ಸುಳ್ಯ : ಮನೆಯ ಕೆರೆಯಲ್ಲಿ ಕಂಡುಬಂದ ಮೊಸಳೆ, ಅರಣ್ಯ ಇಲಾಖೆ ಅಧಿಕಾರಿಗಳಿಂದ ಯಶಸ್ವಿ ಕಾರ್ಯಾಚರಣೆ ಮೂಲಕ ರಕ್ಷಣೆ

ಸುಳ್ಯ: ದೇವಚಳ್ಳ ಗ್ರಾಮದಲ್ಲಿರುವ ವ್ಯಕ್ತಿಯ ಮನೆಯ ಕೆರೆಯಲ್ಲಿ ಮೊಸಳೆಯೊಂದು ಕಂಡು ಬಂದಿದ್ದು,ಕೆರೆಯ ನೀರನ್ನು ಖಾಲಿ ಮಾಡುವ ಮೂಲಕ ಅರಣ್ಯ ಇಲಾಖೆಯವರು ಮೊಸಳೆಯನ್ನು ಬೇರೆಡೆಗೆ ಸ್ಥಳಾಂತರಿಸಿದ ಘಟನೆ ವರದಿಯಾಗಿದೆ.

ದೇವಚಳ್ಳ ಗ್ರಾಮದ ಬಾಲಕೃಷ್ಣ ದೇವ ಎಂಬವರ ತೋಟದ ಕೆರೆಯಲ್ಲಿ ಗುರುವಾರ ಮುಂಜಾನೆ
ಮೊಸಳೆಯೊಂದು ಪತ್ತೆಯಾಗಿತ್ತು. ಈ ಬಗ್ಗೆ ಮಾಹಿತಿ ದೊರೆತ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ತೆರಳಿದರು.ತೋಟದ ಕೆರೆಯಲ್ಲಿರುವ ಮೊಸಳೆಯಿಂದ ಅಪಾಯವನ್ನರಿತ ಅರಣ್ಯ ಇಲಾಖೆ ಮೊಸಳೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿ,ಕೆರೆಯ ನೀರು ಖಾಲಿ ಮಾಡಿ ಬಳ್ಳಿ ಮತ್ತು ಬಡಿಗೆಯ ಸಹಾಯದಿಂದ ಮೊಸಳೆಯನ್ನು ಹಿಡಿಯುವಲ್ಲಿ ಯಶಸ್ವಿಯಾದರು.

ಮೊಸಳೆಯನ್ನು ರೇಂಜರ್ ರವರ ನೇತೃತ್ವದಲ್ಲಿ ಬೇರೆಡಗೆ ಸಾಗಿಸಲಾಯಿತೆಂದು ತಿಳಿದು ಬಂದಿದೆ.ಕಾರ್ಯಾಚರಣೆ ಯಲ್ಲಿ ರೇಂಜರ್ ಗಿರೀಶ್, ಫಾರೆಸ್ಟರ್ ರವೀಂದ್ರ,ಗಾರ್ಡ್ ಲಿಖಿತ್, ಸಂಪಾಜೆ ಗಾಡ್೯ ಬಿ.ಜಿ.ಚಂದ್ರು, ಚಾಲಕ ಪುರುಷೋತ್ತಮ, ಸಿಬ್ಬಂದಿ ತೀರ್ಥರಾಮ ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ಸಹಕರಿಸಿದರು.

Leave A Reply

Your email address will not be published.