ಇನ್ನು ಮುಂದೆ ಚಾಲಕ ಮದ್ಯಪಾನ ಮಾಡಿ ಕಾರು ಏರಿದ್ರೆ ಕಾರು ಮುಂದಕ್ಕೆ ಚಲಿಸಲ್ಲ!! | ಸದ್ಯದಲ್ಲೇ ಅನುಷ್ಠಾನಕ್ಕೆ ಬರಲಿದೆಯಂತೆ ಈ ಅತ್ಯಾಧುನಿಕ ತಂತ್ರಜ್ಞಾನ

ಮದ್ಯಪಾನ ಮಾಡುತ್ತಾ ವಾಹನ ಚಾಲನೆ ಮಾಡುವುದು ಕಾನೂನು ಬಾಹಿರವಾಗಿದೆ. ಕುಡಿದು ವಾಹನ ಚಾಲನೆ ಮಾಡಿ ಅಪಘಾತ ನಡೆದು ಅದೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಂದ ಪ್ರತಿ ವರ್ಷ 10 ಸಾವಿರ ಮಂದಿ ಸಾವಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಪರಿಹಾರ ಹುಡುಕಲು ಇದೀಗ ಅಮೆರಿಕಾ ಮುಂದಾಗಿದೆ.

ಮದ್ಯಪಾನ ಮಾಡಿ ಕಾರು ಚಾಲನೆಯೇ ಮಾಡದಂತೆ ತಡೆಯುವ ಅತ್ಯಾಧುನಿಕ ತಂತ್ರಜ್ಞಾನವನ್ನು ಹುಡುಕುವಂತೆ ಆಟೋಮೊಬೈಲ್ ಕಂಪನಿಗಳಿಗೆ ತಾಕೀತು ಮಾಡಿದೆ. ಅಮೆರಿಕದ ಸಾರಿಗೆ ಇಲಾಖೆ ಅತ್ಯುತ್ತಮ ತಂತ್ರಜ್ಞಾನಗಳನ್ನು ಅವಲೋಕಿಸಿದ ಬಳಿಕ 2026ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇದರ ಫಲವಾಗಿ ಲಕ್ಷಾಂತರ ವಾಹನಗಳಲ್ಲಿ ಹೊಸದಾಗಿ ಉಪಕರಣ ಅಳವಡಿಸಬೇಕಾಗುತ್ತದೆ. ಭವಿಷ್ಯದಲ್ಲಿ ಉತ್ಪಾದನೆಯಾಗಬೇಕಾದ ವಾಹನಗಳಲ್ಲಿ ಈ ಉಪಕರಣ ಇರಬೇಕಾಗುತ್ತದೆ.

ಸಂಚಾರ ಸುರಕ್ಷತೆ ಹಾಗೂ ರಸ್ತೆ ಅಪಘಾತ ತಡೆಯುವ ಉದ್ದೇಶದಿಂದ 74 ಲಕ್ಷ ಕೋಟಿ ರೂಪಾಯಿ ಮೊತ್ತದ ಮೂಲಸೌಕರ್ಯ ಪ್ಯಾಕೇಜ್ ಅನ್ನು ಅಮೆರಿಕಾ ಅಂತಿಮಗೊಳಿಸುತ್ತಿದೆ. ಅಧ್ಯಕ್ಷ ಜೋ ಬೈಡೆನ್ ಅವರು ಶೀಘ್ರದಲ್ಲೆ ಇದಕ್ಕೆ ಅಂಕಿತ ಹಾಕುವ ನಿರೀಕ್ಷೆ ಇದೆ.

ಮದ್ಯ ಪ್ರಿಯರು ಕಾರು ಚಾಲನೆ ಮಾಡದಂತೆ ತಡೆಯಲು ವ್ಯವಸ್ಥೆಯೊಂದನ್ನು ಬಳಸಲಾಗುತ್ತಿದೆ. ವಾಹನ ಚಾಲೂ ಮಾಡುವ ಲಾಕ್‍ಗೆ ಬ್ರೀತ್ ಅನಲೈಸರ್ ಉಪಕರಣವನ್ನು ಅಳವಡಿಸಲಾಗಿರುತ್ತದೆ. ಕರ್ನಾಟಕದ ಪೊಲೀಸರು ಮದ್ಯ ಸೇವಿಸಿದವರನ್ನು ಪತ್ತೆ ಹಚ್ಚಲು ಬಳಸುತ್ತಿರುವಂತಹದ್ದೆ ಉಪಕರಣ ಇದಾಗಿದೆ. ಯಾವುದೇ ಚಾಲಕ ವಾಹನ ಏರಿದ ಕೂಡಲೇ ಕೊಳಾಯಿಯನ್ನು ಊದಬೇಕು. ಆತನ ರಕ್ತದಲ್ಲಿ ಹೆಚ್ಚಿನ ಅಂಶದ ಮದ್ಯ ಪತ್ತೆಯಾದರೆ ವಾಹನ ಚಾಲೂ ಆಗುವುದೇ ಇಲ್ಲ.

Leave A Reply

Your email address will not be published.