಾಗಿತ್ತು. ಈಗ ಅದಕ್ಕೆ ಉತ್ತರಿಸಿ ತಲೆ ಕೊಡವಿ ಮುಂದೆ ಸಾಗಿದ್ದಾಳೆ ರಚಿತಾ ರಾಮ್ !

Leave a Reply

error: Content is protected !!
Scroll to Top
%d bloggers like this: